ಮುಕೇಶ್ ಅಂಬಾನಿ ಮನೆ ಬಳಿ ಸ್ಪೋಟಕ ಪತ್ತೆ ಪ್ರಕರಣ: ತನಿಖೆ ಹೊಣೆ ಹೊತ್ತ ಎನ್​ಐಎ

mukesh
mukesh ambani
Published on

ಮುಂಬೈ: ಖ್ಯಾತ ಉದ್ಯಮಿ ಮುಕೇಶ್ ಅಂಬಾನಿ ಅವರ ಮುಂಬೈ ನಿವಾಸ ಅಂಟಿಲಿಯಾ ಬಳಿ ಕಳೆದ ತಿಂಗಳು ಸ್ಪೋಟಕ ತುಂಬಿದ ಕಾರ್​ ಒಂದು ಪತ್ತೆಯಾಗಿದ್ದ ಪ್ರಕರಣದ ತನಿಖೆಯನ್ನು ಕೇಂದ್ರ ಗೃಹ ಸಚಿವಾಲಯ ಎನ್​ಐಎ ಗೆ ವಹಿಸಿದೆ.

ಈ ಕುರಿತು ಸೋಮವಾರ ಆದೇಶ ಹೊರಡಿಸಿರುವ ಗೃಹ ಸಚಿವಾಲಯ, ಪ್ರಕರಣದ ತನಿಖೆಯನ್ನು ಮಹಾರಾಷ್ಟ್ರ ಆಂಟಿ ಟೆರರಿಮ್ ಸ್ಕ್ವಾಡ್​ನಿಂದ (ಎಟಿಎಸ್) ಎನ್​ಐಎ ಗೆ ವಹಿಸಲಾಗುತ್ತಿದೆ ಎಂದು ತಿಳಿಸಿದೆ.

ಫೆ 25 ರಂದು ಮುಕೇಶ್ ಅಂಬಾನಿ ನಿವಾಸದ ಎದುರು ಜಿಲೆಟಿನ್ ಕಡ್ಡಿಗಳನ್ನು ತುಂಬಿದ್ದ ಸ್ಕಾರ್ಪಿಯೋ ಕಾರ್​ ಒಂದು ಪತ್ತೆಯಾಗಿ ಸಾಕಷ್ಟು ಆತಂಕ ಮೂಡಿಸಿತ್ತು. ವ್ಯಾಪಕ ತನಿಖೆ ನಡೆಸಿದ್ದ ಪೊಲೀಸರು ಕಾರ್​ ಮಾಲೀಕನನ್ನು ಪತ್ತೆ ಹಚ್ಚಿದ್ದರು. ಕಾರ್​ ಮಾಲೀಕ ಎಂದು ಹೇಳಲಾದ ಮನ್​ಸುಕ್ ಹಿರೇನ್ ಎಂಬಾತ ಬಂಧನಕ್ಕೂ ಮುಂಚೆ ಅನುಮಾನಾಸ್ಪದ ರೀತಿಯಲ್ಲಿ ಮೃತಪಟ್ಟಿದ್ದ.

ಇನ್ನು ಘಟನೆ ಬೆಳಕಿಗೆ ಬಂದ ಎರಡು ದಿನದ ನಂತರ ಅನಾಮಿಕರ ಹೆಸರಿನಲ್ಲಿ, ಇದು ಟ್ರೈಲರ್ ಮಾತ್ರ ಎಂದು ಬೆದರಿಕೆ ಪತ್ರ ಕಾರ್​ನಲ್ಲಿ ಸಿಕ್ಕಿತ್ತು. ಹೀಗಾಗಿ ತನಿಖೆ ಕೈಗೆತ್ತಿಕೊಂಡಿದ್ದ ಎಟಿಎಸ್ ಉಗ್ರಗಾಮಿ ಸಂಘಟನೆಗಳ ಮೇಲೆ ಅನುಮಾನ ವ್ಯಕ್ತಪಡಿಸಿತ್ತು. ಇಷ್ಟೇ ಅಲ್ಲದೇ ಜೈಷೇ ಉಲ್ ಹಿಂದ್ ಎನ್ನುವ ಸಂಘಟನೆ ಘಟನೆ ಹೊಣೆ ಹೊತ್ತಿಕೊಂಡಿರುವುದಾಗಿ ವರದಿಯಾಗಿತ್ತು. ಆದರೆ, ನಂತರ ಆ ಸಂಘಟನೆ ಅದನ್ನು ನಿರಾಕರಿಸಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net