

ಹಾಲಾಡಿ: ಕುಂದಾಪುರ ತಾಲೂಕಿನ ಶಂಕರನಾರಾಯಣ ಗ್ರಾಮದ ಹಾಲಾಡಿ-ಶಂಕರನಾರಾಯಣ ರಾಜ್ಯ ಹೆದ್ದಾರಿಯ ಕಟ್ಟೆಮಕ್ಕಿಯಲ್ಲಿರುವ ಶ್ರೀ ಬ್ರಹ್ಮಲಿಂಗೇಶ್ವರ ದೇವಸ್ಥಾನದ ಸಮಗ್ರ ಅಭಿವೃದ್ಧಿಗೆ ಯೋಜನೆ ಸಿದ್ಧಪಡಿಸಲಾಗಿದ್ದು, ಶನಿವಾರ ಕೆಸರು ಕಲ್ಲು ಮುಹೂರ್ತ, ಮುಷ್ಠಿ ಕಾಣಿಕೆ ಸಮರ್ಪಣೆ ಕ್ಷೇತ್ರದ ಪುರೋಹಿತ ಸೂರ್ಯನಾರಾಯಣ ಬಾಯರಿ ಅವರ ಧಾರ್ಮಿಕ ಮಾರ್ಗದರ್ಶನದಲ್ಲಿ ಸಂಪನ್ನಗೊಂಡಿತು.
ಆಡಳಿತ ಸಮಿತಿ ಗೌರವಾಧ್ಯಕ್ಷರಾದ ಬಂಟಕೋಡು ಶ್ರೀ ಗಣಪಯ್ಯ ಶೆಟ್ಟಿ, ಶ್ರೀ ನಾರಾಯಣ ನಾಯ್ಕ, ಕ್ರೋಡ ಶ್ರೀ ಶಂಕರನಾರಾಯಣ ದೇವಸ್ಥಾನದ ಆಡಳಿತ ಧರ್ಮದರ್ಶಿ ಶ್ರೀ ಲಕ್ಷ್ಮೀನಾರಾಯಣ ಉಡುಪ, ಶಂಕರನಾರಾಯಣ ಶ್ರೀ ವೀರ ಕಲ್ಲುಕುಟಿಗ ದೇವಸ್ಥಾನದ ಆಡಳಿತ ಧರ್ಮದರ್ಶಿ ಶ್ರೀ ಮಂಜುನಾಥ ಶೇಟ್, ಹಾಲಾಡಿ ಶ್ರೀ ಮರ್ಲುಚಿಕ್ಕು ದೈವಸ್ಥಾನದ ಆಡಳಿತ ಧರ್ಮದರ್ಶಿ ಶ್ರೀ ಅಮರನಾಥ ಶೆಟ್ಟಿ ಹಾಲಾಡಿ, ಹಾಲಾಡಿ ಮಾರಿಕಾನು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಮೊಕ್ತೇಸರರಾದ ಶ್ರೀ ಜ್ಞಾನೇಶ ಶೆಟ್ಟಿ, ಲಕ್ಕೊಳ್ಳಿ ಶ್ರೀ ಗಣಪತಿ ದೇವಸ್ಥಾನದ ಅಭಿವೃದ್ಧಿ ಕಮಿಟಿ ಅಧ್ಯಕ್ಷರಾದ ಶ್ರೀ ಎಂ.ವಿಶ್ವನಾಥ ಶೆಟ್ಟಿ ಹೆಬ್ಬಾಡಿ ಮೊದಲಾದವರು ಉಪಸ್ಥಿತರಿದ್ದರು.