ಕೋಲಾರ: ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ನಂಬಿಹಳ್ಳಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮಂಜುನಾಥ್ ಅವರನ್ನು ಕರ್ತವ್ಯ ಲೋಪ ಆರೋಪದಡಿ ಜಿಲ್ಲಾ ಪಂಚಾಯಿತಿ ಸಿಇಒ ಪ್ರವಿಣ್ ಪಿ.ಬಾಗೇವಾಡಿ ಅವರು ಅಮಾನತುಗೊಳಿಸಿ ಆದೇಶಿಸಿದ್ದಾರೆ.
ಮೇ 6ರಂದು ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಶ್ರೀನಿವಾಸಪುರ ತಾಲೂಕಿನ ಎಲ್ಲ 25 ಗ್ರಾಪಂ ಪಿಡಿಒಗಳ ಸಭೆ ಹಮ್ಮಿಕೊಂಡಿದ್ದರು. ಈ ಬಗ್ಗೆ ಮುಂಚಿತವಾಗಿಯೇ ವಾಟ್ಸಪ್ ಮೂಲಕ ಸಂದೇಶ ಕಳುಹಿಸಲಾಗಿತ್ತು. ಸಭೆ ಮುಗಿದ ನಂತರ ಎಲ್ಲರೂ ಕಚೇರಿಗಳಿಗೆ ತೆರಳಿ, ನಾವು ಯಾವುದೇ ಕ್ಷಣದಲ್ಲಿ ಕಚೇರಿಗೆ ಭೇಟಿ ನೀಡಬಹುದು ಎಂದು ಸೂಚಿಸಲಾಗಿತ್ತು.
ಸಭೆ ನಂತರ ನಂಬಿಹಳ್ಳಿ ಗ್ರಾಪಂ ಪಿಡಿಒ ಮಂಜುನಾಥ್ನನ್ನು ಸಂಪರ್ಕಿಸಿ ಕಚೇರಿಗೆ ಲೋಕಾಯುಕ್ತರು ಆಗಮಿಸುತ್ತಿರುವ ಬಗ್ಗೆ ಮಾಹಿತಿ ತಿಳಿಸಿಲು ಪ್ರಯತ್ನಿಸಿದಾಗ, ಮಂಜುನಾಥ್ ಮೊಬೈಲ್ ಸ್ವೀಚ್ ಆ್ ಆಗಿತ್ತು.
ಸಭೆಯ ನಂತರ ಉಪ ಲೋಕಾಯುಕ್ತ ಬಿ.ವೀರಪ್ಪ ಅವರು ಗ್ರಾಪಂಗೆ ಭೇಟಿದರು. ಆಗ ಪಿಡಿಒ ಕಚೇರಿಯಲ್ಲಿ ಇರಲಿಲ್ಲ. ಆಗ ಮಂಜುನಾಥ್ಗೆ ದೂರವಾಣಿ ಕರೆ ಮಾಡಿದಾಗ ಸ್ವೀಚ್ ಆ್ ಆಗಿತ್ತು. ಕಚೇರಿಯಲ್ಲಿ ಕಂಪ್ಯೂಟರ್ ಆಪರೇಟರ್ ಲಕ್ಷಿ$್ಮ, ಕರವಸೂಲಿಗಾರ ವೆಂಕಟೇಶ್ ಇದ್ದರು. ಇದೇ ಕಚೇರಿಯ ದ್ವೀತಿಯ ದರ್ಜೆ ಸಹಾಯಕ ಈಶ್ವರಪ್ಪ ಗೌನಿಪಲ್ಲಿ ಗ್ರಾಪಂಗೆ ಹೋಗಿದ್ದ, ಕೂಡಲೇ ನಂಬಿಹಳ್ಳಿಗೆ ಬರಹೇಳಿದಾಗ ಅವರೂ ಸಂಜೆ 5.30ಗೆ ಬಂದರು.
ಹಾಜರಾತಿ ಪುಸ್ತಕ, ಕರ ವಸೂಲಿ ಪುಸ್ತಕ, ದಿನವಹಿ ಪುಸ್ತಕ ಪರಿಶೀಲಿಸಿ, ಕಂದಾಯ ವಸೂಲಿ ಮಾಡಿದ ಮಾಹಿತಿಯನ್ನು ಉಪ ಲೋಕಾಯುಕ್ತ ಬಿ.ವೀರಪ್ಪ ಒದಗಿಸುವಂತೆ ಸೂಚಿಸಿದರು. ಈ ಸಂದರ್ಭದಲ್ಲಿ ಕಚೇರಿಗೆ ಗೈರಾಗಿದ್ದ ಪಿಡಿಒ ಮಂಜುನಾಥ್ನನ್ನು ಅಮಾನತುಪಡಿಸುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅವರಿಗೆ ಶಿಾರಸು ಮಾಡಿದ್ದರು.
ಕಚೇರಿಯಲ್ಲಿ ಕಡತಗಳ ನಿರ್ವಹಣೆ ಸರಿಯಾಗಿ ಮಾಡದೆ ಇರುವುದು, ಸ್ವಚ್ಛತೆ, ಬೀದಿ ದೀಪಗಳ ಅಳವಡಿಕೆ, ಕಚೇರಿಯಲ್ಲಿ ಲೋಕಾಯುಕ್ತ ಪೊಲೀಸರ ಮಾಹಿತಿ, ಸಕಾಲ ಹಾಗೂ ಮಾಹಿತಿ ಹಕ್ಕು ಅಧಿನಿಯಮದ ಬೋರ್ಡ್ ಹಾಕುವಂತೆ ಸೂಚಿಸಲಾಗಿತ್ತು. ಇದ್ಯಾವುದನ್ನು ಪಾಲನೆ ಮಾಡದೆ ಇರುವುದರಿಂದ ಇಲಾಖೆ ವಿಚಾರಣೆ ಬಾಕಿ ಇರಿಸಿ ಕರ್ನಾಟಕ ನಾಗರಿಕ ಸೇವಾ 1957ರ ನಿಯಮ 10(1)ರನ್ವಯ ಅಮಾನತುಪಡಿಸಿ ಆದೇಶಿಸಿದ್ದಾರೆ.
