

ಕಾರ್ಕಳ: ಕಾಂತಾವರ ಗ್ರಾಮದ ಪಾಪುದಡ್ಕ ಎಂಬಲ್ಲಿರುವ ಶ್ರೀ ಬ್ರಹ್ಮ ಮುಗೇರ ದೈವಸ್ಥಾನದ ಜೀರ್ಣೋದ್ಧಾರ ಕುರಿತು ಶ್ರೀ ಕಾಂತೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಧರ್ಮದರ್ಶಿ ಡಾ. ಜೀವಂಧರ ಬಲ್ಲಾಳ್ ವಾರ್ಗದರ್ಶನದೊಂದಿಗೆ ಸವಾಲೋಚನಾ ಸಭೆ ಇತ್ತೀಚೆಗೆ ನಡೆಯಿತು.
ಶ್ರೀ ಬ್ರಹ್ಮ ಮುಗೇರ ದೈವಸ್ಥಾನದ ಜೀರ್ಣೋದ್ಧಾರ ಕಾರ್ಯವನ್ನು ದೈವ ಸಂಕಲ್ಪದಂತೆ ನಡೆಸುವುದಾಗಿ ಗ್ರಾಮಸ್ಥರ ಸಮ್ಮತಿಯಂತೆ ನಿರ್ಣಯಿಸಲಾಯಿತು. ದೀಪಾವಳಿ ಹಬ್ಬದ ನಂತರ ಪ್ರಶ್ನಾ ಚಿಂತನೆ ನಡೆಸುವುದಾಗಿ ನಿರ್ಣಯಿಸಲಾಯಿತು. ದೈವಸ್ಥಾನದ ಜೀರ್ಣೋದ್ಧಾರ ಕಾರ್ಯವನ್ನು ಯಶಸ್ವಿಯಾಗಿ ನಡೆಸಲು ಸಮಿತಿ ರಚಿಸಿ ಸಮಿತಿಗೆ ಪದಾಧಿಕಾರಿಗಳ ಆಯ್ಕೆಯನ್ನು ವಾಡಲಾಯಿತು. ಗೌರವಾಧ್ಯಕ್ಷರಾಗಿ ಡಾ.ಜೀವಂಧರ ಬಲ್ಲಾಳ್, ಅಧ್ಯಕ್ಷರಾಗಿ ಮೋಹನದಾಸ್ ಅಡ್ಯಂತಾಯ, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಸುದರ್ಶನ್ ಬಂಗೇರ ಕಾಂತಾವರ, ಜತೆ ಕಾರ್ಯದರ್ಶಿಯಾಗಿ ಗಣೇಶ್ ಪೂಜಾರಿ ಮುಂಡಲಬೈಲು, ಕೋಶಾಧಿಕಾರಿ ಗಣಪತಿ ಭಟ್ ನ್ಯಾಯತೋಟ ಆಯ್ಕೆಗೊಂಡರು.
ಅರ್ಚಕ ಕೃಷ್ಣಮೂರ್ತಿ ಭಟ್, ಮೋಹನದಾಸ್ ಅಡ್ಯಂತಾಯ, ಜಯೇಶ್ ಬಲ್ಲಾಳ್, ಗಣೇಶ್ ಪೂಜಾರಿ, ಸುದರ್ಶನ್ ಬಂಗೇರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು. ಮಹಾವೀರ ಪಾಂಡಿ ಅವರು ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿ ವಂದಿಸಿದರು.