ಜಾನಿ ಮಾಸ್ಟರ್ ಕೇಸ್ ನಂತರ..ಮಲಯಾಳಂನಲ್ಲಿ ಹೇಮಾ ಕಮಿಟಿ ಬಳಿಕ.. ತೆಲುಗು ನಾಯಕಿಯರು ಕೂಡ ಕಾಸ್ಟಿಂಗ್ ಕೌಚ್ ಬಗ್ಗೆ ಮಾತನಾಡಿದ್ದಾರೆ. ಕನ್ನಡ ಚಿತ್ರರಂಗದಲ್ಲೂ ಈ ಬಗ್ಗೆ ತಿನಿಖೆಯಾಗಬೇಕೆಂದು ಹೆಸರಾಂತ ನಟ ನಟಿಯರು ಪತ್ರಕ್ಕೆ ಸಹಿ ಹಾಕಿ ಕಮಿಟಿ ರಚನೆಯಾಗಬೇಕೆಂದು ಸಿಎಂಗೂ ಸಂದೇಶವನ್ನ ರವಾನಿಸಿದ್ದಾರೆ.
ಚಿತ್ರರಂಗದಲ್ಲಿ ಕಾಸ್ಟಿಂಗ್ ಕೌಚ್ ಹೆಚ್ಚಿರುವುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಅದರಲ್ಲೂ ಮಲಯಾಳಂ ಚಿತ್ರರಂಗದಲ್ಲಿ ಈ ವಿಷಯ ಸಿಕ್ಕಾಪಟ್ಟೆ ಸುದ್ದಿಯಾಗಿತ್ತು. ಸದ್ಯ ಈ ಕಿರುತೆರೆ ನಟಿ ಹಾಗು ಬಿಗ್ಬಾಸ್ ಖ್ಯಾತಿಯ ನಮ್ರತಾ ಗೌಡ ಕಾಸ್ಟಿಂಗ್ ಕೌಚ್ ಕುರಿತಂತೆ ಸ್ಫೋಟಕ ಮಾಹಿತಿಯನ್ನ ಹಂಚಿಕೊಂಡಿದ್ದಾರೆ.
ಕಾಸ್ಟಿಂಗ್ ಕೌಚ್ ಕುರಿತಂತೆ ತಮಗಾದ ಅನುಭವವನ್ನ ಹಂಚಿಕೊಳ್ಳೋಕೆ ಶುರು ಮಾಡಿದ ಬಿಗ್ಬಾಸ್ ಮತ್ತು ನಾಗಿಣಿ ಸೀರಿಯಲ್ ಖ್ಯಾತಿಯ ನಮ್ರತಾ ಗೌಡ, ಇತ್ತೀಚೆಗಷ್ಟು ನಾನು ಕಮಿಟ್ಮೆಂಟ್ಗೆ ಒಪ್ಪಿಕೊಳ್ಳುತ್ತೇನೆ ಎಂದು ಮತ್ತಷ್ಟು ಜನರೊಂದಿಗೆ ನನ್ನ ಹೆಸರನ್ನ ಸೇರಿಸಿ ಯೂಟ್ಯೂಬ್ನಲ್ಲಿ ವಿಡಿಯೋ ವೈರಲ್ ಮಾಡಲಾಗಿದೆ ಎಂದು ಹೇಳಿಕೊಂಡಿದ್ದಾರೆ.
ಅಲ್ಲದೇ , ಇದನ್ನ ನೋಡಿದ ಲೇಡಿ ಡೈರೆಕ್ಟರ್ ಒಬ್ಬರಿಂದ ನನಗೊಂದು ಫೋನ್ ಬಂದಿತ್ತು…ಅವರು ಫೋನ್ ಮಾಡಿ ಅಲ್ಲಿಗೆ ಹೋಗ್ತಿಯಾ ಅಂದ್ರು. ನನಗೆ ಅರ್ಥವಾಗ್ಲಿಲ್ಲ ಯಾಕಂದ್ರೆ ಅವರು ಕಮಿಟ್ಮೆಂಟ್ ಅನ್ನೋ ಪದಕ್ಕೆ ಈವೆಂಟ್ ಎಂದು ಕರೀತಾರೆ. ಹಾಗಾಗಿ ಈವೆಂಟ್ಗೆ ಹೋಗಬೇಕಾಗುತ್ತೆ ಅಂದ್ರು. ನಾನು ಏನು ಅರ್ಥವಾಗಿಲ್ಲ ಎಂದು ಮತ್ತೊಮ್ಮೆ ಕೇಳಿದೆ. ಆಗ ಅವರು ಏನ್ ಮೇಡಮ್ ನಿಮಿಗ್ ಗೊರತ್ತಿಲ್ವ ಎಡ್ಜಸ್ಟ್ಮೆಂಟ್ ಎಲ್ಲ ಅಂದ್ರು. ನಾಳೆ ಸಂಜೆ ಆರ್ಆರ್ ನಗರದಲ್ಲಿ ಈವೆಂಟ್ ಇದೆ ನೀವು ಅಲ್ಲಿಗೆ ಹೋಗ್ಬೇಕು ಅಂದ್ರು. ಆದ್ರೆ ನಾನು ಈ ಬಗ್ಗೆ ನನಿಗೆ ಗೊತ್ತಿಲ್ಲ ಅಂತ್ಹೇಳಿ ಆ ಹೆಂಗಸಿನ ಕರೆಯನ್ನ ಕಟ್ ಮಾಡ್ದೆ.
ಆದ್ರೆ ಈ ಬಗ್ಗೆ ನಾನು ಆ ಹೆಂಗಸಿನ ಫೋಟೋ ತೆಗೆದು ತನಿಖೆ ಮಾಡಿದಾಗ ಗೊತ್ತಾಯ್ತು ಇವರು ನಮ್ಮ ಒಂದಷ್ಟು ಇನ್ಸ್ಟಾ ಫೋಟೋಗಳನ್ನ ಪ್ರೊಫೈಲ್ ರೀತಿಯಲ್ಲಿ ಮಾಡಿ ಒಂದಷ್ಟು ಜನರಿಗೆ ಕಳಿಸಿ ಈ ಹಿರೋಯಿನ್ ನಿಮ್ಮನ್ನ ಮೀಟ್ ಮಾಡ್ತಾರೆಂದು ಅಡ್ವಾನ್ಸ್ ಹಣವನ್ನ ತೆಗೆದುಕೊಂಡು ಮೊಬೈಲ್ ಸ್ವಿಚ್ ಆಫ್ ಮಾಡ್ತಾರೆ ಅನ್ನೋದು. ನಾನಗೆ ಈ ವಿಷಯ ಕೇಳಿ ಶಾಕ್ ಆಯ್ತು ಇಂಡಸ್ಟ್ರಿಯಲ್ಲಿ ಈ ರೀತಿ ನನ್ನ ಹೆಸರು ದುರ್ಬಳಕೆ ಆಗ್ತಿದೆ ಅನ್ನೋದನ್ನ ಹ್ಯಾಂಡಲ್ ಮಾಡೋದು ಕಷ್ಟ ಆಯ್ತು. ಆದ್ರೆ ನನ್ನ ತಂದೆ ತಾಯಿ ನನಗೆ ಸಪೋರ್ಟ್ ಮಾಡಿದ್ರು ಎಂದು ಖಾಸಗಿ ಸಂದರ್ಶನದಲ್ಲಿ ನೋವಿನಿಂದ ಹೇಳಿಕೊಂಡಿದ್ದಾರೆ.