

ಬಿಹಾರ: ಮುಜಾಫರ್‌ಪುರದಲ್ಲಿರುವ ಮನೆಯೊಂದರಲ್ಲಿ ದಂಪತಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ಬುಧವಾರ ಬೆಳಗ್ಗೆ ಪತಿ ಪತ್ನಿಯ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಇದನ್ನೂ ಓದಿ: ಮಾನ್ಸೂನ್ ಸಮಯದಲ್ಲಿ ಫಿಟ್ ಆಗಿರಲು 5 ಸಲಹೆಗಳು ಇಂತಿವೆ…
ಲಾಲು ಛಾಪ್ರಾ ನಿವಾಸಿಗಳಾದ ವಿಕ್ರಮ್ ಕುಮಾರ್ ಮತ್ತು ಅವರ ಪತ್ನಿ ಶಬನಮ್ ಸಿಂಗ್ ಮೃತರು. ಇವರ ಶವಗಳು ಮನೆಯೊಳಗೆ ಪತ್ತೆಯಾಗಿವೆ. ಜಿಲ್ಲೆಯ ಸದರ್ ಪೊಲೀಸ್ ಠಾಣೆ ವ್ಯಾಪ್ತಿಯ ಫರ್ಡೋ ಸೇತುವೆ ಬಳಿಯ ಮನೆಯೊಂದರಿಂದ ದಂಪತಿಯ ಮೃತ ದೇಹವನ್ನು ವಶಪಡಿಸಿಕೊಳ್ಳಲಾಗಿದೆ. ಮೃತದೇಹದ ಬಗ್ಗೆ ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಸಂಪೂರ್ಣ ತನಿಖೆ ಆರಂಭಿಸಿದ್ದಾರೆ.
ಪರು ಪೊಲೀಸ್ ಠಾಣೆ ವ್ಯಾಪ್ತಿಯ ಲಾಲು ಚಾಪ್ರಾ ನಿವಾಸಿಯಾಗಿರುವ ವಿಕ್ರಮ್ ಸಿಂಗ್ ಅವರು ಪತ್ನಿ ಶಬನಮ್ ಸಿಂಗ್ ಮತ್ತು ನಾಲ್ಕು ವರ್ಷದ ಮಗನೊಂದಿಗೆ ಫರ್ಡೋ ಗೋಲಾದಲ್ಲಿ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ವಿಕ್ರಮ್ ಮತ್ತು ಶಬನಮ್ 2018ರಲ್ಲಿ ವಿವಾಹವಾದರು. ಪ್ರಾಥಮಿಕ ತನಿಖೆಯಲ್ಲಿ ಇಬ್ಬರ ನಡುವೆ ಯಾವುದೋ ವಿಷಯಕ್ಕೆ ಆಗಾಗ ಜಗಳ ನಡೆಯುತ್ತಿತ್ತು ಎಂದು ಸ್ಥಳೀಯರಿಂದ ಪೊಲೀಸರಿಗೆ ತಿಳಿದು ಬಂದಿದೆ. ಮಂಗಳವಾರ ತಡರಾತ್ರಿಯೂ ಇಬ್ಬರ ನಡುವೆ ಜಗಳ ನಡೆದಿದ್ದು, ಬಳಿಕ ಮೊದಲ ಪತಿ ಕೊಠಡಿಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಬುಧವಾರ ಬೆಳಗ್ಗೆ ಶಬನಮ್ ತನ್ನ ಪತಿಯನ್ನು ನೋಡಲು ಹೋದಾಗ ಬಾಗಿಲಿಗೆ ಬೀಗ ಹಾಕಿರುವುದು ಕಂಡು ಬಂದಿದೆ. ಇದಾದ ಬಳಿಕ ಆಕೆ ಬಾಗಿಲು ಒಡೆದು ಒಳಗೆ ಹೋಗಿದ್ದಾಳೆ. ಅಲ್ಲಿ ನೇಣು ಬಿಗಿದ ವಿಕ್ರಮ್ ಮೃತದೇಹವನ್ನು ನೋಡಿದರು. ಇದಾದ ನಂತರ ತನ್ನ ಸಹೋದರ ಭೋಲುಗೆ ಕರೆ ಮಾಡಿ ನನ್ನ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾನು ಆತ್ಮಹತ್ಯೆ ಮಾಡಿಕೊಳ್ಳತ್ತೇನೆ ಎಂದು ಹೇಳಿದ್ದಾಳೆ. ಶಬನಮ್ ಕೂಡ ಬೇರೆ ಕೋಣೆಗೆ ಹೋಗಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
ಆತ್ಮಹತ್ಯೆಗೂ ಮುನ್ನ ತನ್ನ ಸಹೋದರನಿಗೆ ಕರೆ ಮಾಡಿದ ಶಬನಮ್:
ಆತಂಕಗೊಂಡ ಸಹೋದರ ಭೋಲು ಕುಟುಂಬ ಸದಸ್ಯರೊಂದಿಗೆ ತಂಗಿ ಮನೆಗೆ ಹೋಗಿದ್ದಾನೆ. ಆದರೆ ಅಷ್ಟರಲ್ಲಿ ಇಬ್ಬರೂ ಸಾವನ್ನಪ್ಪಿದ್ದರು. ಘಟನೆ ಕುರಿತು ಕುಟುಂಬಸ್ಥರಲ್ಲಿ ಗಲಾಟೆ ನಡೆದಿದೆ. ಸ್ಥಳಿಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಬಗ್ಗೆ ಪೊಲೀಸರು ತನಿಖೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತಿದ್ದಾರೆ.