

ಮುಂಬೈ: ಏಷ್ಯಾದ ಶ್ರೀಮಂತ ಉದ್ಯಮಿ ಮುಖೇಶ್ ಅಂಬಾನಿ ಅವರ ಕಿರಿಯ ಪುತ್ರ ಅನಂತ್ ಅಂಬಾನಿ- ರಾಧಿಕಾ ವಿವಾಹ ಜು.12ರಂದು ಅದ್ಧೂರಿಯಾಗಿ ನಡೆದಿದೆ. ಇದೀಗ ಈ ನವ ಜೋಡಿ ಹನಿಮೂನ್ ಗೆ ಎಲ್ಲಿಗೆ ಹೋಗಲಿದ್ದಾರೆ ಎಂಬ ಕುತೂಹಲ ಹಲವರಲ್ಲಿ ಮೂಡಿದೆ. ಈ ನಿಟ್ಟಿನಲ್ಲಿ ಕೆಲವು ಸ್ಥಳಗಳಿಗೆ ಭೇಟಿ ನೀಡಬಹುದು ಎಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಮಧುಚಂದ್ರದ ಕನಸಿನ ತಾಣಗಳಾದ ದಕ್ಷಿಣ ಆಫ್ರಿಕಾದ ಕ್ರುಗರ್ ನ್ಯಾಷನಲ್ ಪಾರ್ಕ್, ಸ್ವಿಟ್ಜರ್ಲ್ಯಾಂಡ್, ಬ್ರಿಟಿಷ್ ವರ್ಜಿನ್ ದ್ವೀಪಗಳು ಅನಂತ್, ರಾಧಿಕಾ ಹನಿಮೂನ್ ಪಟ್ಟಿಯಲ್ಲಿವೆ ಎನ್ನಲಾಗಿದೆ. ಈ ತಾಣಗಳಲ್ಲಿ ಪ್ರಮುಖವಾಗಿ ದಂಪತಿ ಸೂರ್ಯಾಸ್ತದ ಕ್ರೂಸ್‌ಗಳನ್ನು ಆನಂದಿಸಬಹುದು, ಬೀಚ್‌ನಲ್ಲಿ ಕ್ಯಾಂಡಲ್‌ಲೈಟ್ ಡಿನ್ನರ್‌ಗಳು ಮತ್ತು ಪ್ಯಾಂಪರಿಂಗ್ ಸ್ಪಾ ಚಿಕಿತ್ಸೆಗಳನ್ನು ಸಹ ಆನಂದಿಸಬಹುದಾಗಿದೆ. ಹೀಗಾಗಿ ಇಂತಹ ಕಡೆ ತೆರಳಬಹುದು ಎನ್ನಲಾಗುತ್ತಿದೆ.
ಇನ್ನು ಫಿಜಿ ದ್ವೀಪವು ನವವಿವಾಹಿತರಿಗೆ ಮೆಚ್ಚಿನ ಆಯ್ಕೆಯಾಗಿದೆ. ಅದರ ಬಿಳಿ ಮರಳಿನ ಕಡಲತೀರಗಳು, ವೈಡೂರ್ಯದಂತಹ ನೀರು ಮತ್ತು ಸಮೃದ್ಧ ಉಷ್ಣವಲಯದ ಕಾಡುಗಳೊಂದಿಗೆ ಫಿಜಿ ದ್ವೀಪವು ವಿಶ್ವದ ಅತ್ಯುತ್ತಮ ಮಧುಚಂದ್ರದ ತಾಣಗಳಲ್ಲಿ ಒಂದಾಗಿದೆ. ಇದೂ ಸಹ ಅವರ ಆಯ್ಕೆಯಲ್ಲಿದೆ. ಅಷ್ಟೇ ಅಲ್ಲ, ಮಧುಚಂದ್ರಕ್ಕೆ ಸ್ವರ್ಗವಾಗಿರುವ ಬೋರಾ ಬೋರಾ ದ್ವೀಪವು ಸಹ ಅವರ ಆಯ್ಕೆಯ ಪಟ್ಟಿಯಲ್ಲಿದೆ. ನೀರಿನ ಮೇಲೆ ತೇಲುವಂತಹ ಮನೆಗಳು, ಸೊಂಪಾದ ಉಷ್ಣವಲಯದ ಸೌಂದರ್ಯಕ್ಕೆ ಹೆಸರುವಾಸಿಯಾಗಿದೆ. ಅಂದಹಾಗೆ, ಅನಂತ್ ಅಂಬಾನಿ ದಂಪತಿ ಹನಿಮೂನ್‌ಗೆ ಎಲ್ಲಿಗೆ ಹೋಗಲಿದ್ದಾರೆ ಎಂಬುದು ತಿಳಿಯಬೇಕಾದರೆ ಇನ್ನೂ ಸ್ವಲ್ಪ ದಿನ ಕಾಯಲೇಬೇಕು.