ನಾಗಾರ್ಜುನ ಜನ್ಮದಿನಕ್ಕೆ ‘ಕಾಡುನಾಯಿ’ ಕಡೆಯಿಂದ ಬಂತು ವಿಶೇಷ ಉಡುಗೊರೆ

nagarjuna1200
Published on

ಟಾಲಿವುಡ್​ ನಟ ನಾಗಾರ್ಜುನ್​ ಇಂದು 61ನೇ ವಸಂತಕ್ಕೆ ಕಾಲಿರಿಸಿದ್ದಾರೆ. ಇಡೀ ಭಾರತೀಯ ಸಿನಿಮಾರಂಗ ಅವರ ಜನ್ಮ ದಿನಕ್ಕೆ ಶುಭಾಶಯ ಹೇಳುತ್ತಿದೆ. ಅದೇ ರೀತಿ ಸಿನಿಮಾ ತಂಡಗಳು ಪೋಸ್ಟರ್​ಗಳನ್ನು ಬಿಡುಗಡೆ ಮಾಡಿಕೊಂಡು ವಿಶ್​ ಮಾಡುತ್ತಿವೆ.

ಅದೇ ರೀತಿ ನಾಗಾರ್ಜುನ್ ಜನ್ಮದಿನಕ್ಕೆ ಕಾಡು ನಾಯಿ ಕಡೆಯಿಂದಲೂ ಉಡುಗೊರೆ ಬಂದಿದೆ. ಅಂದರೆ, ಅಹಿಸೋರ್​ ಸೋಲೊಮನ್​ ನಿರ್ದೇಶನದಲ್ಲಿ ಸಿದ್ಧವಾಗಿರುವ ವೈಲ್ಡ್ ಡಾಗ್​ ಚಿತ್ರದ ಫಸ್ಟ್ ಲುಕ್​ ಬಿಡುಗಡೆಯಾಗಿದ್ದು, ಕುತೂಹಲಭರಿತವಾಗಿದೆ.

ಈ ಚಿತ್ರದಲ್ಲಿ ಎನ್​ಐಎ​ ಅಧಿಕಾರಿಯಾಗಿ ಕಾಣಿಸಿಕೊಂಡಿರುವ ನಾಗಾರ್ಜುನ್​, ಅರಣ್ಯದಲ್ಲಿ ಶತ್ರುಗಳ ಸಂಹಾರ ಮಾಡಲು ಸಂಚು ಹಾಕುತ್ತಿರುವ ಭಂಗಿಯಲ್ಲಿ ಪೋಸ್ಟರ್ ಡಿಸೈನ್​ ಮಾಡಲಾಗಿದ್ದು, ಶೇ. 70 ಭಾಗದ ಶೂಟಿಂಗ್ ಮಾಡಲಾಗಿದೆ.

ದಿಯಾ ಮಿರ್ಜಾ ನಾಯಕಿಯಾಗಿ ನಟಿಸಿರುವ ಈ ಚಿತ್ರದಲ್ಲಿ ಸಹಾಮಿ ಖೇರ್ ಸಹ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಮ್ಯಾಟಿನಿ ಎಂಟರ್ಟೈನ್​ಮೆಂಟ್​ ಬ್ಯಾನರ್​ನಲ್ಲಿ ಮೂಡಿಬಂದಿರುವ ಈ ಚಿತ್ರ ನೈಜ ಘಟನೆ ಆಧರಿತವಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net