

ಯಾದಗಿರಿ: ಕರೊನಾ ಸೋಂಕಿನ ನಿಯಂತ್ರಣಕ್ಕೆಂದು ಲಾಕ್ಡೌನ್ ಜಾರಿಗೊಳಿಸಲಾಗಿದೆ. ಅಗತ್ಯ ಸಾಮಾಗ್ರಿ ವಸ್ತುಗಳಿಗೆ ಬೆಳಗ್ಗೆ ನಾಲ್ಕು ತಾಸು ಬಾಗಿಲು ತೆಗೆಯಲು ಅವಕಾಶವಿದ್ದರೆ, ಅದನ್ನು ಬಿಟ್ಟು ಬೇರಾವ ಅಂಗಡಿಯನ್ನೂ ತೆರೆಯದಿರುವಂತೆ ನಿಯಮ ಹೇರಲಾಗಿದೆ. ಆದರೂ ಕದ್ದು ಮುಚ್ಚಿ ಬಟ್ಟೆ ಅಂಗಡಿಯಲ್ಲಿ ವ್ಯಾಪಾರ ಮಾಡುತ್ತಿದ್ದವರನ್ನು ನಗರಸಭೆ ಕಮಿಷನರ್ ಸಿನಿಮಾ ಶೈಲಿಯಲ್ಲಿ ಹಿಡಿದಿರುವ ಘಟನೆ ಯಾದಗಿರಿಯಲ್ಲಿ ನಡೆದಿದೆ.
ಯಾದಗಿರಿಯಲ್ಲಿ ಸಂಪೂರ್ಣ ಲಾಕ್ಡೌನ್ ಜಾರಿಯಲ್ಲಿದೆ. ನಿಷೇಧವಿದ್ದರೂ ಕಾನೂನು ಬಾಹಿರವಾಗಿ ಬಟ್ಟೆ ಅಂಗಡಿ ತೆರೆದು ಬಟ್ಟೆ ಮಾರಾಟ ಮಾಡುತ್ತಿರುವುದು ಯಾದಗಿರಿ ನಗರಸಭೆ ಕಮಿಷನರ್ ಬಿ.ಟಿ ನಾಯಕ್ ಕಣ್ಣಿಗೆ ಬಿದ್ದಿದೆ. ವ್ಯಾಪಾರಸ್ಥರ ಚಲನವಲನಗಳನ್ನು ಕಾದು ಗಮನಿಸಿದ ಕಮಿಷನರ್ ಬಟ್ಟೆ ಖರೀದಿಸಿದವರ ಮೇಲೆ ಸಿನಿಮಾ ಶೈಲಿಯಲ್ಲಿ ಅಟ್ಯಾಕ್ ಮಾಡಿದ್ದಾರೆ.
ಸುಮಾರು ದೂರದಿಂದಲೇ ಓಡಿ ಹೋಗಿ ಬಟ್ಟೆ ಖರೀದಿಸಿದವರನ್ನು ವಶಕ್ಕೆ ಪಡೆದೆದಿದ್ದಾರೆ. ಅವರೊಂದಿಗೆ ತಹಶಿಲ್ದಾರರ ಚನ್ನಮಲ್ಲಪ್ಪ ಕೂಡ ಸಾಥ್ ನೀಡಿದ್ದು, ಬಟ್ಟೆ ಅಂಗಡಿ ಮಾಲೀಕನನ್ನು ಹಿಡಿಯಲಾಗಿದೆ. ಸದ್ಯ ಬಟ್ಟೆ ಅಂಗಡಿ ಸೀಚ್ ಮಾಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.