

ಆಫ್ರಿಕಾ: ದೇಶ, ವಿದೇಶಗಳಲ್ಲಿ ಅನೇಕ ವಿಶಿಷ್ಟ ಪ್ರಕರಣಗಳು ಬೆಳಕಿಗೆ ಬರುತ್ತವೆ. ಇದನ್ನು ವಿಜ್ಞಾನ ಅರ್ಥಮಾಡಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಅನೇಕ ಬಾರಿ ಹಠಾತ್ ಆಗಿ ವಿಚಿತ್ರ ಕಾಯಿಲೆ ಅಥವಾ ಜನರಲ್ಲಿ ವಿಚಿತ್ರ ನಡವಳಿಕೆಯು ಸೋಜಿಗ ಉಂಟು ಮಾಡುತ್ತದೆ. ಇಂತಹ ಕಾಯಿಲೆಗಳನ್ನು ಸಾಂಕ್ರಾಮಿಕ ಎಂದೂ ಕರೆಯಲಾಗುತ್ತದೆ. ಇತ್ತೀಚೆಗೆ ಕೀನ್ಯಾದ ಶಾಲೆಯೊಂದರಲ್ಲಿ ಇಂತಹದ್ದೇ ಪ್ರಕರಣ ಬೆಳಕಿಗೆ ಬಂದಿದೆ. ಕಾಕಮೆಗಾ ಕೌಂಟಿಯಲ್ಲಿ ಸುಮಾರು 95 ಹೈಸ್ಕೂಲ್ ಹುಡುಗಿಯರಿಗೆ ವಿಚಿತ್ರವಾದ ಕಾಯಿಲೆ ಕಾಣಿಸಿಕೊಂಡಿದೆ.
ಸೇಂಟ್ ಥೆರೆಸಾ ಆರ್ಗಿ ಪ್ರೌಢಶಾಲೆಯ ಈ ಬಾಲಕಿಯರು ಕಳೆದ ಕೆಲವು ವಾರಗಳಿಂದ ಆಸ್ಪತ್ರೆಗೆ ದಾಖಲಾಗಿದ್ದಾರೆ. ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಈ ಬಾಲಕಿಯರ ದೇಹದ ಕೆಳಗಿನ ಭಾಗ ಸಂಪೂರ್ಣ ನಿಷ್ಕ್ರಿಯಗೊಂಡಿದೆ.
ಶಾಕಿಂಗ್ ವಿಡಿಯೋ ವೈರಲ್
ಈ ವಿಚಿತ್ರ ಕಾಯಿಲೆಯಿಂದ ಬಳಲುತ್ತಿರುವ ಹೆಣ್ಣುಮಕ್ಕಳ ಕುಟುಂಬಗಳು ಭಯಭೀತರಾಗಿದ್ದು, ಆತಂಕಕ್ಕೆ ಒಳಗಾಗಿದ್ದಾರೆ, ಬಾಲಕಿಯರ ಕಾಲಗಳು ಇದ್ದಕ್ಕಿದ್ದಂತೆ ನಿಶ್ಚೇಷ್ಟಿತ ಮತ್ತು ನಿಶ್ಚಲವಾದವು ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಕೀನ್ಯಾದ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ಕ್ಲಿಪ್ನಲ್ಲಿ ಹುಡುಗಿಯರು ಕುಂಟುತ್ತಾ ಮತ್ತು ಒದ್ದಾಡುತ್ತಿರುವುದನ್ನು ಕಾಣಬಹುದು.
ರಕ್ತ ಮತ್ತು ಮೂತ್ರದ ಮಾದರಿ ಸಂಗ್ರಹಣೆ
ಈ ಕಾಯಿಲೆಯ ಕಾರಣವನ್ನು ಅರ್ಥಮಾಡಿಕೊಳ್ಳಲು ಬಾಲಕಿಯರ ರಕ್ತ, ಮೂತ್ರ ಮತ್ತು ಮಲ ಮಾದರಿಗಳನ್ನು ಸಂಗ್ರಹಿಸಲಾಗಿದೆ ಎಂದು ಕಾಕಮೆಗಾ ಕೌಂಟಿ ಹೆಲ್ತ್ ಸಿಇಸಿ ಬರ್ನಾರ್ಡ್ ವೆಸೊಂಗಾ ಪತ್ರಕರ್ತರಿಗೆ ತಿಳಿಸಿದರು. ಇವುಗಳನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು, ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆಯ ನಂತರ ಶಾಲೆಯನ್ನು ಅನಿರ್ದಿಷ್ಟಾವಧಿಗೆ ಮುಚ್ಚಲಾಗಿದೆ.