ದೆಹಲಿ ಕೋರ್ಟ್​ನಲ್ಲಿ ಸ್ಫೋಟ: ಕಲಾಪಗಳು ಅಮಾನತು; ತನಿಖೆ ಆರಂಭ

court
Published on

ನವದೆಹಲಿ: ರಾಜಧಾನಿ ದೆಹಲಿಯ ರೋಹಿಣಿಯ ಕೋರ್ಟ್​ನಲ್ಲಿ ಅನುಮಾನಾಸ್ಪದ ಸ್ಫೋಟವೊಂದು ಸಂಭವಿಸಿದೆ. ಈ ಘಟನೆಯಲ್ಲಿ ಒಬ್ಬ ಪೊಲೀಸ್​​ ಸಿಬ್ಬಂದಿ ಗಾಯಗೊಂಡಿದ್ದು, ಆತನನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇಂದಿನ ನ್ಯಾಯಾಲಯದ ಎಲ್ಲಾ ಕಲಾಪಗಳನ್ನು ಅಮಾನತ್ತಿನಲ್ಲಿರಿಸಿ, ಆವರಣವನ್ನು ಸೀಲ್​ ಮಾಡಲಾಗಿದೆ ಎಂದು ಪಿಟಿಐ ವರದಿ ಮಾಡಿದೆ.

ಆರಂಭಿಕ ವರದಿಗಳ ಪ್ರಕಾರ, ಬೆಳಿಗ್ಗೆ 10.40 ರ ಸಮಯಕ್ಕೆ ಕೋರ್ಟ್​​ ರೂಮೊಂದರಲ್ಲಿ ಒಂದು ಲ್ಯಾಪ್​ಟಾಪ್​ ಸ್ಫೋಟಗೊಂಡಿತು ಎನ್ನಲಾಗಿದೆ. ಪೊಲೀಸ್​ ಇಲಾಖೆಯ ಮೂಲಗಳು ಇದು ಪುಟ್ಟ ಕ್ರೂಡ್​ ಬಾಂಬ್​ನ ಪರಿಣಾಮ ಎಂದು ಹೇಳಿದ್ದಾರೆ. ಫೊರೆನ್ಸಿಕ್ಸ್​ ತಂಡದವರು ಪರಿಶೀಲನೆ ನಡೆಸಿದ ನಂತರ ವಸ್ತುಸ್ಥಿತಿ ಹೊರಬೀಳಲಿದೆ. ಅಗ್ನಿಶಾಮಕ ದಳದ ತಂಡಗಳು ಮತ್ತು ಉನ್ನತ ಪೊಲೀಸ್​ ಅಧಿಕಾರಿಗಳು ಸ್ಥಳಕ್ಕೆ ತೆರಳಿದ್ದು, ತನಿಖೆ ಕೈಗೊಂಡಿದ್ದಾರೆ ಎಂದು ವರದಿ ತಿಳಿಸಿದೆ. (ಏಜೆನ್ಸೀಸ್)‘

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net