

ಹೈದರಾಬಾದ್: ಟಾಲಿವುಡ್ ಕಿಂಗ್ ನಾಗಾರ್ಜುನ(Nagarjuna) ಅವರು ತಮ್ಮ ಮಕ್ಕಳ ಕುರಿತು ಪ್ರತಿಯೊಂದು ವಿಚಾರವನ್ನು ಹಂಚಿಕೊಳ್ಳುತ್ತಾರೆ. ಹಿರಿಯ ಮಗ ನಾಗ ಚೈತನ್ಯ ವಿಚ್ಛೇದನದ ನಂತರ ಖಿನ್ನತೆಗೆ ಒಳಗಾಗಿದ್ದರು. ಅವರನ್ನು ಹಾಗೆ ನೋಡಿದರೆ ತುಂಬಾ ಬೇಸರವಾಗುತ್ತಿತ್ತು. ನಾಗ ಚೈತನ್ಯ ಸೋಭಿತಾಳನ್ನು ಮದುವೆಯಾಗಲಿದ್ದಾರೆ. ಈಗ ಇದು ತುಂಬಾ ಖುಷಿಯಾಗಿದ್ದಾರೆ ಎಂದು ಹೇಳಿದ್ದು ಗೊತ್ತೆ ಇದೆ. ಅಲ್ಲದೆ ಚೈತನ್ಯ ಮತ್ತು ಸೋಭಿತಾರ ನಿಶ್ಚಿತಾರ್ಥದ ಬಗ್ಗೆ ನಾಗಾರ್ಜುನ ಅವರೇ ಅಧಿಕೃತ ಘೋಷಣೆ ಮಾಡಿದ್ದರು.
ಇನ್ನು ಅವರ ಎರಡನೇ ಮಗ ಅಖಿಲ್ ವಿಚಾರಕ್ಕೆ ಬಂದರೆ ಇವರ ವಿಚಾರದಲ್ಲೂ ನಾಗಾರ್ಜುನ ಅವರು ಮನನೊಂದಿದ್ದರು.ನಿಶ್ಚಿತಾರ್ಥದ ನಂತರ ಅಖಿಲ್ ಮದುವೆ ಅನಿರೀಕ್ಷಿತವಾಗಿ ನಿಂತು ಹೋಗಿದ್ದೆ ಅದಕ್ಕೆ ಕಾರಣ. ಈಗ ನಾಗಾರ್ಜುನ ಮತ್ತು ಅವರ ಕುಟುಂಬದಲ್ಲಿ ಡಬಲ್ ಧಮಾಕಾದ ಸಂಭ್ರಮ. ಏಕೆಂದರೆ ಇತ್ತೀಚೆಗೆ ತಮ್ಮ ಕಿರಿಯ ಪುತ್ರ ಅಖಿಲ್ ಅಕ್ಕಿನೇನಿ ಅವರ ನಿಶ್ಚಿತಾರ್ಥ ಕೂಡ ಮುಗಿದಿದೆ ಎಂದು ನಾಗಾರ್ಜುನ ಅಧಿಕೃತವಾಗಿ ಹೇಳಿದ್ದಾರೆ.
ಕಿಂಗ್ ನಾಗಾರ್ಜುನ ಅವರು ಅಖಿಲ್ ಅಕ್ಕಿನೇನಿ ಅವರ ನಿಶ್ಚಿತಾರ್ಥವನ್ನು ಜೈನಾಬ್ ರಾವುಡ್ಜಿಯೊಂದಿಗೆ ನಡೆದಿದೆ ಎಂದು ಹೇಳಿದ್ದಾರೆ. ಜೈನಾಬ್ ಅವರನ್ನು ನಮ್ಮ ಕುಟುಂಬಕ್ಕೆ ಸ್ವಾಗತಿಸಲು ಸಂತೋಷವಾಗಿದೆ. ಯುವ ಜೋಡಿಯನ್ನು ಅಭಿನಂದಿಸಲು ನಮ್ಮೊಂದಿಗೆ ನೀವು ಸೇರಿ. ಅವರ ಪ್ರೀತಿ ಮತ್ತು ಸಂತೋಷಕ್ಕೆ ನಿಮ್ಮ ಆಶೀರ್ವಾದ ಬೇಕು ಎಂದು ನಾಗಾರ್ಜುನ್ ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಪೋಸ್ಟ್ನಲ್ಲಿ ತಿಳಿಸಿದ್ದಾರೆ. ನವ ದಂಪತಿಯ ಫೋಟೋಗಳನ್ನು ಸಹ ಹಂಚಿಕೊಂಡಿದ್ದಾರೆ.
ಡಿಸೆಂಬರ್ 4 ರಂದು ನಾಗಚೈತನ್ಯ ಮತ್ತು ಸೋಭಿತಾ ವಿವಾಹವಾಗುತ್ತಿದ್ದರೆ ಎನ್ನಲಾಗಿದೆ. ಕುಟುಂಬಸ್ಥರೆಲ್ಲರು ಸಂಭ್ರಮಾಚರಣೆಯಲ್ಲಿ ಮುಳುಗಿದ್ದಾರೆ. ಅಖಿಲ್ ಎಂಗೇಜ್ಮೆಂಟ್ ಕೂಡ ಆಗಿದೆ ಎಂಬ ಸುದ್ದಿಯೊಂದಿಗೆ ಅಕ್ಕಿನೇನಿ ಕುಟುಂಬ ಅಭಿಮಾನಿಗಳಿಗೆ ಡಬಲ್ ಟ್ರೀಟ್ ನೀಡಿದೆ.
ಇನ್ನು ಅಖಿಲ್ ಅಕ್ಕಿನೇನಿ ನಿಶ್ಚಿತಾರ್ಥದ ವಿಚಾರಕ್ಕೆ ಬಂದರೆ ಜೈನಾಬ್ ರಾವುಡ್ಜಿ ಜತೆ ಅಖಿಲ್ ನಿಶ್ಚಿತಾರ್ಥ ಆಪ್ತ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಡೆದಿದೆಯಂತೆ. ದೆಹಲಿ ಮೂಲದ ಜೈನಾಬ್ ರಂಗಭೂಮಿ ಕಲಾವಿದೆ ಮಾತ್ರವಲ್ಲದೆ ಸೋಷಿಯಲ್ ಮೀಡಿಯಾ ಇನ್ಫ್ಲೂಯೆನ್ಸರ್ ಆಗಿದ್ದಾರೆ. ಆಕೆಯ ಸೃಜನಶೀಲತೆ ಮತ್ತು ಸಂಸ್ಕೃತಿಯ ಮೇಲಿನ ಪ್ರೀತಿ ಆಕೆಯನ್ನು ಅಖಿಲ್‌ಗೆ ಹತ್ತಿರವಾಗಿಸಿದೆ ಎನ್ನಲಾಗಿದೆ.
ನಾಗಾರ್ಜುನ ಮನೆಯಲ್ಲಿ ಇವರಿಬ್ಬರ ನಿಶ್ಚಿತಾರ್ಥ ನಡೆದಿದ್ದರೂ ಮದುವೆಗೆ ಇನ್ನೂ ದಿನಾಂಕ ನಿಗದಿಯಾಗಿಲ್ಲ. ಮುಂದಿನ ವರ್ಷ ಇವರ ಮದುವೆ ನಡೆಯಲಿದೆ ಎಂದು ಅಕ್ಕಿನೇನಿ ಆಪ್ತ ಮೂಲಗಳು ತಿಳಿಸಿವೆ. ಸದ್ಯ ಡಿಸೆಂಬರ್ 4ರಂದು ವಿವಾಹವಾಗಲಿರುವ ಚೈತನ್ಯ ಮತ್ತು ಸೋಭಿತಾ ಮತ್ತು ನಿಶ್ಚಿತಾರ್ಥ ಮುಗಿದ ನಂತರ ಮದುವೆಗೆ ಸಿದ್ಧರಾಗಿರುವ ಅಖಿಲ್-ಜೈನಾಬ್‌ಗೆ ಸಾಮಾಜಿಕ ಜಾಲತಾಣದಲ್ಲಿ ಶುಭಾಶಯಗಳ ಮಹಾಪೂರವೇ ಹರಿದುಬರುತ್ತಿದೆ.(ಏಜೆನ್ಸೀಸ್)