

ಕಡಬ: ಕೊಳ್ತಿಗೆ ಗ್ರಾಮದ ನಳೀಲು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ವಾರ್ಷಿಕ ಜಾತ್ರೋತ್ಸವ ಹಾಗೂ ಸತ್ಯನಾರಾಯಣ ಪೂಜೆ, ಪರಿವಾರ ದೈವಗಳ ನೇಮ ಕೆಮ್ಮಿಂಜೆ ನಾಗೇಶ ತಂತ್ರಿಗಳ ನೇತೃತ್ವದಲ್ಲಿ ಶನಿವಾರ ಮತ್ತು ಭಾನುವಾರ ನಡೆಯಿತು.
ಶುಕ್ರವಾರ ಹಸಿರುವಾಣಿ ಸಮರ್ಪಣೆ, ಶನಿವಾರ ಬೆಳಗ್ಗೆ ಭಜನಾ ಕಾರ್ಯಕ್ರಮ, ವಿವಿಧ ವೈದಿಕ ಕಾರ್ಯಕ್ರಮ ನಡೆಯಿತು. ರಾತ್ರಿ ದೈವಗಳ ಭಂಡಾರ ತೆಗೆದ ಬಳಿಕ ವಲ್ಮೀಕ ರೂಪಿ ಸುಬ್ರಹ್ಮಣ್ಯ ದೇವರಿಗೆ ರಂಗಪೂಜೆ ನಡೆದು ಶ್ರೀ ದೇವರ ಬಲಿ ಹೊರಟು ಉತ್ಸವ, ದರ್ಶನ ಬಲಿ, ಬಟ್ಟಲು ಕಾಣಿಕೆ, ವೈದಿಕ ಮಂತ್ರಾಕ್ಷತೆ ಬಳಿಕ ಅನ್ನಸಂತರ್ಪಣೆ ನಡೆಯಿತು.
ಭಾನುವಾರ ವ್ಯ್ರಾ ಚಾಮುಂಡಿಯ ನೇಮ, ಬೆಳಗ್ಗೆ ರುದ್ರ ಚಾಮುಂಡಿಯ ನೇಮ ಗುಳಿಗ ದೈವಕ್ಕೆ ತಂಬಿಲ ಸೇವೆ ನಡೆಯಿತು.
ದೇವಸ್ಥಾನದ ಆನುವಂಶೀಯ ಆಡಳಿತ ಮೊಕ್ತೇಸರ ಸಂತೋಷ್ ಕುವಾರ್ ರೈ ನಳೀಲು, ಮೊಕ್ತೇಸರರಾದ ಶ್ರೀನಿವಾಸ್ ಹೆಬ್ಬಾರ್, ನಾರಾಯಣ ರೈ ಮೊದೆಲ್ಕಾಡಿ, ಚಂದ್ರಶೇಖರ ರೈ ನಳೀಲು, ಮೋಹನದಾಸ ರೈ ನಳೀಲು, ಡಾ.ಸುಚೇತಾ ಜೆ.ಶೆಟ್ಟಿ, ಕಿಶೋರ್ ರೈ ನಳೀಲು, ಸತೀಶ್ ರೈ ನಳೀಲು, ಪ್ರವೀಣ್ ರೈ ನಳೀಲು, ವಿಲಾಸ್ ರೈ ಪಾಲ್ತಾಡು, ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಅರುಣ್ ಕುವಾರ್ ರೈ ನಳೀಲು, ಕಾರ್ಯದರ್ಶಿ ಸುರೇಶ್ಚಂದ್ರ ರೈ ನಳೀಲು, ಕೋಶಾಧಿಕಾರಿ ಡಾ.ಶುಭ್ ದೀಪ್ ರೈ ಕೋಲ್ಪೆಗುತ್ತು, ಜಾತ್ರೋತ್ಸವ ಸಮಿತಿ ಅಧ್ಯಕ್ಷ ಪ್ರವೀಣ್ ರೈ ನಡುಕೂಟೇಲು ಮೊದಲಾದವರಿದ್ದರು.