ಶಂಕಿತನ ಅಂತ್ಯಕ್ರಿಯೆಗೆ ಮುಂದಾಗದ ಹಿಂದು ಕುಟುಂಬ; ಅಂತ್ಯಸಂಸ್ಕಾರ ನೆರವೇರಿಸಿದ ಮುಸ್ಲಿಂ ಯುವಕರು...!

cremation
Published on

ಹೈದರಾಬಾದ್​: ಕೋವಿಡ್​ನಿಂದ​ ಮೃತಪಟ್ಟಿದ್ದಾನೆಂದು ಶಂಕಿಸಿದ ಕುಟುಂಬದವರು ವೃದ್ಧನ ಅಂತ್ಯಕ್ರಿಯೆಗೆ ನಿರಾಕರಿಸಿದ್ದಾರೆ. ಆದರೆ, ಅದೇ ಶವಕ್ಕೆ ಮುಸ್ಲಿಂ ಯುವಕರು ಅಂತಿಮ ವಿಧಿ-ವಿಧಾನ ನೆರವೇರಿಸಿದ್ದಾರೆ. ಕೋಮು ಸಾಮರಸ್ಯದ ಪ್ರತೀಕವಾದ ಈ ಘಟನೆಯಲ್ಲಿ ಮುಸ್ಲಿಂ ಸಮುದಾಯಕ್ಕೆ ಏಳು ಯುವಕರು ಹಿಂದ ವೃದ್ಧನ ಅಂತ್ಯಕ್ರಿಯೆಯನ್ನು ನೆರವೇರಿಸಿದರು.

ಕುಟುಂಬದ ಯಜಮಾನ ಸೋಮವಾರ ಮೃತಪಟ್ಟಿದ್ದರು. ಬಳಿಕ ಆತನಿಗೆ ಕೋವಿಡ್​ ಇದೆ ಶಂಕಿಸಿದ ಮನೆಯ ಸದಸ್ಯರು ತಮಗೂ ಕೋವಿಡ್​ ಅಂಟಬಹುದು ಎಂದು ಯಾರೂ ಶವದ ಬಳಿ ಸುಳಿಯಲಿಲ್ಲ. ಅಂತ್ಯಕ್ರಿಯೆ ನೆರವೇರಿಸಲು ಒಪ್ಪಲ್ಲಿಲ್ಲ. ಸ್ಥಳೀಯ ಕಾರ್ಪೋರೇಟರ್​ ಹಾಗೂ ಪೊಲೀಸರು ಮನವೊಲಿಸಿದರು 65 ವರ್ಷದ ವೃದ್ಧನ ಅಂತ್ಯಸಂಸ್ಕಾರ ನೆರವೇರಿಸಲು ಒಪ್ಪಲೇ ಇಲ್ಲ.

ಕೊನೆಗೆ ಅಬ್ದುಲ್​ ರಬ್​, ಮುನೀರ್​, ಇಶಾಕ್​, ನಾಸೀರ್​ ಅಲಿ, ಶೋಯಿಬ್​, ಇಮ್ರಾನ್​ ಮೃತದೇಹಕ್ಕೆ ಅಂತಿಮ ವಿಧಿ-ವಿಧಾನ ನೆರವೇರಿಸಲು ನಿರ್ಧರಿಸಿದರು. ಕೋವಿಡ್​ ಶಿಷ್ಟಾಚಾರದ ಪ್ರಕಾರ ಅಂಬುಲೆನ್ಸ್​ನಲ್ಲಿ ಶವವನ್ನು ಸಾಗಿಸಿ ಅಂತ್ಯಕ್ರಿಯೆ ಮುಗಿಸಿದರು.

ಇದು ಕೋಮು ಸಾಮರಸ್ಯದ ನಾಡು. ಹೀಗಾಗಿಯೇ ಅಂತ್ಯ ಸಂಸ್ಕಾರವನ್ನು ಮಾಡಲು ಒಪ್ಪಿಕೊಂಡಿದ್ದಾಗಿ ಯುವಕರು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net