

ಜಬಲ್ಪುರ್: ಹಿಂದು ಧರ್ಮ ಮತ್ತು ಅದರ ತತ್ವಗಳು ಹಾಗೂ ಆಚರಣೆಗಳ ಕಡೆಗೆ ಒಲವು ಹೊಂದಿರುವ ಮುಸ್ಲಿಂ ಯುವಕನೊಬ್ಬ, ನರ್ಮದಾ ನದಿಯಲ್ಲಿ ತೀರ್ಥ ಸ್ನಾನ ಮಾಡುವ ಮೂಲಕ ಹಿಂದು ಧರ್ಮಕ್ಕೆ ಮತಾಂತರವಾದರು.
ಮುಸ್ಲಿಂ ಯುವಕ ಮತಾಂತರ ಸುದ್ದಿ ಹರಿದಾಡುತ್ತಿದ್ದಂತೆ, ಆತ ಹಿಂದು ಧರ್ಮದ ಯುವತಿಯನ್ನು ಮದುವೆ ಆಗಲು ತನ್ನ ಧರ್ಮವನ್ನು ತೊರೆದು ಮತಾಂತರವಾಗಿದ್ದಾನೆ ಎಂದು ಹೇಳಲಾಗುತ್ತಿದೆ.
ಮಧ್ಯಪ್ರದೇಶದ ಜಬಲ್ಪುರದಲ್ಲಿರುವ ನರ್ಮದಾ ನದಿಯಲ್ಲಿ ಮತಾಂತರ ಕಾರ್ಯ ನಡೆದಿದೆ. ಹಿಂದು ಧರ್ಮಸೇನೆಯು ನರ್ಮದಾ ನದಿಯಲ್ಲಿ ವೇದ ಮಂತ್ರಗಳನ್ನು ಪಠಿಸುವ ಮೂಲಕ ಮತಾಂತರ ಕಾರ್ಯವನ್ನು ನಡೆಸಿದೆ. ಮತಾಂತರದ ಆಚರಣೆಗಳನ್ನು ಅನುಸರಿಸುವ ಮೂಲಕ ಅಖಿಲ್ ಅನ್ಸಾರಿ ಇದೀಗ ಹರ್ಷ ಆರ್ಯ ಆಗಿ ಬದಲಾಗಿದ್ದಾರೆ.
ಮದುವೆಯಾಗಬೇಕಾದರೆ ತನ್ನ ಧರ್ಮವನ್ನು ಬದಲಾಯಿಸುವಂತೆ ಯುವಕನ ಸಂಗಾತಿ ಷರತ್ತು ಮುಂದಿಟ್ಟಿದ್ದೇ ಮತಾಂತರ ಹಿಂದಿನ ಕಾರಣ ಎಂದು ತಿಳಿದುಬಂದಿದೆ. ಆದಾಗ್ಯೂ, ಮತಾಂತರಗೊಳ್ಳುವ ವರ್ಷಗಳ ಹಿಂದಿನಿಂದಲೂ ಯುವಕ ಹಿಂದು ಧರ್ಮದ ಬಗ್ಗೆ ಒಲವು ಹೊಂದಿದ್ದನು ಎಂಬುದನ್ನು ಸಹ ಗಮನಿಸಲಾಗಿದೆ. (ಏಜೆನ್ಸೀಸ್)ಇದನ್ನೂ ಓದಿ: ಬಹುಕೋಟಿ ಹಗರಣ; ಜಮ್ಮು-ಕಾಶ್ಮೀರ ಮಾಜಿ ರಾಜ್ಯಪಾಲರಿಗೆ ಸಿಬಿಐ ನೋಟಿಸ್