ಮುಕೇಶ್ ಅಂಬಾನಿಯವರ 15,000 ಕೋಟಿ ರೂ. ಭವ್ಯ ಬಂಗಲೆಯಲ್ಲಿ ಇಷ್ಟೊಂದು ಐಷಾರಾಮಿ ಸೌಲಭ್ಯಗಳಿವೆಯಾ? Antilia

Antilia

Antilia : ಏಷ್ಯಾದ ಅತಿದೊಡ್ಡ ಬಿಲಿಯನೇರ್ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಚೇರ್ಮನ್​ ಮುಕೇಶ್ ಅಂಬಾನಿ ( Mukesh Ambani ) ಮತ್ತು ಅವರ ಕುಟುಂಬಕ್ಕೆ ಸಂಬಂಧಿಸಿದ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಆಗಾಗ ವೈರಲ್​ ಆಗುತ್ತಲೇ ಇರುತ್ತವೆ.

ಅಂಬಾನಿ ಕುಟುಂಬದಲ್ಲಿ ಸಂಪತ್ತಿಗೆ ಯಾವುದೇ ಕೊರತೆ ಇಲ್ಲ. ದೇಶದ ಜಿಡಿಪಿಯ ಶೇ. 10 ರಷ್ಟು ಆಸ್ತಿ ಅಂಬಾನಿ ಕುಟುಂಬದವರ ಬಳಿಯಿದೆ. ಈ ಕುಟುಂಬ ಏನೇ ಮಾಡಿದರೂ ಅಲ್ಲೊಂದು ಅದ್ಧೂರಿತನ ಇದ್ದೇ ಇರುತ್ತದೆ. ಅದಕ್ಕೆ ತಾಜಾ ಉದಾಹರಣೆ ಇತ್ತೀಚೆಗಷ್ಟೇ ನಡೆದ ಅಂಬಾನಿ ದಂಪತಿಯ ಕಿರಿಯ ಪುತ್ರ ಅನಂತ್​ ಅಂಬಾನಿ ಮದುವೆ. ಭಾರತವಷ್ಟೇ ಅಲ್ಲ, ಇಡೀ ವಿಶ್ವವೇ ಈ ಮದುವೆಯನ್ನು ತಿರುಗಿ ನೋಡಿತು. ಈ ಮದುವೆಗೆ ಅಂಬಾನಿ ಕುಟುಂಬ 5000 ಕೋಟಿ ರೂ. ಖರ್ಚು ಮಾಡಿದೆ. ಈ ಹಣವು ಅವರ ಆಸ್ತಿ ಮೌಲ್ಯದ ಶೇ. 0.5 ರಷ್ಟು ಮಾತ್ರ ಎಂಬುದೇ ಅಚ್ಚರಿಯ ಸಂಗತಿ.

ಇನ್ನು ಆಂಟಿಲಿಯಾ, ಮುಕೇಶ್​ ಅಂಬಾನಿ ಅವರ ಐಷಾರಾಮಿ ಮನೆ ಎಂಬುದು ಎಲ್ಲರಿಗೂ ಗೊತ್ತೇ ಇದೆ. ಇದು ವಿಶ್ವದ ಅತ್ಯಂತ ದುಬಾರಿ ನಿವಾಸಗಳಲ್ಲಿ ಒಂದಾಗಿದೆ. ಈ ಭವ್ಯ ಬಂಗಲೆ 27 ಅಂತಸ್ತನ್ನು ಒಳಗೊಂಡಿದ್ದು, ಇದರ ನಿರ್ಮಾಣಕ್ಕೆ ಬರೋಬ್ಬರಿ 15 ಸಾವಿರ ಕೋಟಿ ರೂಪಾಯಿ ಖರ್ಚಾಗಿದೆ. ಇಷ್ಟು ದೊಡ್ಡ ಮಹಲಿನಲ್ಲಿ ಅನೇಕ ಐಷಾರಾಮಿ ಸೌಲಭ್ಯಗಳಿವೆ ಎಂಬ ಸಂಗತಿ ನಿಮಗೆ ತಿಳಿದಿದೆಯೇ? ಆಂಟಿಲಿಯಾದಲ್ಲಿ ಏನೆಲ್ಲ ಸೌಲಭ್ಯಗಳಿವೆ ಅನ್ನೋದನ್ನ ನಾವೀಗ ತಿಳಿದುಕೊಳ್ಳೋಣ.

ಹೆಲಿಪ್ಯಾಡ್‌ಗಳು ಇವೆಯೇ?

ಭಾರತದ ವಾಸ್ತುಶಿಲ್ಪದ ಮೇರುಕೃತಿಯಾದ ಆಂಟಿಲಿಯಾ ಮೇಲ್ಭಾಗದಲ್ಲಿ ಮೂರು ಹೆಲಿಪ್ಯಾಡ್‌ಗಳನ್ನು ಹೊಂದಿದ್ದು, ಮುಂಬೈ ಸ್ಕೈಲೈನ್ ಮತ್ತು ಅರೇಬಿಯನ್ ಸಮುದ್ರದ ಮನಮೋಹಕ ನೋಟವನ್ನು ನೀಡುತ್ತದೆ. ರಿಕ್ಟರ್ ಮಾಪಕದಲ್ಲಿ 8ರ ತೀವ್ರತೆಯ ಭೂಕಂಪನವನ್ನು ತಡೆದುಕೊಳ್ಳುವಂತೆ ಕಟ್ಟಡವನ್ನು ವಿನ್ಯಾಸಗೊಳಿಸಲಾಗಿದೆ. ಈ ಖಾಸಗಿ ಲ್ಯಾಂಡಿಂಗ್ ಪ್ಯಾಡ್‌ಗಳನ್ನು ತ್ವರಿತ ಮತ್ತು ಸುಲಭ ವಾಯುಯಾನಕ್ಕಾಗಿ ನಿರ್ಮಿಸಲಾಗಿದೆ.

ಇದನ್ನೂ ಓದಿ: ಸುನಿತಾ ವಿಲಿಯಮ್ಸ್ ಬಂದಿಳಿದ ಕ್ರೂ ಡ್ರ್ಯಾಗನ್ ನೌಕೆ ಭೂಪ್ರದೇಶ ಬಿಟ್ಟು ಸಾಗರದಲ್ಲಿ ಇಳಿದಿದ್ದೇಕೆ? ಕಾರಣ ಹೀಗಿದೆ… Sunita Williams

ಸೌಲಭ್ಯಗಳು

1. ಮುಂಬೈಗೆ ಬರುವ ಕೆಟ್ಟ ಹವಾಮಾನದಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಆಂಟಿಲಿಯಾ ಹಿಮ ಕೊಠಡಿಯನ್ನು ಹೊಂದಿದೆ. ಒಂದು ಗುಂಡಿಯನ್ನು ಒತ್ತಿದರೆ ಸಾಕು ಕೊಠಡಿಯು ಕೃತಕ ಸ್ನೋಫ್ಲೇಕ್‌ಗಳನ್ನು ಬಿಡುಗಡೆ ಮಾಡುತ್ತದೆ ಮತ್ತು ಇಡೀ ಕೊಠಡಿಯನ್ನು ತಂಪಾಗಿಸುತ್ತದೆ ಮತ್ತು ಉಲ್ಲಾಸಕರಗೊಳಿಸುತ್ತದೆ.
2. ಆಂಟಿಲಿಯಾ ಅತಿ ದೊಡ್ಡ ಪಾರ್ಕಿಂಗ್ ಪ್ರದೇಶವನ್ನು ಹೊಂದಿದ್ದು, 168 ಕಾರುಗಳ ಸಾಮರ್ಥ್ಯ ಹೊಂದಿದೆ. ಏಳನೇ ಮಹಡಿಯಲ್ಲಿ ಕಾರು ಸರ್ವೀಸ್​ ಕೇಂದ್ರವೂ ಇದೆ.
3. ನಿವಾಸಿಗಳು ಮತ್ತು ಅತಿಥಿಗಳನ್ನು ಮಹಡಿಗಳ ನಡುವೆ ತ್ವರಿತವಾಗಿ ಸಾಗಿಸಬಲ್ಲ ಹೈ-ಸ್ಪೀಡ್ ಲಿಫ್ಟ್‌ಗಳನ್ನು ಹೊಂದಿದೆ. ಮನೆ ಸುತ್ತಲು ಸುಲಭವಾಗುತ್ತದೆ.
4. ಅಂಬಾನಿ ಕುಟುಂಬ ಆಂಟಿಲಿಯಾದ 27ನೇ ಮಹಡಿಯಲ್ಲಿ ವಾಸಿಸುತ್ತಿದೆ. 25 ಮಹಡಿಗಳಲ್ಲಿ ಜನವಸತಿಯಿಲ್ಲ. ಮುಕೇಶ್​ ಅಂಬಾನಿ ಅವರ ಇಬ್ಬರು ಪುತ್ರರು ಮತ್ತು ಕುಟುಂಬವು 27ನೇ ಮಹಡಿಯಲ್ಲಿ ವಾಸಿಸುತ್ತಿದೆ. ಕಟ್ಟಡದ ಮೇಲಿನ ಮಹಡಿಯಲ್ಲಿ ವಾಸಿಸುವ ನಿರ್ಧಾರವು ಮನೆಯ ಮುಖ್ಯಸ್ಥರಾದ ನೀತಾ ಅಂಬಾನಿಯವರದ್ದಾಗಿದೆ.
5. ಸುಮಾರು 4,00,000 ಚದರ ಅಡಿ ವಿಸ್ತೀರ್ಣದಲ್ಲಿ ಈ ಮನೆಯನ್ನು ಕಟ್ಟಲಾಗಿದ್ದು, ಥಿಯೇಟರ್, ಸ್ಪಾ, ಈಜುಕೊಳ, ಆರೋಗ್ಯ ಕೇಂದ್ರ, ಹೈಸ್ಪೀಡ್ ಲಿಫ್ಟ್, ಸ್ನೋ ರೂಮ್, 160ಕ್ಕೂ ಹೆಚ್ಚು ವಾಹನಗಳಿಗೆ ಪಾರ್ಕಿಂಗ್, ಮೂರು ಹೆಲಿಪ್ಯಾಡ್​ಗಳನ್ನು ಒಳಗೊಂಡಿದೆ.

ಅಂದಹಾಗೆ ಆಂಟಿಲಿಯಾವನ್ನು ನಾಲ್ಕು ಲಕ್ಷ ಚದರ ಅಡಿಗಳಲ್ಲಿ ನಿರ್ಮಿಸಲಾಗಿದೆ. ಇದರ ನಿರ್ಮಾಣ ವೆಚ್ಚ 15,000 ಕೋಟಿ ರೂಪಾಯಿ! ಆಂಟಿಲಿಯಾವನ್ನು ಅಮೆರಿಕನ್ ಸಂಸ್ಥೆಗಳಾದ ಪರ್ಕಿನ್ಸ್ & ವಿಲ್ ಮತ್ತು ಹಿಚ್ ಬೆಡ್ನಾರ್ ಅಸೋಸಿಯೇಟ್ಸ್ ನಿರ್ಮಿಸಿದೆ. 2008ರಲ್ಲಿ ಕಟ್ಟಡ ನಿರ್ಮಾಣ ಆರಂಭವಾಯಿತು. ಕೇವಲ ಎರಡೇ ವರ್ಷದಲ್ಲಿ ಪೂರ್ಣಗೊಂಡಿತು. ಆಂಟಿಲಿಯಾ ಕಟ್ಟಡದ ಎತ್ತರ 173 ಮೀಟರ್. ಅಟ್ಲಾಂಟಿಕ್ ಸಾಗರದಲ್ಲಿರುವ ಪೌರಾಣಿಕ ದ್ವೀಪದ ಹೆಸರನ್ನೇ ಅಂಬಾನಿ ತಮ್ಮ ನಿವಾಸಕ್ಕೆ ಇಟ್ಟರು. ಇದು ಕೇವಲ ಮನೆ ಮಾತ್ರವಲ್ಲದೆ ಜಾಗತಿಕ ಗಮನ ಸೆಳೆದ ಕಟ್ಟಡವೂ ಹೌದು.

ಈ ಭವ್ಯ ಅರಮನೆಯ ಸಂಪೂರ್ಣ ಒಳಾಂಗಣವನ್ನು ಆಕರ್ಷಕವಾಗಿ ವಿನ್ಯಾಸಗೊಳಿಸಿರುವ ವಿನ್ಯಾಸಗಾರ್ತಿ ಬಾಲಿವುಡ್​​​ನ ಸ್ಟಾರ್ ನಟನ ಪತ್ನಿ ಎಂಬುದು ರಿವೀಲ್​ ಆಗಿದೆ. ಬಾಲಿವುಡ್ ನಟ ಶಾರುಖ್ ಖಾನ್ ಅವರ ಪತ್ನಿ ಗೌರಿ ಖಾನ್ ಅಂಬಾನಿಯ ಬಹುಕೋಟಿ ವೆಚ್ಚದ ಮನೆಯ ಒಳಾಂಗಣ ವಿನ್ಯಾಸಗಾರ್ತಿ. ಗೌರಿ ಖಾನ್​​ ನಿರ್ಮಾಪಕರಾಗಿ ಮಾತ್ರವಲ್ಲದೇ ಇಂಟೀರಿಯರ್ ಡಿಸೈನರ್ ಆಗಿ ಕೂಡ ಖ್ಯಾತಿ ಗಳಿಸಿದ್ದಾರೆ. ಗೌರಿ ಖಾನ್​​ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್‌ ಮತ್ತು ರೆಡ್ ಚಿಲ್ಲೀಸ್ ಇಂಟಿರಿಯರ್​​​ ಡಿಸೈನ್​​ನ ಸಹ ಸಂಸ್ಥಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಗೌರಿ ಖಾನ್ ಅವರ ಸೃಜನಶೀಲ ಸಾಮರ್ಥ್ಯವು ಒಳಾಂಗಣ ವಿನ್ಯಾಸವನ್ನು ಮೀರಿ ವಿಸ್ತರಿಸಿದೆ. ರಣಬೀರ್ ಕಪೂರ್, ಕರಣ್ ಜೋಹರ್ ಮತ್ತು ಆಲಿಯಾ ಭಟ್ ಅವರಂತಹ ಬಾಲಿವುಡ್ ಸೆಲೆಬ್ರಿಟಿಗಳ ಮನೆಗಳನ್ನು ಗೌರಿ ಖಾನ್​ ವಿನ್ಯಾಸಗೊಳಿಸಿದ್ದಾರೆ. (ಏಜೆನ್ಸೀಸ್​)

ಸುನೀತಾ ವಿಲಿಯಮ್ಸ್​ ಭೂಮಿಗೆ ಬರೋದು ಇನ್ನೂ ಲೇಟಾಗಿದ್ರೆ ಏನಾಗ್ತಿತ್ತು? ವಿಜ್ಞಾನ ಏನು ಹೇಳುತ್ತೆ? ಇಲ್ಲಿದೆ ಮಾಹಿತಿ… Sunita Williams

ಈ 3 ರಾಶಿಯವರಿಗೆ ಭಯ ಅಂದ್ರೆ ಏನು ಅಂತಾನೇ ಗೊತ್ತಿಲ್ವಂತೆ! ನಿಮ್ಮ ರಾಶಿಯೂ ಇದೇನಾ? Zodiac Signs

Share This Article

Oil Food: ಎಣ್ಣೆ ಪದಾರ್ಥ ಆಹಾರ ತಿಂದ ನಂತರ ಈ ಕೆಲಸಗಳನ್ನು ಮಾಡಿ ಆರೋಗ್ಯಕ್ಕೆ ಒಳ್ಳೆಯದು

Oil Food: ನಮ್ಮಲ್ಲಿ ಹಲವರಿಗೆ ಯಾವಾಗಲೂ ಎಣ್ಣೆಯುಕ್ತ ಆಹಾರವನ್ನು ಸೇವಿಸಬೇಕು ಎಂದು ಅನಿಸುತ್ತದೆ. ಅಂದರೆ ನಾವು…

ಬೇಸಿಗೆಯಲ್ಲಿ ಬೇವಿನ ನೀರಿನಿಂದ ಸ್ನಾನ ಮಾಡಿದರೆ ಏನೆಲ್ಲಾ ಲಾಭಗಳಿವೆ ಗೊತ್ತಾ? Neem

Neem: ಬೇವು ಎಂದರೆ ಮೂಗು ಮುರಿಯುವ ಜನರೇ ಹೆಚ್ಚು. ಆದರೆ ಈ ಬೇವಿನಲ್ಲಿ ಎಷ್ಟೆಲ್ಲಾ ಪ್ರಯೋಜನಗಳಿವೆ…