ಮಹೇಶ್​ ಬಾಬು ಚಿತ್ರ ರಿ-ರಿಲೀಸ್​! ಕೈಮುಗಿತೀನಿ ಚಿತ್ರಮಂದಿರದಲ್ಲಿ ಇಂತಹ ಕೆಲಸ ಮಾಡ್ಬೇಡಿ: ನಿರ್ದೇಶಕ ವಂಶಿ ಗರಂ

ಆಂಧ್ರಪ್ರದೇಶ: ಟಾಲಿವುಡ್​ ಪ್ರಿನ್ಸ್ ಮಹೇಶ್ ಬಾಬು ಜನ್ಮದಿನ ಸಂಭ್ರಮದ ಹಿನ್ನಲೆ ಅವರು ಅಭಿನಯಿಸಿದ್ದ 2001ರ ಬ್ಲಾಕ್​ಬಸ್ಟರ್​ ‘ಮುರಾರಿ’ ಚಿತ್ರವನ್ನು ಇಂದು ಮತ್ತೊಮ್ಮೆ ಚಿತ್ರಮಂದಿರಗಳಲ್ಲಿ ಮರುಬಿಡುಗಡೆ ಮಾಡಲಾಯಿತು. ಇದು ಮಹೇಶ್ ಅಭಿಮಾನಿಗಳಿಗೆ ಭಾರೀ ಸಂತಸ ನೀಡಿದ್ದು, ಥಿಯೇಟರ್​ ತುಂಬ ಪ್ರೇಕ್ಷಕರಿಂದ ಸಂಭ್ರಮಾಚರಣೆ ನಡೆಯುತ್ತಿದೆ. ಎಲ್ಲೆಡೆ ಖುಷಿ ವಾತಾವರಣ ಕೂಡಿದ್ದರೆ, ಇತ್ತ ಚಿತ್ರದ ನಿರ್ದೇಶಕ ಕೃಷ್ಣ ವಂಶಿ ಮಾತ್ರ ಪ್ರಿನ್ಸ್​ ಫ್ಯಾನ್ಸ್ ವಿರುದ್ಧ ತೀವ್ರ ಅಸಮಾಧಾನ ಹೊರಹಾಕಿದ್ದಾರೆ.

ಇದನ್ನೂ ಓದಿ: ಟಾಮ್​ ಆ್ಯಂಡ್​ ಜೆರ್ರಿ ಹಾಸ್ಯಾಸ್ಪದವಲ್ಲ.. ಹಿಂಸಾತ್ಮಕ; ಹೀಗೆಳಿದ್ದೇಕೆ ಅಕ್ಷಯ್​ ಕುಮಾರ್​​

ಕಲ್ಟ್ ಕ್ಲಾಸಿಕ್​ ‘ಮುರಾರಿ’ ಸಿನಿಮಾ ರೀ-ರಿಲೀಸ್ ಆಗುತ್ತಿದೆ ಎಂಬ ಖುಷಿಯಲ್ಲಿ ಅಭಿಮಾನಿಗಳು ಚಿತ್ರಮಂದಿರಗಳನ್ನು ಆವರಿಸಿಕೊಂಡಿದ್ದು, ಕೇಕ್ ಕತ್ತರಿಸಿ, ನಟನ ಫೋಟೋಗಳಿಗೆ ಹಾಲಿನ ಅಭಿಷೇಕ ನೆರವೇರಿಸಿ, ಖುಷಿ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಒಂದೆರೆಡು ಥಿಯೇಟರ್​​ಗಳಲ್ಲಿ ಮಾತ್ರ ಅಹಿತಕರ ಘಟನೆಗಳು ನಡೆದಿವೆ. ಇದು ನಿರ್ದೇಶಕರ ಗಮನಕ್ಕೆ ಬಂದಿರುವುದೇ ಅವರ ಅತೀವ ಬೇಸರಕ್ಕೆ ಕಾರಣವಾಗಿದೆ. ಆ ವಿಡಿಯೋಗಳು ಇದೀಗ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿವೆ.

ಸಿನಿಮಾ ಬೆಳ್ಳಿ ಪರದೆಯ ಮೇಲೆ ಬರುತ್ತಿದ್ದಂತೆ ಯುವಕನೊಬ್ಬ ಯುವತಿಗೆ ತಾಳಿ ಕಟ್ಟಿದ್ದಾನೆ.  ಈ ಜೋಡಿ ಚಿತ್ರದ ಮಧ್ಯೆಯೇ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದೆ.. ಇನ್ನು ಅವರ ಸ್ನೇಹಿತರು ಅಕ್ಷತೆ ಕಾಳನ್ನು ಎಸೆದಾಡುವ ಮೂಲಕ ವಿಚಿತ್ರವಾಗಿ ಮದುವೆ ಮಾಡಿಸಿ, ಸಂಭ್ರಮಿಸಿದ್ದಾರೆ. ಈ ದೃಶ್ಯಗಳು ಪ್ರೇಕ್ಷಕರ ಮೊಬೈಲ್ ಕ್ಯಾಮರಾದಲ್ಲಿ ಸೆರೆಯಾಗಿದೆ. ಮತ್ತೊಂದು ವಿಡಿಯೋದಲ್ಲಿ ಇಬ್ಬರು ವಯಸ್ಸಾದ ಜೋಡಿ ಪರಸ್ಪರ ತುಟಿಗೆ ಚುಂಬಿಸಿದ್ದಾರೆ. ಇದು ನೋಡುಗರಿಗೆ ಭಾರೀ ಮುಜುಗರ ಉಂಟುಮಾಡಿದ್ದು, ಇದು ನಿರ್ದೇಶಕ ವಂಶಿ ಅವರ ಗಮನಕ್ಕೆ ಬಂದಿದೆ. ಈ ಕುರಿತು ಚಿತ್ರದ ನಿರ್ದೇಶಕರು ಮಹೇಶ್ ಬಾಬು ಫ್ಯಾನ್ಸ್ ವಿರುದ್ಧ ಗರಂ ಆಗಿದ್ದಾರೆ.

ಇದನ್ನೂ ಓದಿ: ಟಾಮ್​ ಆ್ಯಂಡ್​ ಜೆರ್ರಿ ಹಾಸ್ಯಾಸ್ಪದವಲ್ಲ.. ಹಿಂಸಾತ್ಮಕ; ಹೀಗೆಳಿದ್ದೇಕೆ ಅಕ್ಷಯ್​ ಕುಮಾರ್​​

“ಇದ್ಯಾವುದು ಸರಿಯಿಲ್ಲ. ನಮ್ಮ ಹಿಂದಿನ ತಲೆಮಾರಿನಿಂದ ಬಂದಿರುವಂತ ಸಂಸ್ಕೃತಿ, ಸಂಪ್ರದಾಯ, ಪದ್ಧತಿಗಳನ್ನು ಯಾವುದೇ ಕಾರಣಕ್ಕೂ ಈ ರೀತಿ ಹಾಳುಮಾಡಬೇಡಿ ಮತ್ತು ಅಗೌರವಿಸಬೇಡಿ. ನಿಮ್ಮಲ್ಲಿ ಮನವಿ ಮಾಡುತ್ತೇನೆ. ದಯವಿಟ್ಟು ಇಂತಹ ಕೆಲಸವನ್ನು ಮುಂದೆ ಮಾಡಬೇಡಿ, ಅರ್ಥ ಮಾಡಿಕೊಳ್ಳಿ. ಇದರಿಂದ ನೀವುಗಳು ಕೆಟ್ಟ ಉದಾಹರಣೆ ಸೃಷ್ಟಿ ಮಾಡುತ್ತಿದ್ದೀರಿ” ಎಂದು ಗರಂ ಆಗಿ ಹೇಳಿದ್ದಾರೆ,(ಏಜೆನ್ಸೀಸ್).

ಪಾಕ್​ಗೆ ಸಲಹೆ ಕೊಡುವ ಮೊದಲು ನಿಮ್ಮ ಪ್ರದರ್ಶನ ಹೇಗಿದೆ ನೋಡ್ಕೊಳ್ಳಿ: ರೋಹಿತ್ ಪಡೆ ವಿರುದ್ಧ ತನ್ವಿರ್​ ಕಿಡಿ

Share This Article

ಒಂದು ತಿಂಗಳು ಬೇಳೆಕಾಳುಗಳನ್ನು ತಿನ್ನೋದು ಬಿಟ್ಟರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ಉಪಯುಕ್ತ ಮಾಹಿತಿ….

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…

ಪೋಷಕರೇ ಹುಷಾರ್‌! ಅಪ್ಪಿತಪ್ಪಿಯೂ ಮಕ್ಕಳ ಮುಂದೆ ಪೋಷಕರು ಈ ಕೆಲಸಗಳನ್ನು ಮಾಡಬೇಡಿ

 ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…

ನಿಮ್ಮ ಅಂಗೈನಲ್ಲಿ ಮೀನಿನ ಚಿಹ್ನೆ ಇದ್ರೆ ಏನಾಗುತ್ತೆ ಗೊತ್ತಾ? ಇಲ್ಲಿದೆ ನೋಡಿ ಅಚ್ಚರಿಯ ಸಂಗತಿ…

ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…