ಭಾರತದಲ್ಲಿ ನಮೀಬಿಯಾ ಚಿರತೆಗಳ ಮೊದಲ ಬೇಟೆ!

cheetaj
Published on

ಕೂನೋ: ಭಾರತದಲ್ಲಿ ಚಿರತೆಗಳ ಸಂತತಿ ಮತ್ತೆ ಬೆಳೆಯಬೇಕು ಎಂದು ನಮೀಬಿಯಾದಿಂದ ಚಿರತೆಗಳನ್ನು ತಂದದ್ದು ಎಲ್ಲರಿಗೂ ಗೊತ್ತಿದೆ. ಭಾರತಕ್ಕೆ ಬಂದ ಮೇಲೆ ಮೊದಲ ಬಾರಿಗೆ ಚಿರತೆಗಳು ಬೇಟೆಯಾಡಿವೆ.

ಪ್ರಧಾನಿ ಮೋದಿ ತಮ್ಮ ಹುಟ್ಟುಹಬ್ಬದಂದು (ಸೆ.17) ಮಧ್ಯಪ್ರದೇಶದ ಕೂನೋ ರಾಷ್ಟ್ರೀಯ ಉದ್ಯಾನವನದಲ್ಲಿ ನಮೀಬಿಯಾದಿಂದ ತರಲಾಗಿದ್ದ ಚಿರತೆಗಳನ್ನು ಬಿಟ್ಟಿದ್ದರು. ನಮೀಬಿಯಾದ ಚಿರತೆಗಳು ಯಾವುದೆ ರೀತಿಯ ವೈರಸ್​ಗಳನ್ನು ತಮ್ಮೊಂದಿಗೆ ತಂದಿಲ್ಲ ಎಂದು ಧೃಢಪಡಿಸಿಕೊಳ್ಳಲು ಅವುಗಳನ್ನು ಕ್ವಾರಂಟೈನ್​ಗೆ ಒಳಪಡಿಸಲಾಗಿತ್ತು.

‘ಈಗ ಅವುಗಳನ್ನು ದೊಡ್ಡ ಆವರಣಕ್ಕೆ ಬಿಡಲಾಗಿದೆ. ಕ್ವಾರಂಟೈನ್​ನಿಂದ ಬಿಡುಗಡೆಗೊಂಡ ಮೊದಲ 24 ಘಂಟೆಗಳಲ್ಲಿ ಬೇಟೆಯನ್ನೂ ಆಡಿವೆ’ ಎಂದು ಡಿಎಫ್​ಒ ಪ್ರಕಾಶ್ ಕುಮಾರ್​ ವರ್ಮಾ ಮಾಹಿತಿ ನೀಡಿದ್ದಾರೆ. ಚಿರತೆಗಳು ಯಾವ ಪ್ರಾಣಿಯನ್ನು ಬೇಟೆಯಾಡಿದ್ದು ಎಂಬ ಮಾಹಿತಿ ಇನ್ನೂ ತಿಳಿದುಬಂದಿಲ್ಲ. (ಏಜನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net