ವಿವಾಹ ಆಗ್ತಿದ್ದಂತೆ ದಿಟ್ಟ ನಿರ್ಧಾರ ಕೈಗೊಂಡ ಶೋಭಿತಾ! ಮದ್ವೆಯಾಗಿ ಒಂದೇ ತಿಂಗಳಲ್ಲಿ ನಾಗ ಚೈತನ್ಯ ಕುಟುಂಬದಲ್ಲಿ ಹೀಗ್ಯಾಕೆ ಆಗ್ತಿದೆ? naga chaitanya

Sobhita Dhulipala
Published on

ಹೈದ್ರಾಬಾದ್ :​ ( naga chaitanya ) ಟಾಲಿವುಡ್​ ನಟ ನಾಗ ಚೈತನ್ಯ-ಶೋಭಿತಾ ಧೂಳಿಪಾಲ ದಾಂಪತ್ಯ ಜೀವನಕ್ಕೆ ಕಾಲಿಟಿದ್ದಾರೆ. ಈ ಜೋಡಿ ಮದ್ವೆ ಆಗ್ತಿದ್ದಂತೆ ದಿಟ್ಟ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರಂತೆ ಈ ವಿಷಯ ಇದ್ದಕ್ಕಿದ್ದಂತೆ ಹಾಟ್ ಟಾಪಿಕ್ ಆಗುತ್ತಲಿದೆ.

ಸಮಂತಾ ಅವರೊಂದಿಗಿನ ವಿಚ್ಛೇದನದ ನಂತರ, ಶೋಭಿತಾ ಅವರನ್ನು ನಾಗ ಚೈತನ್ಯ ಮದ್ವೆ ಆಗಿ ಹೊಸ ಜೀವನ ನಡೆದುತ್ತಿದ್ದಾರೆ. ಕಳೆದ ವರ್ಷ ಡಿಸೆಂಬರ್ 4 ರಂದು ಅನ್ನಪೂರ್ಣ ಸ್ಟುಡಿಯೋದಲ್ಲಿ ಸೋಭಿತಾ-ನಾಗ ಚೈತನ್ಯ ವಿವಾಹ ಸಮಾರಂಭ ಕೆಲವೇ ಅತಿಥಿಗಳೊಂದಿಗೆ ನಡೆದಿತ್ತು. ಈ ಮದುವೆ ಸಂಭ್ರಮಕ್ಕೆ ಸಂಬಂಧಿಸಿದ ವಿಡಿಯೋಗಳು ಮತ್ತು ಫೋಟೋಗಳು ಟ್ರೆಂಡ್ ಆಗಿವೆ.

ಸೋಭಿತಾ-ನಾಗ ಚೈತನ್ಯ ದಂಪತಿ ಹೈದರಾಬಾದ್‌ನಲ್ಲಿ ನೆಲೆಸಿದ್ದಾರೆ. ಆದರೆ ಇವರಿಬ್ಬರ ಮಧ್ಯೆ ಕೆಲವು ಭಿನ್ನಾಭಿಪ್ರಾಯಗಳು ತಲೆದೂರಿವೆ ಎಂಬ ಮಾತು ಹೊರಬಿದ್ದಿದೆ. ಇದಕ್ಕೆ ಪ್ರಮುಖ ಕಾರಣ ಚೈತು ಪತ್ನಿ ಸೋಭಿತಾ ಎನ್ನಲಾಗಿದೆ. ಮದುವೆಯ ನಂತರವೂ ಶೋಭಿತಾ ಅವರಿಗೆ ಸಿನಿಮಾ ಆಫರ್‌ಗಳು ಬರುತ್ತಿವೆ. ಅದೂ ಹೆಚ್ಚಾಗಿ ಬಾಲಿವುಡ್ ನಿಂದ. ಹಾಗಾಗಿಯೇ ಅವರನ್ನು ಮುಂಬೈಗೆ ಶಿಫ್ಟ್ ಮಾಡುವ ಪ್ಲಾನ್ ಇದೆ ಎಂಬ ಮಾತು ಕೇಳಿಬರುತ್ತಿದೆ. ಸ್ವಲ್ಪ ದಿನ ಕಾಯೋಣ ಎಂದು ಚೈತು ಹೇಳುತ್ತಿದ್ದಾರಂತೆ. ಈ ವಿಚಾರವನ್ನು ನಾಗಾರ್ಜುನ ಕೂಡ ಸಂಪರ್ಕಿಸಿದ್ದಾರಂತೆ, ಆದರೆ ಅವರು ನಿರ್ಧಾರವನ್ನು ಇಬ್ಬರಿಗೂ ಬಿಟ್ಟಿದ್ದಾರೆ ಎನ್ನಲಾಗಿದೆ.

ಈ ಹಿಂದೆಯೂ ಸಮಂತಾ ವಿಚಾರದಲ್ಲೂ ಇದೇ ಆಗಿತ್ತು. ಚೈತು-ಸಮಂತಾ ಮದುವೆಯ ನಂತರ ಪ್ರತ್ಯೇಕ ಮನೆಯಲ್ಲಿ ವಾಸ ಮಾಡುವ ಉದ್ದೇಶದಿಂದ ಫ್ಲಾಟ್ ತೆಗೆದುಕೊಂಡಿದ್ದರು ಎಂಬ ಮಾತು ಕೇಳಿಬಂದಿತ್ತು. ಅದು ಬಿಟ್ಟರೆ ಈಗ ಶೋಭಿತಾ ವಿಚಾರದಲ್ಲೂ ಅದೇ ಆಗುತ್ತಿದೆ ಎಂಬ ಮಾತು ಟಾಲಿವುಡ್ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ಇನ್ನೊಂದೆಡೆ ಇತ್ತೀಚೆಗೆ ಶೋಭಿತಾ ಅವರ ಗ್ಲಾಮರ್ ಶೋ ಕೂಡ ಹಾಟ್ ಟಾಪಿಕ್ ಆಗುತ್ತಿದೆ. ಶೋಭಿತಾ ಅವರ ಹಲವು ಫೋಟೋಗಳು ವೈರಲ್ ಆಗಿವೆ. ಈ ಲೆಕ್ಕಾಚಾರ ನೋಡಿದರೆ ಸೋಭಿತಾ ಮದುವೆಯ ನಂತರ ಸಮಂತಾ ಅವರ ಹಾಗೇ ಸಿನಿಮಾ ಮಾಡಲು ರೆಡಿಯಾಗುತ್ತಿದ್ದಾರಂತೆ.ಇದೆಲ್ಲ ಅಂತೆ.. ಕಂತೆ ಸುದ್ದಿಯಾಗಿದೆ.. ಆದರೆ ಈ ಜೋಡಿಯಿಂದ ಅಥವಾ ಕುಟುಂಬದಿಂದ ಯಾವುದೇ ಮಾಹಿತಿ ಇಲ್ಲ...

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net