ಇಂಡಿಯನ್​​-2 ಸಿನಿಮಾಗೆ ಮಲ್ಟಿಪ್ಲೆಕ್ಸ್​​​ ಅಸೋಸಿಯೇಷನ್​​ನಿಂದ ಲೀಗಲ್​ ನೋಟಿಸ್; ಕಾರಣ ಹೀಗಿದೆ​​

Untitled-design-5-2
Published on

ಮುಂಬೈ: ಇಂಡಿಯನ್​-2 ಸಿನಿಮಾ ಬಿಡುಗಡೆಯಾಗಿ ಸ್ವಲ್ಪ ದಿನಗಳಲ್ಲೇ ಒಟಿಟಿ ಪ್ಲಾಟ್​ಫಾರ್ಮ್​​ನಲ್ಲಿ ಸ್ಟ್ರೀಮಿಂಗ್​ ಆಗಲಿದೆ ಎಂದು ಹೇಳಲಾಗುತಿತ್ತು. ಬಳಿಕ ಹೊಂದಾಣಿಕೆ ಆಗದೆ ಆ ವಿಷಯ ಮತ್ತೆ ಮುನ್ನೆಲೆಗೆ ಬರಲಿಲ್ಲ. ಆದರೀಗ ಇಂಡಿಯನ್​-2 ಸಿನಿಮಾಗೆ ಸಂಕಷ್ಟ ಎದುರಾಗಿದೆ. ಇಂಡಿಯನ್​ ಸಿನಿಮಾ ಒಟಿಟಿ ನಿಯಮಗಳನ್ನು ಉಲ್ಲಂಘಿಸಿದೆ ಎಂದು ಮಲ್ಟಿಪ್ಲೆಕ್ಸ್​​​ ಅಸೋಸಿಯೇಷನ್​ ಆಫ್​ ಇಂಡಿಯಾ ಲೀಗಲ್​​ ನೋಟಿಸ್​ ನೀಡಿದೆ.

ಮಲ್ಟಿಪ್ಲೆಕ್ಸ್​​​ ಅಸೋಸಿಯೇಷನ್​​ ಆಪ್​ ಇಂಡಿಯಾ ಕೆಲವು ನಿಯಮಗಳನ್ನು ಮಾಡಿದೆ. ಸಿನಿಮಾಗಳು ಬಿಡುಗಡೆಯಾದ 8 ವಾರಗಳ ಬಳಿಕ ಮಾತ್ರ ಚಿತ್ರಗಳನ್ನು ಒಟಿಟಿಯಲ್ಲಿ ಬಿಡುಗಡೆ ಮಾಡಬೇಕು. ಸಿನಿಮಾ ನಿರ್ಮಾಪಕರು ಇದನ್ನು ಅನುಸರಿಸುವುದು ಅಗತ್ಯವಾಗಿದೆ. ಒಂದು ವೇಳೆ ಈ ನಿಯಮಗಳನ್ನು ಉಲ್ಲಂಘಿಸಿದರೆ ನಿರ್ಮಾಪಕರು ವಿರುದ್ಧ ಕಾನೂನು ಕ್ರಮಕೈಗೊಳ್ಳಲಾಗುತ್ತದೆ. ಹಾಗೂ ಈ ನಿಯಮಗಳನ್ನು ಪಾಲಿಸದಿದ್ದರೆ 3 ನ್ಯಾಷನಲ್​ ಮಲ್ಟಿಪ್ಲೆಕ್ಸ್​​ಗಳಾದ PVR Inox, Cinepolisನಲ್ಲಿ ಸಿನಿಮಾವನ್ನು ಬಿಡುಗಡೆ ಮಾಡುವುದಿಲ್ಲ.

ಆದರೆ ಇಂಡಿಯನ್​-2 ಸಿನಿಮಾದ ನಿರ್ಮಾಪಕರು ಈ ಮಾರ್ಗಸೂಚಿಗಳನ್ನು ಒಪ್ಪಿಕೊಂಡ ಬಳಿಕ ಚಿತ್ರ ಬಿಡುಗಡೆಯಾಗಿದೆ. ಆದರೆ ಇಂಡಿಯನ್​​-2 ಒಟಿಟಿ ಬಿಡುಗಡೆ ವಿಚಾರ ತಿಳಿದು ಅಸೋಸಿಯೇಷನ್​​ ನಿರ್ಮಾಪಕರ ವಿರುದ್ಧ ಗರಂ ಆಗಿದೆ. ಜುಲೈ 12ರಂದು ಬಿಡುಗಡೆಯಾದ ಚಿತ್ರವನ್ನು ಆಗಸ್ಟ್​ 9ರಂದು ಒಟಿಟಿಯಲ್ಲಿ ಸ್ಟ್ರೀಮಿಂಗ್​ ಮಾಡಲಾಗಿದೆ. ಸಿನಿಮಾ ಬಿಡುಗಡೆಯಾದ 8 ವಾರಗಳ ನಂತರ ಅಂದರೆ ಸೆಪ್ಟೆಂಬರ್ 6ರಂದು ಸ್ಟ್ರೀಮ್​ ಮಾಡಬೇಕಿತ್ತು. ಆದರೆ ಇಂಡಿಯನ್​​-2 ಹಿಂದಿ ಆವೃತ್ತಿಯನ್ನು ನೆಟ್‌ಫ್ಲಿಕ್ಸ್‌ನಲ್ಲಿ ಸ್ಟ್ರೀಮ್ ಮಾಡಲಾಗುತ್ತಿದೆ ಎಂದು ಅಸೋಸಿಯೇಷನ್​ ಹೇಳುತ್ತಿದೆ.

ಇಂಡಿಯನ್​ 2 ಸಿನಿಮಾದಲ್ಲಿ ಕಮಲ್ ಹಾಸನ್ ಜತೆಗೆ ರಾಕುಲ್​​ ಪ್ರೀತ್ ಸಿಂಗ್, ಸಿದ್ಧಾರ್ಥ್, ಪ್ರಿಯಾ ಭವಾನಿ ಶಂಕರ್, ಬ್ರಹ್ಮಾನಂದಂ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಇಂಡಿಯನ್​ 3 ಸಿನಿಮಾ 2025ರಲ್ಲಿ ಬಿಡುಗಡೆಯಾಗಲಿದೆ. ಸಿನಿಮಾದಲ್ಲಿ ಸೇನಾಪತಿಯ ತಂದೆಯ ಕಥೆಯನ್ನು ನೋಡುತ್ತೇವೆ. ಕಮಲ್ ಹಾಸನ್ ಸೇನಾಪತಿಯ ತಂದೆಯ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇವರ ಜತೆಗೆ ಕಾಜಲ್ ಅಗರ್ವಾಲ್ ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಇಂಡಿಯನ್​ 2 ಸಿನಿಮಾದ ಕೊನೆಯಲ್ಲಿ ಇಂಡಿಯನ್ 3 ಟೀಸರ್ ಕೂಡ ಬಿಡುಗಡೆಯಾಗಿದೆ. ಟೀಸರ್​​​ನಲ್ಲಿ ಚಿತ್ರದಲ್ಲಿ ಸೇನಾಪತಿಯ ಪಾತ್ರದ ತಂದೆಯ ಕಥೆಯನ್ನು ಪ್ರೇಕ್ಷಕರಿಗೆ ಹೇಗೆ ತೋರಿಸಲಿದ್ದಾರೆ ಹಾಗೂ ಸ್ವಾತಂತ್ರ್ಯ ಪೂರ್ವದ ಕಥೆಯನ್ನು ಒಳಗೊಂಡಿದೆ ಎಂಬುದು ಇದರಿಂದ ಸ್ಪಷ್ಟವಾಗಿದೆ.(ಏಜೆನ್ಸೀಸ್​​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net