ಸಿನಿಮಾ

VIDEO| ಕಾಂಗ್ರೆಸ್​ ಸಂಭ್ರಮಾಚರಣೆ ವೇಳೆ ಹಾರಾಡಿದ ಮುಸ್ಲಿಂ ಧ್ವಜ; ವ್ಯಾಪಕ ಖಂಡನೆ

ಭಟ್ಕಳ: ರಾಷ್ಟ್ರ ರಾಜಕಾರಣದ ದಿಕ್ಸೂಚಿ ಎಂದೇ ಹೇಳಲಾಗಿದ್ದ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು ಕಾಂಗ್ರೆಸ್​ ಪಕ್ಷವು ಪ್ರಚಂಡ ದಿಗ್ವಿಜಯ ಸಾಧಿಸಿದೆ.

ಇನ್ನು ಭಟ್ಕಳದಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಮಂಕಾಳು ವೈದ್ಯ​ ಗೆದ್ದ ಬೆನ್ನಲ್ಲೇ ಸಂಭ್ರಮಾಚರನೆ ಮುಗಿಲು ಮುಟ್ಟಿದ್ದು ಈ ವೇಳೆ ಯುವಕನೊಬ್ಬ ಮುಸ್ಲಿಂ ಧ್ವಜವನ್ನು ಹಾರಿಸಿದ್ಧಾನೆ.

ಮುಸ್ಲಿಂ ಧ್ವಜ ಹಾರಿಸಿದ ಯುವಕರು

ಮಂಕಾಳು ವೈದ್ಯ ಅವರ​ ಗೆಲುವು ಖಾತ್ರಿಯಾಗುತ್ತಿದ್ದಂತೆ ಭಟ್ಕಳ ಪಟ್ಟಣ್ಣದಲ್ಲಿ ಜಮಾಯಿಸಿದ ಅವರ ಅಭಿಮಾನಿಗಳು ಹಾಗೂ ಬೆಂಬಲಿಗರು ತಮ್ಮ ನೆಚ್ಚಿನ ನಾಯಕನ ಪರ ಘೋಷಣೆಗಳನ್ನು ಕೂಗಿದ್ದಾರೆ.

ಮೆರವಣಿಗೆ ನಗರದ ಪ್ರಮುಖ ವೃತ್ತ ತಲುಪಿದ ಸಮಯದಲ್ಲಿ ಯುವಕರು ಮಂಕಾಳು ವೈದ್ಯ ಭಾವಚಿತ್ರವಿರುವ ಧ್ವಜ, ಅಂಬೇಡ್ಕರ್‌, ಕೇಸರಿ ಹಾಗೂ ಮುಸ್ಲಿಂ ಧ್ವಜವನ್ನು ಹಾರಿಸಿದ್ದಾರೆ.

ಇದನ್ನೂ ಓದಿ: ಜನತೆ ಬಿಜೆಪಿಯ ಹಿಂದುತ್ವ ರಾಜಕೀಯವನ್ನು ತಿರಸ್ಕರಿಸಿ, ಕಾಂಗ್ರೆಸ್​ ಬಂಧುತ್ವವನ್ನು ಪುರಸ್ಕರಿಸಿದ್ದಾರೆ: ಸಿದ್ದರಾಮಯ್ಯ

ವಿಡಿಯೋ ವೈರಲ್​

ಇನ್ನು ಯುವಕರ ಈ ಕಾರ್ಯಕ್ಕರ ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದು ಅವರ ನಡೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.

ಇನ್ನು ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು ಯುವಕರ ನಡೆಗೆ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ಧಾರೆ.

Latest Posts

ಲೈಫ್‌ಸ್ಟೈಲ್