ಗೋ ಸಂರಕ್ಷಣೆ ಎಲ್ಲರ ಹೊಣೆ : ಬಿ.ಸಿ ರೋಡಿನಲ್ಲಿ ಪ್ರಸಾದ್ ಕುಮಾರ್ ರೈ ನಂದಿರಥ ಶೋಭಾಯಾತ್ರೆ

Published on

ಬಂಟ್ವಾಳ: ಹಿಂದು ಸಮಾಜ, ಸಂಸ್ಕೃತಿ ಮೇಲೆ ನಿರಂತರವಾಗಿ ಅಕ್ರಮಣಗಳಾಗುತ್ತಿದ್ದರೂ, ಇವೆಲ್ಲವನ್ನು ಹಿಂದು ಸಮಾಜ ಮೆಟ್ಟಿ ನಿಂತಿದೆ. ಇಂತಹ ಸನ್ನಿವೇಶದಲ್ಲಿ ಗೋ ಸಂರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದು ವಿಶ್ವ ಹಿಂದು ಪರಿಷತ್ತಿನ ಬಂಟ್ವಾಳ ತಾಲೂಕು ಘಟಕ ಅಧ್ಯಕ್ಷ ಪ್ರಸಾದ್ ಕುಮಾರ್ ರೈ ಹೇಳಿದರು.

ಗೋ ಸೇವಾ ಗತಿ ವಿಧಿ ಕರ್ನಾಟಕ, ರಾಧ ಸುರಭಿ ಗೋ ಮಂದಿರ, ರಾಷ್ಟ್ರೀಯ ಗೋ ಸೇವಾ ಸಂಸ್ಥಾನ್ ಟ್ರಸ್ಟ್ ನಂದಿ ರಥಯಾತ್ರೆ ಆಯೋಜನಾ ಸಮಿತಿ ಬಿ.ಸಿ.ರೋಡ್ ಸಮಿತಿ ವತಿಯಿಂದ ಶುಕ್ರವಾರ ರಾತ್ರಿ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಸ್ಥಾನ ವಠಾರದಲ್ಲಿ ಜರುಗಿದ ನಂದಿರಥ ಶೋಭಾಯಾತ್ರೆ, ವಿಷ್ಣು ಸಹಸ್ರ ನಾಮ ಪಾರಾಯಣ ಹಾಗೂ ಗೋಕಥೆ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ರಾಧಸುರಭೀ ಗೋ ಮಂದಿರದ ಸಂಚಾಲಕ ಭಕ್ತಿಭೂಷಣದಾಸ್ ಸ್ವಾಮೀಜಿ ಮಾತನಾಡಿದರು. ಶ್ರೀ ರಕ್ತೇಶ್ವರೀ ದೇವಸ್ಥಾನದ ಬ್ರಹ್ಮಕಲಶ ಸಮಿತಿ ಕಾರ್ಯಾಧ್ಯಕ್ಷ ಸಂಜೀವ ಪೂಜಾರಿ ಸಭಾಧ್ಯಕ್ಷತೆ ವಹಿಸಿದ್ದರು. ಶ್ರೀ ರಕ್ತೇಶ್ವರೀ ದೇವಳದ ಆಡಳಿತ ಸಮಿತಿ ಅಧ್ಯಕ್ಷ ಬಿ.ವಿಶ್ವನಾಥ, ಬಂಟ್ವಾಳ ತಾಲೂಕು ಆರ್‌ಎಸ್‌ಎಸ್ ಸಂಘ ಸಂಚಾಲಕ ಡಾ.ಬಾಲಕೃಷ್ಣ, ಗೋ ಸೇವಾ ಗತಿವಿಧಿ ಮಂಗಳೂರು ಸಂಚಾಲಕ ಗಂಗಾಧರ್, ಹಿಂಜಾವೇ ಮಂಗಳೂರು ಗ್ರಾಮಾಂತರ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಉಪಸ್ಥಿತರಿದ್ದರು.

ರಥಯಾತ್ರೆಯ ಬಿ.ಸಿ.ರೋಡ್ ಸಮಿತಿ ಸಂಚಾಲಕ ರಾಮದಾಸ ಬಂಟ್ವಾಳ ಸ್ವಾಗತಿಸಿದರು. ನಾಗೇಶ್ ವಂದಿಸಿದರು. ಸುಜಿತ್ ಕೊಟ್ಟಾರಿ ಕಾರ್ಯಕ್ರಮ ನಿರೂಪಿಸಿದರು. ನಂದಿ ರಥಯಾತ್ರೆಗೆ ಸಂಬಂಧಿಸಿದ ಸಂಗೀತ ರಚಿಸಿದ ಭಾಸ್ಕರ ಬಿ.ಸಿ.ರೋಡು ಅವರನ್ನು ಅಭಿನಂದಿಸಲಾಯಿತು. ಜಗದೀಶ್ ಹೊಳ್ಳ ವಿಷ್ಣು ಸಹಸ್ರನಾಮ ಪಠಿಸಿದರು.

ನಂದಿಯ ನಾಲ್ಕು ಕಾಲುಗಳು ಧರ್ಮದ ನಾಲ್ಕು ಕಂಬಗಳಿದ್ದಂತೆ. ನಂದಿ ಧರ್ಮದ ಪ್ರತೀಕವಾಗಿದ್ದು, ಗೋ ಉತ್ಪನ್ನಗಳನ್ನು ಬಳಸಿಕೊಂಡು ದೇಶಿಯ ತಳಿಗಳ ಸಂರಕ್ಷಣೆ ಮಾಡುವ ಮೂಲಕ ಗೋಮಾತೆಯನ್ನು ನಿತ್ಯ ನಿರಂತರ ಪೂಜಿಸೋಣ. ಭಕ್ತಿಭೂಷಣದಾಸ್ ಸ್ವಾಮೀಜಿ, ರಾಧಸುರಭೀ ಗೋ ಮಂದಿರದ ಸಂಚಾಲಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net