ಹಾಸಿಗೆಯಿಂದ ಫ್ಯಾನ್​ವರೆಗಿನ ಎತ್ತರ 5'11, ಸುಶಾಂತ್​ ಹೈಟು 5'10; ಆತ್ಮಹತ್ಯೆ ಹೇಗೆ ಸಾಧ್ಯ? ತನಿಖೆ ವೇಳೆ ಹೊಸ ವಾದ

RIP-Sushant-Singh-Rajputs-last-Instagram-post
Published on

ಮುಂಬೈ: ಬಾಲಿವುಡ್​ ನಟ ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ಎರಡು ತಿಂಗಳ ಬಳಿಕವೂ ತನಿಖೆಯಲ್ಲಿ ಅಚ್ಚರಿಯ ಸಂಗತಿಗಳು ಹೊರ ಬೀಳುತ್ತಲೇ ಇವೆ.

ಬಾಂದ್ರಾದಲ್ಲಿರುವ ಮನೆಯಲ್ಲಿ ಜೂನ್​ 14ರಂದು ಸುಶಾಂತ್​ ಸಿಂಗ್​ ದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸ್ಥಳಕ್ಕೆ ಬಂದು ಮಹಜರು ಅಥವಾ ಪಂಚನಾಮೆ ನಡೆಸಿದ್ದ ಪೊಲೀಸರ ವರದಿಯಲ್ಲಿ ಆಶ್ಚರ್ಯಕರ ಸಂಗತಿಯೊಂದು ಬಯಲಾಗಿದೆ.

ಸುಶಾಂತ್​ ಸಿಂಗ್​ ಬೆಡ್​ರೂಮ್​ನಲ್ಲಿ ಮಂಚದ ಮೇಲಿದ್ದ ಹಾಸಿಗೆಯಿಂದ ಫ್ಯಾನ್​ವರೆಗಿನ ಎತ್ತರ 5 ಅಡಿ 11 ಅಂಗುಲ ಇದೆ. ಆದರೆ, ಸುಶಾಂತ್​ ಎತ್ತರ 5 ಅಡಿ 10 ಅಂಗುಲ ಇರುವುದು ಗೊತ್ತಾಗಿದೆ. ಹೀಗಿರುವಾಗ ಅಷ್ಟು ಎತ್ತರದ ವ್ಯಕ್ತಿ ಫ್ಯಾನಿನಿಂದ ನೇತಾಡಲು ಹೇಗೆ ಸಾಧ್ಯ ಎಂಬ ಪ್ರಶ್ನೆ ಎದ್ದಿದೆ.

ಈ ಪ್ರಶ್ನೆಯೇ ಸುಶಾಂತ್​ ಸಿಂಗ್​ ರಜಪೂತ್​ನದ್ದು ಆತ್ಮಹತ್ಯೆ ಎಂಬ ವಾದವನ್ನೇ ಪೊಳ್ಳು ಮಾಡುತ್ತದೆ. ಇದಲ್ಲದೇ, ಆತ್ಮಹತ್ಯೆಗೆ ಸ್ನಾನಗೃಹದ ನಿಲುವಂಗಿಯ ಬೆಲ್ಟ್​ ಬಳಸಿದ್ದ. ಅದು ತುಂಡಾಗಿತ್ತು. ಹಾಸಿಗೆ ಮೇಲೆಯೇ ಬಿದ್ದಿತ್ತು ಎಂಬುದು ಕೂಡ ಪೊಲೀಸ್​ ವರದಿಯಲ್ಲಿಯೇ ಇದೆ.

ಕೊನೆಗೆ ಹಸಿರುಕುರ್ತಾ ಬಳಸಿಕೊಂಡು ಸುಶಾಂತ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಮುಂಬೈ ಪೊಲೀಸರು ಹೇಳಿದ್ದರು. ಜತೆಗೆ ಫೊರೆನ್ಸಿಕ್​ ತನಿಖೆಯಲ್ಲೂ ಇದು ಖಚಿತವಾಗಿದೆ ಎಂದು ವರದಿ ನೀಡಿದ್ದರು. ತನಿಖೆ ಮುಂದುವರಿದಂತೆ ಹೊಸ ಹೊಸ ಸಂಗತಿಗಳ ಬಯಲಾಗುತ್ತಿರುವುದು ಪ್ರಕರಣವನ್ನು ಇನ್ನಷ್ಟು ಕಗ್ಗಂಟಾಗಿಸುತ್ತಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net