ನಟ ನಾಗಚೈತನ್ಯ ವರಿಸುತ್ತಿರುವ ಬಾಲಿವುಡ್​ ಬ್ಯೂಟಿ ಶೋಭಿತಾ ಬಳಿ ಇಷ್ಟೊಂದು ಆಸ್ತಿ ಇದೆಯಾ?

Naga Chaitanya, Sobhita Dhulipala
Published on

ಹೈದರಾಬಾದ್​: ಟಾಲಿವುಡ್ ಸ್ಟಾರ್​ ಹೀರೋ ಅಕ್ಕಿನೇನಿ ನಾಗಚೈತನ್ಯ ಜೀವನದಲ್ಲಿ ಹೊಸ ಅಧ್ಯಾಯ ಶುರುವಾಗಿದೆ. ಗೆಳತಿ ಹಾಗೂ ನಟಿ ಶೋಭಿತಾ ಧೂಳಿಪಾಲ ಜತೆ ನಾಗಚೈತನ್ಯ ಗುರುವಾರ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಈ ಪ್ರೇಮ ಪಕ್ಷಿಗಳ ನಿಶ್ಚಿತಾರ್ಥದ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ಸಂಚಲನ ಮೂಡಿಸಿದೆ. ಇಬ್ಬರ ನಡುವೆ ಪ್ರೀತಿ ಇದೆ ಎಂಬುದು ಇಷ್ಟು ದಿನ ಕೇವಲ ವದಂತಿಯಾಗಿತ್ತು. ಆದರೆ, ಈಗ ವದಂತಿ ನಿಜವಾಗಿದೆ.

ನಾಗಚೈತನ್ಯ-ಶೋಭಿತಾ ಅವರ ನಿಶ್ಚಿತಾರ್ಥದ ಫೋಟೋಗಳನ್ನು ಎಕ್ಸ್​ ಖಾತೆಯಲ್ಲಿ ಹಂಚಿಕೊಳ್ಳುವ ಮೂಲಕ ಅಕ್ಕಿನೇನಿ ನಾಗಾರ್ಜುನ ಅವರು ಅಧಿಕೃತವಾಗಿ ನಿನ್ನೆ (ಆ.8) ಘೋಷಣೆ ಮಾಡಿದ್ದಾರೆ. ಚೈತನ್ಯ ಅವರು ಬಿಳಿ ಬಣ್ಣದ ಶೇರ್ವಾನಿ ತೊಟ್ಟಿದ್ದರೆ, ಶೋಭಿತಾ ಗುಲಾಬಿ ಬಣ್ಣದ ಸೀರೆಯಲ್ಲಿ ಕಂಗೊಳಿಸಿದರು. ಅತ್ಯಂತ ಸರಳವಾಗಿ ಈ ನಿಶ್ಚಿತಾರ್ಥ ಸಮಾರಂಭ ಕೇವಲ ಕುಟುಂಬ ಸದಸ್ಯರ ಸಮ್ಮುಖದಲ್ಲಿ ನಡೆದಿದೆ. ನಾಗಚೈತನ್ಯ ಈ ಹಿಂದೆ ನಟಿ ಸಮಂತಾರನ್ನು ಪ್ರೀತಿಸಿ ವಿವಾಹವಾಗಿದ್ದರು. 2017 ರಲ್ಲಿ ಮದುವೆಯಾಗಿ 2021 ರಲ್ಲಿ ಇಬ್ಬರು ಭಿನ್ನಾಭಿಪ್ರಾಯಗಳ ಕಾರಣದಿಂದ ಬೇರ್ಪಟ್ಟರು. ಇದು ಕೂಡ ಭಾರಿ ಸುದ್ದಿಯಾಗಿತ್ತು.

ಇದೀಗ ನಾಗಚೈತನ್ಯ ಅವರ ಭಾವಿ ಪತ್ನಿಯ ಬಗ್ಗೆ ಅನೇಕ ಕುತೂಹಲಕಾರಿ ಸಂಗತಿಗಳು ಹೊರಬರುತ್ತಿವೆ. ಅದರಲ್ಲಿ ಅವರ ಆಸ್ತಿ ವಿಚಾರವೂ ಕೂಡ ಒಂದು. ಶೋಭಿತಾ ಬಳಿ ಎಷ್ಟು ಆಸ್ತಿ ಇದೆ ಪ್ರಶ್ನೆ ಎಲ್ಲರಲ್ಲೂ ಮೂಡಿದ್ದು, ಇದೀಗ ಆ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಅಂದಹಾಗೆ 2013ರಲ್ಲಿ ಫೆಮಿನಾ ಮಿಸ್ ಇಂಡಿಯಾ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ಶೋಭಿತಾ ಪ್ರಶಸ್ತಿ ಗೆದ್ದದ್ದರು. ಈ ಮೂಲಕ ಹಿಂದಿ ಚಿತ್ರಗಳಲ್ಲಿ ನಟಿಸುವ ಅವಕಾಶ ಸಿಕ್ಕಿತು. ಅವರು 2016ರಲ್ಲಿ ಹಿಂದಿ ಚಿತ್ರ ರಾಮನ್ ರಾಘವ್ 2.0 ನಲ್ಲಿ ನಾಯಕಿಯಾಗಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು. ಮಣಿರತ್ನಂ ನಿರ್ದೇಶನದ ಪೊನ್ನಿಯಂ ಸೆಲ್ವನ್ ಚಿತ್ರದಲ್ಲಿ ರಾಜಕುಮಾರಿ ವನತಿ ಪಾತ್ರವನ್ನು ನಿರ್ವಹಿಸುವ ಮೂಲಕ ಅವರು ಅಭಿಮಾನಿಗಳನ್ನು ಆಕರ್ಷಿಸಿದರು.

ಇದೀಗ ನಾಚೈತನ್ಯ ಜತೆ ಎಂಗೇಜ್​ ಆಗುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಲೈಫ್ ಸ್ಟೈಲ್ ಏಷ್ಯಾ ಮತ್ತು ಏಷ್ಯಾನೆಟ್ ನ್ಯೂಸ್ ಪ್ರಕಾರ ಶೋಭಿತಾ ಅವರ ಬಳಿ ಕೇವಲ 7ರಿಂದ 10 ಕೋಟಿ ರೂ. ಆಸ್ತಿ ಇದೆ ಎಂಬ ಮಾಹಿತಿ ಹೊರಬಿದ್ದಿದೆ. ಅಲ್ಲದೇ ಪ್ರತಿ ಚಿತ್ರಕ್ಕೆ ಅವರು 1 ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎನ್ನಲಾಗಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net