

ಲಖನೌ: ಉತ್ತರ ಪ್ರದೇಶದಲ್ಲಿ ಗೊಂಡಾ, ಪ್ರತಾಪ್‌ಗಢ್ ಮತ್ತು ಸಂತ ಕಬೀರ್ ನಗರ ಜಿಲ್ಲೆಗಳಲ್ಲಿ ಮೊಹರಂ ಪ್ರಯುಕ್ತ ತಾಜಿಯಾ ಮೆರವಣಿಗೆಯನ್ನು ನಡೆಸುತ್ತಿದ್ದಾಗ ಪ್ರತ್ಯೇಕ ಘಟನೆಗಳಲ್ಲಿ ಅಪ್ರಾಪ್ತ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ ಸುಮಾರು 10 ಮಂದಿ ಸುಟ್ಟ ಗಾಯಗಳಿಗೆ ಒಳಗಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಲಖಿಂಪುರ ಖೇರಿ ಜಿಲ್ಲೆಯ ಗರ್ದಾಹ ಗ್ರಾಮದಲ್ಲಿ ಮೊಹರಂ ಮೆರವಣಿಗೆ ವೇಳೆ 33,000 ವೋಲ್ಟೇಜ್ ವಿದ್ಯುತ್ ತಂತಿ ಸ್ಪರ್ಶದಿಂದ ಒಬ್ಬ ಮೃತಪಟ್ಟಿದ್ದು, 13 ಮಂದಿ ಗಾಯಗೊಂಡಿದ್ದಾರೆ.
ಕನೌಜ್ ಮತ್ತು ಬಲ್ಲಿಯಾ ಜಿಲ್ಲೆಗಳಲ್ಲಿ ಪ್ರತ್ಯೇಕ ಘಟನೆಗಳಲ್ಲಿ ಮೊಹರಂ ಮೆರವಣಿಗೆ ವೀಕ್ಷಿಸಲು ಜನ ಛಾವಣಿಗಳ ಮೇಲೇರಿದ್ದು, ಅವು ಕುಸಿದು ಒಂದು ಮಗು ಸಾವನ್ನಪ್ಪಿದೆ. 18 ಜನರು ಗಾಯಗೊಂಡಿದ್ದಾರೆ. ಗೊಂಡಾದ ಮೆರವಣಿಗೆಯಲ್ಲಿ 12 ವರ್ಷದ ಮಗು ವಿದ್ಯುತ್ ಸ್ಪರ್ಶದಿಂದ ಸಾವನ್ನಪ್ಪಿದೆ ಮತ್ತು ಇತರ ಐವರಿಗೆ ಸುಟ್ಟ ಗಾಯಗಳಾಗಿವೆ.