ಕೃಷಿಯಲ್ಲಿ ನಿರತ ನಿವೃತ್ತ ಸೈನಿಕರಿಗೆ ಗೌರವ

New Project (8)
Published on

ಬೆಳ್ತಂಗಡಿ: ಉಜಿರೆಯ ತಾಲೂಕು ರಬ್ಬರು ಬೆಳೆಗಾರರ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ಸಂಘದಲ್ಲಿ ಸಂಘದ ಅಧ್ಯಕ್ಷ ಶ್ರೀಧರ್ ಜಿ.ಭಿಡೆ ಧ್ವಜಾರೋಹಣ ನೆರವೇರಿಸಿದರು.

ಎಂಸಿಎಫ್ ಮಂಗಳೂರು ಸಹಭಾಗಿತ್ವದೊಂದಿಗೆ ಜೈ ಜವಾನ್ ಜೈ ಕಿಸಾನ್ ಆಶಯದಂತೆ ಕೃಷಿಯಲ್ಲಿ ತೊಡಗಿಸಿಕೊಂಡಿರುವ ನಿವೃತ್ತ ಸೈನಿಕರಾದ ಎ.ಕೆ.ಶಿವನ್ ಉಜಿರೆ, ಗೋಪಾಲಕೃಷ್ಣ ಭಟ್ ಕಾಂಚೋಡು, ತಂಗಚ್ಚನ್ ಧರ್ಮಸ್ಥಳ ಅವರನ್ನು ಸನ್ಮಾನಿಸಲಾಯಿತು.

ಉಪಾಧ್ಯಕ್ಷ ಅನಂತ ಭಟ್ ಎಂ., ನಿರ್ದೇಶಕರಾದ ಬಾಲಕೃಷ್ಣ ಗೌಡ, ಜಯಶ್ರೀ ಡಿ.ಎಂ., ಭೈರಪ್ಪ, ಎಂಸಿಎಫ್ ಸಿಬ್ಬಂದಿ ತೇಜಸ್ವಿ ಮತ್ತು ಸಂಘದ ಸಿಬ್ಬಂದಿ ಉಪಸ್ಥಿತರಿದ್ದರು. ಸಿಇಒ ರಾಜು ಶೆಟ್ಟಿ ಸ್ವಾಗತಿಸಿದರು. ಎಂಸಿಎಫ್ ಮಂಗಳೂರು ಮಾರಾಟ ಅಧಿಕಾರಿ ಮನೋಜ್ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net