More

    IPL 2023| ಬ್ಯಾಟ್ಸ್​ಮ್ಯಾನ್​​ಗಳ ಉಪಯುಕ್ತ ಕೊಡುಗೆ; LSGಗೆ 7 ವಿಕೆಟ್​ ಜಯ

    ಹೈದರಾಬಾದ್​: ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮ್ಯಾನ್​ಗಳಾದ ಪ್ರೇರಕ್​ ಮಂಕದ್​, ಮಾರ್ಕಸ್​ ಸ್ಟೋಯಿನಿಸ್, ನಿಕೋಲಸ್​ ಪೂರನ್​​ ಉಪಯುಕ್ತ ಆಟದ ಫಲವಾಗಿ ಲಖನೌ ಸೂಪರ್​ ಜೈಂಟ್ಸ್​ ತಂಡವು ಸನ್​ರೈಸರ್ಸ್​ ಹೈದರಾಬಾದ್​ ವಿದುದ್ಧ 7 ವಿಕೆಟ್​ಗಳ ಜಯ ಸಾಧಿಸಿದೆ.

    ಹೈದರಾಬಾದಿನ ರಾಜೀವ್​ ಗಾಂಧಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಸನ್​ರೈಸರ್ಸ್​ ತಂಡವು 6 ವಿಕೆಟ್​ ನಷ್ಟಕ್ಕೆ 20 ಓವರ್​ಗಳಲ್ಲಿ 182ರನ್​ ಗಳಿಸಿತ್ತು.

    ಆಧರಿಸಿದ ಕ್ಲಾಸಿನ್​-ಸಮದ್​

    ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ ಮಾಡಿದ ಸನ್​ರೈಸರ್ಸ್​ ಆರಂಭಿಕ ಅನ್​​ಮೋಲ್​ಪ್ರೀತ್​ ಸಿಂಗ್​(36 ರನ್​, 27 ಎಸೆತ, 7 ಬೌಂಡರಿ), ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮ್ಯಾನ್​ಗಳಾದ ಹೆನ್ರಿಚ್​ ಕ್ಲಾಸಿನ್​(47 ರನ್​, 29 ಎಸೆತ, 3 ಬೌಂಡರಿ, 3 ಸಿಕ್ಸರ್​), ಅಬ್ದುಲ್​ ಸಮದ್​(37 ರನ್​, 25 ಎಸೆತ, 1 ಬೌಂಡರಿ, 4 ಸಿಕ್ಸರ್​) ಸ್ಪೋಟಕ ಬ್ಯಾಟಿಂಗ್​ ಫಲವಾಗಿ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 182ರನ್​ ಗಳಿಸಿತ್ತು.

    ಲಖನೌ ಪರ ಕೃಣಾಲ್​ ಪಾಂಡ್ಯ(4-0-24-2), ಯಶ್​ ಠಾಕೂರ್​(4-0-28-1), ಅಮಿತ್​​ ಮಿಶ್ರಾ(4-0-40-1), ಯುದ್​ವೀರ್​​ ಸಿಂಗ್​(3-0-24-1), ಆವೇಶ್​ ಖಾನ್​(2-0-30-1), ರವಿ ಬಿಷ್ಣೋಯಿ(2-0-23-0), ಕೈಲ್​ ಮೇಯರ್ಸ್​​(1-0-11-0) ರನ್​ ನೀಡಿ ವಿಕೆಟ್​ ಪಡೆದಿದ್ದಾರೆ.

    ಇದನ್ನೂ ಓದಿ: ಜನತೆ ಬಿಜೆಪಿಯ ಹಿಂದುತ್ವ ರಾಜಕೀಯವನ್ನು ತಿರಸ್ಕರಿಸಿ, ಕಾಂಗ್ರೆಸ್​ನ​ ಬಂಧುತ್ವವನ್ನು ಪುರಸ್ಕರಿಸಿದ್ದಾರೆ: ಸಿದ್ದರಾಮಯ್ಯ

    ಬ್ಯಾಟ್ಸ್​ಮ್ಯಾನ್​​ಗಳ ಉಪಯುಕ್ತ ಕೊಡುಗೆ

    ಗುರಿ ಬೆನ್ನತ್ತಿದ್ದ ಲಖನೌ ತಂಡವು ಮಧ್ಯಮ ಕ್ರಮಾಂಕದ ಕ್ರಮಾಂಕದ ಬ್ಯಾಟ್ಸ್​ಮ್ಯಾನ್​ ಪ್ರೇರಕ್​ ಮಂಕದ್​(64 ರನ್​, 45 ಎಸೆತ, 7 ಬೌಂಡರಿ, 2 ಸಿಕ್ಸರ್​), ನಿಕೋಲಸ್​ ಪೂರನ್​(44 ರನ್​, 13 ಎಸೆತ, 3 ಬೌಂಡರಿ, 4 ಸಿಕ್ಸರ್​​), ಮಾರ್ಕಸ್​​ ಸ್ಟೋಯಿನಿಸ್​(40 ರನ್​, 25 ಎಸೆತ, 2 ಬೌಂಡರಿ, 3 ಸಿಕ್ಸರ್​) ಸ್ಪೋಟಕ ಬ್ಯಾಟಿಂಗ್​ ಫಲವಾಗಿ ಲಖನೌ ತಂಡವು ಗುರಿಯನ್ನು 19.2 ಓವರ್​ಗಳಲ್ಲಿ 3 ವಿಕೆಟ್​ ನಷ್ಟಕ್ಕೆ 185 ರನ್​ ಗಳಿಸಿ ಗೆಲುವಿನ ನಗೆ ಬೀರಿತ್ತು.

    ಸನ್​ರೈಸರ್ಸ್​ ಪರ ಭುವನೇಶ್ವರ್​ ಕುಮಾರ್​(4-0-30-0), ಮಯಾಂಕ್​ ಮಾರ್ಕಂಡೆ(3-0-39-1), ಅಭಿಷೇಕ್​ ಶರ್ಮಾ(3-0-42-1), ಗ್ಲೆನ್​ ಫಿಲಿಪ್ಸ್​​(2-0-10-1), ಟಿ. ನಟರಾಜನ್​(4-0-31-0), ಫಾರೂಕಿ(3.2-0-32-0) ರನ್​ ನೀಡಿ ವಿಕೆಟ್​ ಪಡೆದಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts