

Murder: ತಂದೆ-ತಾಯಿ ಕೆಲಸಕ್ಕೆ ಹೋದ ಸಮಯದಲ್ಲಿ 12 ವರ್ಷದ ಬಾಲಕಿಯೊಬ್ಬಳನ್ನು ಮನೆಯಲ್ಲಿ ಒಬ್ಬಂಟಿಯಾಗಿದ್ದಾಗ ಭೀಕರವಾಗಿ ಕೊಲೆ ಮಾಡಿರುವ ಘಟನೆ ತೆಲಂಗಾಣದ ಹೈದರಾಬಾದ್ ನ ಕುಕಟ್ಪಲ್ಲಿಯಲ್ಲಿ ನಡೆದಿದೆ ಎಂದು ಸೋಮವಾರ(ಆಗಸ್ಟ್ 18) ವರದಿಯಾಗಿದೆ.
ಕುಕಟ್ಪಲ್ಲಿಯ ಸಂಗೀತ ನಗರದಲ್ಲಿ ಈ ದುಷ್ಕೃತ್ಯ ನಡೆದಿದೆ. ಬಾಲಕಿಯನ್ನು ಸಹಸ್ರಾಣಿ(12)ಎಂದು ಗುರುತಿಸಲಾಗಿದೆ. ಕೊಲೆ ಬಳಿಕ ಸ್ಥಳೀಯರು ನೋಡಿ, ಕುಕಟ್ಪಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪರಿಶೀಲನೆ ನಡೆಸಿದ್ದಾರೆ.
ಬಾಲಕಿಯ ಸಾವಿನ ಬಗ್ಗೆ ಹಲವು ಅನುಮಾನಗಳು ವ್ಯಕ್ತವಾಗುತ್ತಿವೆ. ತಮ್ಮ ಮಗು ಸತ್ತು ಬಿದ್ದಿರುವುದನ್ನು ನೋಡಿ, ಮನೆಯಲ್ಲಿದ್ದಿದ್ದರೆ ತಮ್ಮ ಮಗ ಕೂಡ ಸಾವನ್ನಪ್ಪುತ್ತಿದ್ದನೇನೋ ಎಂದು ಮಗುವಿನ ಪೋಷಕರು ಅಳುತ್ತಿದ್ದಾರೆ.ಪೋಷಕರ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮೃತ ಸಹಸ್ರಾಣಿ ಪೋಷಕರಾದ ರೇಣುಕಾ ಮತ್ತು ಕೃಷ್ಣ ಖಾಸಗಿ ಕಂಪನಿಯ ಉದ್ಯೋಗಿಗಳು. ಕೆಲವು ತಿಂಗಳಿನಿಂದ ಕುಕಟ್ಪಲ್ಲಿಯಲ್ಲಿ ವಾಸಿಸುತ್ತಿದ್ದಾರೆ. ಕೆಲಸದ ನಿಮಿತ್ತ ಪೋಷಕರು ಆಫೀಸ್ಗೆ ಹೋಗಿದ್ದಾಗ ಕೊಲೆ ನಡೆದಿದೆ ಎಂದು ಪೊಲೀಸ್ ಅಧಿಕಾರಿಗಳು ಹೇಳಿದ್ದಾರೆ. (ಏಜೆನ್ಸೀಸ್)