ಸುಗಮ ಜೀವನಕ್ಕೆ ಶಿಕ್ಷಣವೇ ಬಂಡವಾಳ

vidyarthi vetana
vidyarthi vetana
Published on

ವಿಜಯವಾಣಿ ಸುದ್ದಿಜಾಲ ಕಾರ್ಕಳ

ಸುಗಮ ಜೀವನಕ್ಕೆ ಶಿಕ್ಷಣವೇ ಅತ್ಯುತ್ತಮ ಬಂಡವಾಳ. ಶಿಕ್ಷಣ ಉದ್ಯೋಗಕ್ಕೆ ಮಾತ್ರ ಸೀಮಿತವಾಗಿರದೆ ಜ್ಞಾನಾರ್ಜನೆ ಹಾಗೂ ಕೌಶಲ ವೃದ್ಧಿಗೂ ಅಗತ್ಯವಿದೆ. ಅಂಕಗಳಿಕೆ ಮಾನದಂಡವಾಗದೆ ಕೌಶಲಗಳತ್ತವೂ ಆದ್ಯತೆ ಇದ್ದರೆ ಜೀವನ ಅದ್ಭುತವಾಗಿರುತ್ತದೆ ಎಂದು ಕೇಮಾರು ಸಾಧನಾಶ್ರಮದ ಈಶ ವಿಠಲದಾಸ ಸ್ವಾಮೀಜಿ ಆಶೀರ್ವಚನ ನೀಡಿದರು.

ಬಜಗೋಳಿ ಜ್ಯೂನಿಯರ್ ಕಾಲೇಜಿನಲ್ಲಿ ಅಮ್ಮನ ನೆರವು ಫೌಂಡೇಶನ್ ವತಿಯಿಂದ ಕೊಡಮಾಡಿದ ವಿದ್ಯಾರ್ಥಿ ವೇತನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಶೇ.90 ಅಂಕ ಗಳಿಸಿದ ಕಾರ್ಕಳ ತಾಲೂಕಿನ ಸರ್ಕಾರಿ ಪ್ರೌಢಶಾಲೆಗಳ ವಿದ್ಯಾರ್ಥಿಗಳಿಗೆ ದಿ.ಶಿವಣ್ಣ ಶೆಟ್ಟಿ ದೇಜುಬೆಟ್ಟು ರೆಂಜಾಳ ಸ್ಮರಣಾರ್ಥ ಅವರ ಮಕ್ಕಳು ಮತ್ತು ಕುಟುಂಬಸ್ಥರಿಂದ ವಿದ್ಯಾರ್ಥಿ ವೇತನ ವಿತರಿಸಲಾಯಿತು. ಬಳಿಕ ಅಮ್ಮನ ಫೌಂಡೇಶನ್ ವತಿಯಿಂದ ಅಹಿಂಸ ಎನಿಮಲ್ ಕೇರ್ ಟ್ರಸ್ಟ್‌ಗೆ ಸಹಾಯಧನ ವಿತರಿಸಲಾಯಿತು. ಅಮ್ಮನ ನೆರವು ಫೌಂಡೇಶನ್ ಮಾರ್ಗದರ್ಶಕ ರಾಜೇಂದ್ರ ಭಟ್ ಕೆ. ಮತ್ತು ವಸಂತ್ ಎಂ. ಅವರನ್ನು ಸನ್ಮಾನಿಸಲಾಯಿತು.

ಕಾಲೇಜು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಮಹಾವೀರ್ ಜೈನ್ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯ ಕೆ.ಪಿ ಲಕ್ಷ್ಮೀನಾರಾಯಣ್ ಮತ್ತು ಸಾಹಿತಿ ರೇಷ್ಮಾ ಶೆಟ್ಟಿ ಗೋರೂರು ಶುಭಹಾರೈಸಿದರು. ಕಾರ್ಕಳದ ತಹಸೀಲ್ದಾರ್ ಪ್ರದೀಪ್ ಆರ್, ಪ್ರಮುಖರಾದ ಡಾ.ಗಣನಾಥ ಶೆಟ್ಟಿ, ಪ್ರಮಲ್ ಕುಮಾರ್, ಬೋಳ ಪ್ರಸಾದ್ ಕಾಮತ್, ಹೊಸಮಾರು ಸುರೇಶ್ ಶೆಟ್ಟಿ, ಗಣೇಶ್, ರಮಾಕಾಂತ್ ಶೆಟ್ಟಿ, ಭಾಸ್ಕರ್ ಪೂಜಾರಿ ಉಪಸ್ಥಿತರಿದ್ದರು. ಅವಿನಾಶ್ ಜಿ ಶೆಟ್ಟಿ ಸಹಕರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net