

ಉಪ್ಪಳ: ಕೇರಳ ಸರ್ಕಾರದ ಕಾಸರಗೋಡು ಅಭಿವೃದ್ಧಿ ಪ್ಯಾಕೇಜ್(ಕೆ.ಡಿ.ಪಿ)ನಡಿ ಮುಳಿಂಜ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ನೂತನ ಶಾಲಾ ಕಟ್ಟಡಕ್ಕೆ ಗುರುವಾರ ಮಂಜೇಶ್ವರ ಶಾಸಕ ಎ.ಕೆ.ಎಂ.ಅಶ್ರಫ್ ಶಿಲಾನ್ಯಾಸ ನೆರವೇರಿಸಿದರು.
ಮಂಗಲ್ಪಾಡಿ ಗ್ರಾಪಂ ಅಧ್ಯಕ್ಷೆ ರುಬಿನ ನೌಫಲ್ ಅಧ್ಯಕ್ಷತೆ ವಹಿಸಿದ್ದರು. ಮಂಜೇಶ್ವರ ಶಾಸಕ ಎ.ಕೆ.ಎಂ ಆಶ್ರಫ್ ಶಿಲಾನ್ಯಾಸ ನೆರವೇರಿಸಿದರು. ಕಾಸರಗೋಡು ಕೆ.ಡಿ.ಪಿ.ಯ ಅಭಿಯಂತ ಸಲಾಹ್ ಮುಖ್ಯ ಅತಿಥಿಯಾಗಿದ್ದರು. ಲೋಕೋಪಯೋಗಿ ಇಲಾಖೆ ಮುಖ್ಯ ಅಭಿಯಂತ ಯಮುನಾ ವರದಿ ವಾಚಿಸಿದರು.
ಜಿಪಂ ಸದಸ್ಯ ಗೋಲ್ಡನ್ ರಹಮಾನ್, ಬ್ಲಾಕ್ ಪಂಚಾಯಿತಿ ಉಪಾಧ್ಯಕ್ಷ ಮೊಹಮ್ಮದ್ ಹನೀಫ್ ಪಿ.ಕೆ., ಆರೋಗ್ಯ ಮತ್ತು ವಿದ್ಯಾಭ್ಯಾಸ ಸ್ಥಾಯಿ ಸಮಿತಿ ಅಧ್ಯಕ್ಷೆ ಇರ್ಫಾನಾ ಇಕ್ಬಾಲ್, ಸದಸ್ಯ ಅಬ್ದುಲ್ ರೆಹಮಾನ್ ಟಿ.ಎಂ., ಮಂಜೇಶ್ವರ ವಿದ್ಯಾಧಿಕಾರಿ ಜಾರ್ಜ್ ಕ್ರಾಸ್ತಾ ಸಿ.ಎಚ್., ಮಂಜೇಶ್ವರ ಬಿ.ಆರ್.ಸಿ.ಯ ಬಿ.ಪಿ.ಸಿ. ಸುಮಾದೇವಿ, ಪಿ.ಟಿ.ಎ. ಅಧ್ಯಕ್ಷ ಇಬ್ರಾಹಿಂ ಹನೀಫ್, ಗುತ್ತಿಗೆದಾರ ಆಶ್ರಫ್, ಉದ್ಯಮಿ ಅಬೂಬಕರ್, ಪಿ.ಟಿ.ಎ. ಉಪಾಧ್ಯಕ್ಷೆ ಸೈಬುನಿಸ, ಶಾಲಾಭಿವೃದ್ಧಿ ಸಮಿತಿ ಪದಾಧಿಕಾರಿಗಳಾದ ಇಸ್ಮಾಯಿಲ್, ಸುಜಾತಾ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕಿ ಚಿತ್ರಾವತಿ ಚಿಗುರುಪಾದೆ ಸ್ವಾಗತಿಸಿದರು. ಪಿಟಿಎ ಉಪಾಧ್ಯಕ್ಷ ಇಂತಿಯಾಸ್ ವಂದಿಸಿದರು. ಹಿರಿಯ ಶಿಕ್ಷಕ ರಿಯಾಸ್ ಪೆರಿಂಗಡಿ ಕಾರ್ಯಕ್ರಮ ನಿರೂಪಿಸಿದರು.