ಭಾರತಕ್ಕೆ ವಿಶ್ವ ನಾಯಕತ್ವ ಕಾಲ ಸನ್ನಿಹಿತ : ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿಕೆ

New Project (19)
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ಸಾರ್ವಭೌಮತೆ, ರಾಷ್ಟ್ರ ರಕ್ಷಣೆ ನಮ್ಮ ಹಕ್ಕು ಎಂಬುದನ್ನು ತೋರಿಸುತ್ತಿರುವ ಭಾರತ ಬದಲಾವಣೆ ಸಂದೇಶವನ್ನು ಜಗತ್ತಿಗೆ ನೀಡುತ್ತಿದೆ. ಉಗ್ರ ಚಟುವಟಿಕೆಗಳನ್ನು ಹತ್ತಿಕ್ಕುವ ಧೈರ್ಯ, ಹಕ್ಕು, ಜವಾಬ್ದಾರಿ ನಮ್ಮದು ಎಂಬುದನ್ನು ಸಾಬೀತುಪಡಿಸಿದೆ. ಮುಂದಿನ ದಿನಗಳಲ್ಲಿ ಭಾರತ ವಿಶ್ವದ ನಾಯಕತ್ವ ವಹಿಸುವ ಕಾಲ ಸನ್ನಿಹಿತವಾಗಿದೆ ಸಂಸದ ಕ್ಯಾ.ಬ್ರಿಜೇಶ್ ಚೌಟ ಹೇಳಿದರು.

ಮುಂಡಾಜೆ ಅನುದಾನಿತ ಕನ್ನಡ ಮಾಧ್ಯಮ ಪ್ರೌಢಶಾಲೆಯ ನೂತನ ಕಟ್ಟಡ ‘ಸಿಂಧೂರ’ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಶುಕ್ರವಾರ ಶಿಲಾಫಲಕ ಅನಾವರಣಗೊಳಿಸಿ ಮಾತನಾಡಿದರು.

ಶಾಸಕ ಹರೀಶ್ ಪೂಂಜ ಮಾತನಾಡಿ, ಭಾರತೀಯ ವಿಚಾರಧಾರೆ ಶಿಕ್ಷಣವನ್ನು ವಿವೇಕಾನಂದ ವಿದ್ಯಾಸಂಸ್ಥೆಗಳು ನೀಡುತ್ತಿವೆ. ನಮ್ಮ ಸಂಸ್ಕೃತಿ ಎತ್ತಿ ಹಿಡಿಯುವ ಶಿಕ್ಷಣ ಪದ್ಧತಿಯಿಂದ ಮಕ್ಕಳು ಸತ್ಪ್ರಜೆಗಳಾಗಿ ಜೀವನ ನಡೆಸುವಂತಾಗುತ್ತದೆ ಎಂದರು.

ರೋಟರಿ ಜಿಲ್ಲೆ 3181ರ ಗವರ್ನರ್ ವಿಕ್ರಂ ದತ್ತ ಕಾರ್ಯಕ್ರಮ ಉದ್ಘಾಟಿಸಿದರು. ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಅಧ್ಯಕ್ಷತೆ ವಹಿಸಿದ್ದರು. ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಶತಾಬ್ದಿ ವಿದ್ಯಾಲಯ ಸಮಿತಿ ಅಧ್ಯಕ್ಷ ಶ್ರೀಧರ ಜಿ.ಭಿಡೆ, ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷ ಪೂರನ್ ವರ್ಮ, ರೋಟರಿ ಬೆಂಗಳೂರು ಇಂದಿರಾ ನಗರದ ಅಧ್ಯಕ್ಷೆ ಸುಪ್ರಿಯಾ ಕಂದಾರಿ ಶುಭಹಾರೈಸಿದರು.

ಮುಂಡಾಜೆ ಗ್ರಾಪಂ ಅಧ್ಯಕ್ಷ ಗಣೇಶ ಬಂಗೇರ, ಉದ್ಯಮಿ ಕೆ.ಮೋಹನ್ ಕುಮಾರ್, ಉದ್ಯಮಿ ಕಿರಣ ಚಂದ್ರ ಡಿ.ಪುಷ್ಪಗಿರಿ, ವಿವೇಕಾನಂದ ವಿದ್ಯಾವರ್ಧಕ ಸಂಘ ಕಾರ್ಯದರ್ಶಿ ಡಾ.ಕೃಷ್ಣ ಭಟ್, ಮುಂಡಾಜೆ ವಿವೇಕಾನಂದ ವಿದ್ಯಾಸಂಸ್ಥೆಗಳ ಅಧ್ಯಕ್ಷ ವಿನಯ ಚಂದ್ರ, ಉಜಿರೆ ಶ್ರೀ ಜನಾರ್ದನ ದೇವಸ್ಥಾನ ಆನುವಂಶೀಯ ಆಡಳಿತ ಮೊಕ್ತೇಸರ ಶರತ್ ಕೃಷ್ಣ ಪಡುವೆಟ್ನಾಯ, ರೋಟರಿ ಕ್ಲಬ್ ಕಾರ್ಯದರ್ಶಿ ಸಂದೇಶ್ ರಾವ್, ಮಾಜಿ ಕಾರ್ಯದರ್ಶಿ ವಿದ್ಯಾ ಕುಮಾರ್ ಕಾಂಚೋಡು, ಮುಖ್ಯ ಶಿಕ್ಷಕಿ ಜಯಂತಿ ಮತ್ತಿತರರು ಉಪಸ್ಥಿತರಿದ್ದರು. ರೋಟರಿ ಕ್ಲಬ್ ಮಾಜಿ ಅಧ್ಯಕ್ಷ ಅನಂತ ಭಟ್ ಮಚ್ಚಿಮಲೆ ಸ್ವಾಗತಿಸಿದರು. ಮುಂಡಾಜೆ ಪ್ರೌಢಶಾಲೆ ಸಂಚಾಲಕ ನಾರಾಯಣ ಫಡಕೆ ಮತ್ತು ಧನಂಜಯ ರಾವ್ ಕಾರ್ಯಕ್ರಮ ನಿರೂಪಿಸಿದರು.

ಸಹಕರಿಸಿದವರಿಗೆ ಸನ್ಮಾನ

ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ರೋಟರಿ ಕ್ಲಬ್ ಬೆಳ್ತಂಗಡಿ, ರೋಟರಿ ಬೆಂಗಳೂರು ಇಂದಿರಾ ನಗರ, ಕ್ಯಾನ್ ಫಿನ್ ಹೋಂ ಬೆಂಗಳೂರು ಮತ್ತಿತರ ದಾನಿಗಳ ನೆರವಿನಿಂದ 2.25 ಕೋಟಿ ರೂ. ವೆಚ್ಚದ ಕಟ್ಟಡ ನಿರ್ಮಾಣಕ್ಕೆ ಸಹಕರಿಸಿದ ಪ್ರತಾಪ ಸಿಂಹ ನಾಯಕ್, ಅನಂತ ಭಟ್ ಮಚ್ಚಿಮಲೆ, ವಿದ್ಯಾ ಕುಮಾರ್ ಕಾಂಚೋಡು, ಕೇಶವ ಪ್ರಸಾದ್ ಎಸ್ ಮದಂಗಲ್ಲು, ಕೆ.ಮೋಹನ್ ಕುಮಾರ್, ಸುಪ್ರಿಯಾ ಕಂದಾರಿ, ನಾರಾಯಣ ಗೌಡ, ಪ್ರಕಾಶ್ ನಾರಾಯಣ್ ರಾವ್ ಹಾಗೂ ಇತರರನ್ನು ಗೌರವಿಸಲಾಯಿತು.

ಬೆಳ್ತಂಗಡಿ ರೋಟರಿ ಕ್ಲಬ್ ಅಧ್ಯಕ್ಷನಾದಾಗ ಶಾಲೆಗೆ ಹೊಸ ಕಟ್ಟಡ ನಿರ್ಮಾಣ ಮಾಡುವ ಕನಸು ಕಂಡೆ. ಇದಕ್ಕಾಗಿ ಉಜಿರೆ ಬದುಕು ಕಟ್ಟೋಣ ತಂಡ ಮೋಹನ್ ಕುಮಾರ್, ರೋಟರಿ ಸದಸ್ಯರ ಸಲಹೆ ಪಡೆದೆ. ಬೆಂಗಳೂರು ಇಂದಿರಾನಗರ ರೋಟರಿಯವರ ಬೆಂಬಲ ಸಿಕ್ಕಿತು. ಅನೇಕ ದಾನಿಗಳೂ ನೆರವು ನೀಡಿದರು. ಇಂದು ಸುವ್ಯವಸ್ಥಿತ ಕಟ್ಟಡ ನಿರ್ಮಾಣವಾಗಿದ್ದು, ನನ್ನ ಕುಟುಂಬ, ಕಾರ್ಯದರ್ಶಿ ವಿದ್ಯಾ ಕುಮಾರ್ ಕಾಂಚೋಡು ಸಹಕರಿಸಿದ್ದಾರೆ. ಅನಂತ್ ಭಟ್ ಮಚ್ಚಿಮಲೆ ಕಟ್ಟಡದ ರೂವಾರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net