ಅಕ್ರಮ ಸಂಪತ್ತಿನಿಂದ ಜೀವನದಲ್ಲಿ ನೆಮ್ಮದಿಯಿಲ್ಲ

hbr (2)
Published on

ಹೆಬ್ರಿ: ನಾವು ಅಕ್ರಮವಾಗಿ ಸಂಪತ್ತನ್ನು ಸಂಪಾದಿಸಿದರೆ ಅದರಿಂದ ನೆಮ್ಮದಿಯ ಜೀವನ ನಡೆಸಲು ಸಾಧ್ಯವಿಲ್ಲ. ಎಲ್ಲೆಡೆಯೂ ಭಯ ಕಾಡುತ್ತಿರುತ್ತದೆ. ನಮಗೆ ಒಳ್ಳೆಯ ಜೀವನ, ಉದ್ಯೋಗ, ಸಂಪಾದನೆ, ಸಂಪತ್ತು ಬೇಕು ನಿಜ, ಅದನ್ನು ಒಳ್ಳೆಯ ವಾರ್ಗದದಲ್ಲಿ ಕಾನೂನು ಪ್ರಕಾರ ಸಂಪಾದನೆ ವಾಡಿದರೆ ನೆಮ್ಮದಿಯ ಜೀವನ ದೊರೆಯುತ್ತದೆ ಎಂದು ವಾಜಿ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಹೇಳಿದರು.

ಹೆಬ್ರಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ವತಿಯಿಂದ 5 ದಿನಗಳ ಕಾಲ ನಡೆದ ಸುವರ್ಣ ಸಂಭ್ರಮದ ಗಣೇಶೋತ್ಸವ ಕಾರ್ಯಕ್ರಮದಲ್ಲಿ ವಾತನಾಡಿದರು.

ಸುವರ್ಣ ಸಂಭ್ರಮ ಸಮಿತಿ ಅಧ್ಯಕ್ಷ ಎಚ್. ಜನಾರ್ದನ್ ಅಧ್ಯಕ್ಷತೆ ವಹಿಸಿ ವಾತನಾಡಿ, ಸುವರ್ಣ ಸಂಭ್ರಮದ ಯಶಸ್ಸಿಗೆ ಸಹಕರಿಸಿದ ಸರ್ವರಿಗೂ ಕೃತಜ್ಞತೆ ಸಲ್ಲಿಸಿದರು.

ಸಮಿತಿಯಲ್ಲಿ ಸೇವೆ ಸಲ್ಲಿಸಿ ನಿಧನರಾದ ಹಲವರಿಗೆ ಸುವರ್ಣಸ್ಮತಿ ಗೌರವ ಸಮರ್ಪಣೆ ನಡೆಯಿತು. ಸಾಹಿತಿ ಮಂಡ್ಯದ ಡಾ.ಪ್ರದೀಪ್‌ಕುವಾರ್ ಹೆಬ್ರಿ ಅವರಿಗೆ ಸುವರ್ಣ ಪುರಸ್ಕಾರ ಪ್ರದಾನ ವಾಡಲಾಯಿತು. ಸುವರ್ಣ ಮಹೋತ್ಸವ ಸಮಿತಿ ಅಧ್ಯಕ್ಷ ಎಚ್.ಜನಾರ್ದನ್ ಅವರನ್ನು ಗೌರವಿಸಲಾಯಿತು.

ಸಮಿತಿಯ ಸ್ಥಾಪಕಾಧ್ಯಕ್ಷ ಅಮರನಾಥ ಹೆಗ್ಡೆ, ಕಾರ್ಯದರ್ಶಿ ಮೋಹನದಾಸ ನಾಯಕ್, ಬೆಂಗಳೂರು ಉದ್ಯಮಿ ಎಂ.ಕರುಣಾಕರ ಹೆಗ್ಡೆ, ಡಾ.ಭಾರ್ಗವಿ ಆರ್.ಐತಾಳ್, ಗೌರವಾಧ್ಯಕ್ಷರಾದ ಎಚ್.ಪ್ರವೀಣ್ ಬಲ್ಲಾಳ್, ಎಚ್.ಭಾಸ್ಕರ ಜೋಯಿಸ್, ಯೋಗೀಶ ಭಟ್, ಗುಂಡೂ ನಾಯಕ್, ಪ್ರಧಾನ ಕಾರ್ಯದರ್ಶಿ ಎಚ್.ರಾಜೇಶ ಆಚಾರ್ಯ ಮಠದಬೆಟ್ಟು, ಗಣೇಶೋತ್ಸವ ಸಮಿತಿ, ಮಹಿಳಾ ಸಮಿತಿ ಹಾಗೂ ವಿವಿಧ ಉಪ ಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಎಚ್.ಜನಾರ್ದನ್ ಸ್ವಾಗತಿಸಿದರು. ರಾಜೇಶ ಆಚಾರ್ಯ ಮಠದಬೆಟ್ಟು ವಂದಿಸಿದರು. ಪ್ರಸಾದ್ ಶೆಟ್ಟಿ ನಿರೂಪಿಸಿದರು.

ಪದಾಧಿಕಾರಿಗಳಿಗೆ ಗೌರವ

ಸಮಿತಿಯ ಸ್ಥಾಪಕ ಪದಾಧಿಕಾರಿಗಳಾದ ಅಮರನಾಥ ಹೆಗ್ಡೆ, ಮೋಹನದಾಸ ನಾಯಕ್, ಗಣೇಶ ನಾಯಕ್ ಮಂಗಳೂರು, ಕೆರೆದಂಡೆ ಲಕ್ಷ್ಮಣ ನಾಯಕ್, ರಾಜೀವ ಶೆಟ್ಟಿ ಕುಚ್ಚೂರು, ಚಂದ್ರಶೇಖರ ಹೆಗ್ಡೆ ಮುದ್ರಾಡಿ, ಕೆ.ಜಿ.ಗೋಪಾಲಕೃಷ್ಣ ಶಿರಿಯಾರ, ಎಚ್. ಗುಂಡೂ ನಾಯಕ್, ಎಚ್.ಭಾಸ್ಕರ ಜೋಯಿಸ್, ಪ್ರಕಾಶ ಮಲ್ಯ, ಗೋಕುಲದಾಸ ಶೆಣೈ ಉಡುಪಿ, ಶ್ರೀಕಾಂತ ಆಚಾರ್ಯ ಹೆಬ್ರಿ, ಶಶಿಧರ ಶೆಣೈ ಹೆಬ್ರಿ, ನಾಗಯ್ಯ ಶೆಟ್ಟಿ ಚಾರ, ಮನೋಹರ ಪ್ರಭು ಹೆಬ್ರಿ ಅವರಿಗೆ ಅಭಿನಂದನೆ ಸಲ್ಲಿಸಲಾಯಿತು. ವಿವಿಧ ಉಪ ಸಮಿತಿಗಳ ಸಂಚಾಲಕರು, ಪ್ರಮುಖರು, ಸದಸ್ಯರನ್ನು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net