More

    ರಸ್ತೆಯಲ್ಲಿ ಉಗುಳಿ 33 ಲಕ್ಷ ರೂಪಾಯಿ ದಂಡ ಕಕ್ಕಿದ ಮುಂಬೈಕರರು!

    ಮುಂಬೈ : ಕಳೆದ 10 ತಿಂಗಳಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಉಗುಳಿದ್ದಕ್ಕಾಗಿ ಬರೋಬ್ಬರಿ 33 ಲಕ್ಷ ರೂ.ಗಳ ದಂಡವನ್ನು ಬೃಹನ್​ಮುಂಬೈ ಮುನಿಸಿಪಲ್ ಕಾರ್ಪೊರೇಷನ್(ಬಿಎಂಸಿ) ಸಂಗ್ರಹಿಸಿದೆ. ಅಧಿಕೃತ ಮಾಹಿತಿಯ ಪ್ರಕಾರ ಬಿಎಂಸಿ ನೇಮಿಸಿದ್ದ ಕ್ಲೀನ್​-ಅಪ್​ ಮಾರ್ಶಲ್​ಗಳು 16,659 ನಾಗರೀಕರಿಂದ ಈ ದಂಡದ ಮೊತ್ತವನ್ನು ಪಡೆದಿದ್ದಾರೆ.

    ಕರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಮಾಸ್ಕ್​ ತೊಡುವುದರೊಂದಿಗೆ, ಉಗುಳದಿರುವಂತೆ ಬಿಎಂಸಿ ಆದೇಶ ಹೊರಡಿಸಿದ್ದು, ಅದರ ವ್ಯಾಪ್ತಿಯಲ್ಲಿ ರಸ್ತೆಯಲ್ಲಿ ಉಗುಳಿದವರಿಗೆ ತಲಾ 200 ರೂ.ಗಳ ದಂಡ ವಿಧಿಸಲಾಗುತ್ತದೆ. ಗರಿಷ್ಠ ದಂಡವಾದ 5.59 ಲಕ್ಷ ರೂ.ಗಳನ್ನು ಕುರ್ಲಾ ಮತ್ತು ಸಕಿನಾಕ ಪ್ರದೇಶಗಳಿರುವ ಎಲ್​ ವಾರ್ಡ್​ ಒಂದರಿಂದಲೇ 2,888 ಪ್ರಕರಣಗಳಲ್ಲಿ ಸಂಗ್ರಹಿಸಲಾಗಿದೆ ಎನ್ನಲಾಗಿದೆ.

    ಇದನ್ನೂ ಓದಿ: ಜುಲೈ 11 ರಂದು ಹೊಸ ರಾಜ್ಯಪಾಲರ ಪ್ರಮಾಣ ವಚನ

    ಇದರೊಂದಿಗೆ, ಬಿಎಂಸಿಯು ಸುಮಾರು 29.71 ಲಕ್ಷ ನಾಗರೀಕರಿಂದ, ಮಾಸ್ಕ್​ ಹಾಕದೆ ಓಡಾಡಿದ್ದಕ್ಕಾಗಿ, 59.82 ಕೋಟಿ ರೂ.ಗಳ ದಂಡವನ್ನು ಕಲೆಹಾಕಿದೆ. ಕರೊನಾ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಕಡ್ಡಾಯವಾದ ಮಾಸ್ಕ್ಅನ್ನು ಧರಿಸದೆ ತಿರುಗಾಡುವ ಮಂದಿಗೆ ತಲಾ 200 ರೂ.ಗಳ ದಂಡ ಬೀಳುತ್ತದೆ. (ಏಜೆನ್ಸೀಸ್)

    ಬಂಗಾಳ : ವಿಪಕ್ಷ ನಾಯಕ ಸುವೇಂದು ಅಧಿಕಾರಿ ವಿರುದ್ಧ ಕೊಲೆ ಪ್ರಕರಣ

    VIDEO | ರಜನೀಕಾಂತ್​ ಅನುಕರಣೆಯ ಫ್ಲಾಪ್ ಶೋ!

    ರಾತ್ರೋರಾತ್ರಿ ಶ್ರೀಮಂತಳಾದ ಪತ್ನಿ: ತಾನು ಸತ್ತುಹೋದ ದಾಖಲೆ ನೋಡಿ ಬೆಚ್ಚಿಬಿದ್ದ ಪತಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts