VIDEO| ನಿನ್ನೆ ಮಂಡ್ಯ, ಇಂದು ಮೈಸೂರಿನಲ್ಲಿ ಮುಸ್ಸಂಜೆ ವೇಳೆ ದಿಢೀರ್​ ಬೆಳಕು: ಬೆರಗಾದ ಗ್ರಾಮಸ್ಥರು!

Villagers
Published on

ಮೈಸೂರು: ಕತ್ತಲು ಕವಿಯುವ ಸಮಯದಲ್ಲಿ ದಟ್ಟ ಬೆಳಕನ್ನು ಕಂಡು ಗ್ರಾಮಸ್ಥರು ಚಕಿತಗೊಂಡ ಘಟನೆ ಜಿಲ್ಲೆಯ ಕೆ.ಆರ್​.ನಗರ ತಾಲೂಕಿನ ಬಟಿಗನಹಳ್ಳಿಯಲ್ಲಿ ನಡೆದಿದೆ.

ಬಟಿಗನಹಳ್ಳಿ ಕೆ.ಆರ್.ನಗರ ತಾಲೂಕಿನಿಂದ 20 ಕಿ.ಮೀ. ದೂರದಲ್ಲಿದ್ದು, ಇಂದು ರಾತ್ರಿ 7 ಗಂಟೆಯಲ್ಲಿ ಪ್ರಖರವಾದ ಬೆಳಕು ಕಂಡು ಗ್ರಾಮಸ್ಥರು ವಿಸ್ಮಿತರಾದರು. ಬೀದಿ ದೀಪಗಳನ್ನು ಹಾಕಿದ ನಂತರವೂ ಬೆಳಕಿನ ಕಿರಣಗಳು ಗ್ರಾಮದಲ್ಲಿತ್ತು.

ನಿನ್ನೆಯಷ್ಟೇ ಮಂಡ್ಯದ ಕೆ.ಆರ್​.ಪೇಟೆ ತಾಲೂಕಿನ ಹೆರಗನಹಳ್ಳಿಯಲ್ಲೂ ಸಹ ರಾತ್ರಿ 7.30ರ ಸಮಯದಲ್ಲಿ ದಿಢೀರ್​ ಬೆಳಕು ಕಾಣಿಸಿಕೊಂಡಿತ್ತು. ರಾತ್ರಿ ವೇಳೆ ಹಗಲಿನ ವಾತವಾರಣ ಕಂಡು ಗ್ರಾಮಸ್ಥರು ಅಚ್ಚರಿಗೊಂಡಿದ್ದರು.

ಆದರೆ, ರಾತ್ರಿ ವೇಳೆ ಬೆಳಕು ಯಾಕೆ ಬಂತು ಎಂಬುದರ ಬಗ್ಗೆ ಈವರೆಗೂ ಸ್ಪಷ್ಟನೆ ಇಲ್ಲ. ಪೂರ್ವ ಮುಂಗಾರು ಮಳೆ ಸಮಯದಲ್ಲಿ ಈ ರೀತಿಯಾಗುವುದು ಸಹಜ ಎಂದು ಗ್ರಾಮಸ್ಥರು ಹೇಳಿದ್ದು, ಪ್ರಕರಣ ಮಾತ್ರ ನಿಗೂಢವಾಗಿಯೇ ಉಳಿದಿದೆ. (ದಿಗ್ವಿಜಯ ನ್ಯೂಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net