ಮುಸ್ಲಿಮರ ಸ್ಮಶಾನದಲ್ಲಿ ಹಿಂದುಗಳ ಶವ ಸಂಸ್ಕಾರ...; 3 ತಿಂಗಳಲ್ಲಿ 253 ಮೃತದೇಹಗಳಿಗೆ ಅಂತ್ಯಕ್ರಿಯೆ

Khabarstan
Published on

ಮುಂಬೈ: ಮುಸ್ಲಿಮರ ಖಬರಸ್ತಾನ (ಸ್ಮಶಾನ)ದಲ್ಲಿ ಹಿಂದುಗಳ ಅಂತ್ಯಕ್ರಿಯೆ...ಅದೂ ಉಚಿತವಾಗಿ...!

ಇಂಥದ್ದೊಂದು ಐಕ್ಯತೆಗೆ ಉದಾಹರಣೆಯಾದ ಘಟನೆ ನಡೆಯುತ್ತಿರುವುದು ಮುಂಬೈನ ಮರೀನ್​ ಲೈನ್ಸ್​ನಲ್ಲಿರುವ ಮುಸ್ಲಿಮರ ಸ್ಮಶಾನದಲ್ಲಿ.

ಕಳೆದ ಮೂರು ತಿಂಗಳಿಂದ ಸುಮಾರು 253 ಹಿಂದುಗಳ ಮೃತದೇಹದ ಅಂತ್ಯಕ್ರಿಯೆನ್ನು ಸ್ಮಶಾನದ ಸಿಬ್ಬಂದಿ ನಡೆಸಿದ್ದಾರೆ. ಅದಕ್ಕಾಗಿ ಅವರು ಬಿಡಿಗಾಸು ಪಡೆದಿಲ್ಲ.

ಮರಿನ್​ ಲೈನ್ಸ್​ನಲ್ಲಿರುವ ಬಾಬಾ ಖಬರ್​ಸ್ತಾನದ ಆಡಳಿತದಿಂದ ಆ್ಯಂಬುಲೆನ್ಸ್​ ಸೇವೆ ಕೂಡ ಇದೆ. ಯಾವುದೇ ಧರ್ಮದವರೂ ಕರೆ ಮಾಡಬಹುದು.ಇವರೇ ಹೋಗಿ ಆ ಶವವನ್ನು ತಂದು, ಅಂತ್ಯಕ್ರಿಯೆ ನಡೆಸುತ್ತಾರೆ.

ಅದರಲ್ಲೂ ಕೊವಿಡ್​-19 ಸಾಂಕ್ರಾಮಿಕದಿಂದಾಗಿ ಮೃತದೇಹಗಳನ್ನು ಮುಟ್ಟಲು ಕೆಲವರು ಭಯಪಡುವ ಪರಿಸ್ಥಿತಿ ಇದೆ. ಆಂಬುಲೆನ್ಸ್​ ಚಾಲಕರೂ ಸಹ ಅಂಥ ರೋಗಿಗಳ ಶವ ತರಲು ಹಿಂದೇಟು ಹಾಕುತ್ತಿದ್ದಾರೆ. ಹೀಗಿರುವಾಗ ಬಾಬಾ ಖಬರ್​ಸ್ತಾನ್​ನ ಸಿಬ್ಬಂದಿ ಸದ್ದಿಲ್ಲದೆ ತಮ್ಮ ಒಳ್ಳೆಯ ಕೆಲಸದಲ್ಲಿ ನಿರತರಾಗಿದ್ದಾರೆ. ಇದನ್ನೂ ಓದಿ: ಗ್ಯಾಂಗ್​​​ಸ್ಟರ್​ ವಿಕಾಸ್​ ದುಬೆ ಮನೆಯನ್ನು ಕೆಡವಿ, ಎರಡು ಕಾರನ್ನು ಧ್ವಂಸ ಮಾಡಿದ ಕಾನ್ಪುರ ಜಿಲ್ಲಾಡಳಿತ

ಅಷ್ಟಕ್ಕೂ ಇವರು ಆಂಬುಲೆನ್ಸ್​ ತಂದಿದ್ದೂ ಕೂಡ ವಿಚಿತ್ರ. ಆಸ್ಪತ್ರೆಗಳು ಸರಿ ಇಲ್ಲ ಎಂದು ಬದಿಗೊತ್ತಿದ್ದ, ತುಂಬ ವರ್ಷಗಳಿಂದ ಒಂದೆಡೆ ನಿಂತಿದ್ದ ಆಂಬುಲೆನ್ಸ್​ಗಳನ್ನು, ದುರಸ್ತಿ ಪಡಿಸಿಕೊಂಡು ಸೇವೆ ನೀಡುತ್ತಿದ್ದಾರೆ ಎಂದು ಅಲ್ಲಿನ ಸ್ಥಳೀಯ ಮಾಧ್ಯಮ ವರದಿ ಮಾಡಿದೆ.

ರಸ್ತೆ ಬದಿಯಲ್ಲಿ ಬಿದ್ದಿರುವ ಅನಾಥ ಶವಗಳನ್ನೂ ತಂದು ಮಣ್ಣು ಮಾಡುತ್ತಿದ್ದಾರೆ. ಬಾಬಾ ಖಬರ್​ಸ್ತಾನ್​ ಸ್ಮಶಾನದ ಸಿಬ್ಬಂದಿ ಸುಮಾರು 10 ತಂಡಗಳನ್ನು ರಚಿಸಿಕೊಂಡು ಈ ಕೆಲಸದಲ್ಲಿ ನಿರತರಾಗಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net