Mumbai Customs: ವಿಮಾನ ನಿಲ್ದಾಣದಲ್ಲಿ ಇಬ್ಬರು ಪ್ರಯಾಣಿಕರ ಬಂಧನ: 1.25 ಕೋಟಿ ಮೌಲ್ಯದ ಚಿನ್ನ ಪತ್ತೆ

Mumbai Airport
Published on

ಮುಂಬೈ: ವಿಮಾನ ನಿಲ್ದಾಣದಲ್ಲಿ ಇಬ್ಬರು ಪ್ರಯಾಣಿಕರನ್ನು ತನಿಖೆಗೆ ಒಳಪಡಿಸಿದ ಕಸ್ಟಮ್ಸ್ ಇಲಾಖೆ(Mumbai Customs) 1.25 ಕೋಟಿ ಮೌಲ್ಯದ ಚಿನ್ನಾಭರಣ ವಶಪಡಿಸಿಕೊಂಡಿದೆ.

ವಶಪಡಿಸಿಕೊಂಡ ಚಿನ್ನ 1.725 ಕೆಜಿ ತೂಕವಿದೆ. ಪ್ರಯಾಣಿಕ ತನ್ನ ಒಳ ಉಡುಪುಗಳಲ್ಲಿ ಚಿನ್ನವನ್ನು ಬಚ್ಚಿಟ್ಟಿದ್ದ. ಮತ್ತೊಂದು ಪ್ರಕರಣದಲ್ಲಿ 33 ಲಕ್ಷ ಮೌಲ್ಯದ ಚಿನ್ನ ಮತ್ತು 6 ಲಕ್ಷ ಮೌಲ್ಯದ ಸೆಲ್​ಫೋನ್‌ಗಳೊಂದಿಗೆ ಪ್ರಯಾಣಿಕನೊಬ್ಬನನ್ನು ಕಸ್ಟಮ್ಸ್ ಅಧಿಕಾರಿಗಳು ಬಂಧಿಸಿದ್ದಾರೆ.

ದುಬೈನಿಂದ ಬ್ಯಾಂಕಾಕ್‌ಗೆ ಪ್ರಯಾಣಿಸುತ್ತಿದ್ದ ಪ್ರಯಾಣಿಕರು ಇವರಾಗಿದ್ದು, ಗುಪ್ತಚರ ಮಾಹಿತಿ ಆಧಾರದ ಮೇಲೆ ಆರೋಪಿಗಳನ್ನು ಏರ್ ಇಂಟೆಲಿಜೆನ್ಸ್ ಯುನಿಟ್ (ಎಐಯು) ಪತ್ತೆಹಚ್ಚಿದೆ ಎಂದು ಮುಂಬೈ ಕಸ್ಟಮ್ಸ್ ತಿಳಿಸಿದೆ.

24 ಕ್ಯಾರೆಟ್ ಚಿನ್ನದ ಮೂರು ಬಿಸ್ಕೆಟ್​ಗಳು ಪತ್ತೆಯಾಗಿವೆ ಎಂದು ಕಸ್ಟಮ್ಸ್ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಚಿನ್ನದ ಮೌಲ್ಯ 1.25 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ವಿಚಾರಣೆ ವೇಳೆ, ಈ ಚಿನ್ನವನ್ನು ಮತ್ತೊಬ್ಬ ಪ್ರಯಾಣಿಕ ತನಗೆ ಹಸ್ತಾಂತರಿಸಿರುವುದಾಗಿ ಪ್ರಯಾಣಿಕರು ಹೇಳಿಕೊಂಡಿದ್ದಾರೆ.

ಘಟನೆ ಬಳಿಕ ಎಐಯು ವಿಮಾನ ನಿಲ್ದಾಣದಲ್ಲಿ ತೀವ್ರ ಶೋಧ ಕಾರ್ಯಾಚರಣೆಯನ್ನು ಪ್ರಾರಂಭಿಸಿತು ಪ್ರಾಥಮಿಕ ತನಿಖೆಯಲ್ಲಿ ವಿಮಾನ ನಿಲ್ದಾಣದ ಉದ್ಯೋಗಿ ಮತ್ತು ಇತರ ಪ್ರಯಾಣಿಕರ ನಡುವೆ ಸಂಬಂಧವಿರುವುದು ಕಂಡುಬಂದಿದೆ. ಅಧಿಕಾರಿಗಳ ಪ್ರಕಾರ, ಆರೋಪಿಗಳು ಈ ಹಿಂದೆ ಎರಡು ಬಾರಿ ಕಳ್ಳಸಾಗಣೆ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net