ಶಿಕ್ಷಣದ ಸದುಪಯೋಗ ಆಗಲಿ

udhgatane
ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ ಹೆಗ್ಡೆ ಉದ್ಘಾಟಿಸಿದರು.
Published on

ವಿಜಯವಾಣಿ ಸುದ್ದಿಜಾಲ ಹೆಬ್ರಿ

ಗ್ರಾಮೀಣ ಭಾಗದಲ್ಲಿ ಎಸ್‌ಆರ್ ಸಮೂಹ ಶಿಕ್ಷಣ ಸಂಸ್ಥೆ ಅನೇಕರಿಗೆ ವಿದ್ಯಾದಾನ ಮಾಡಿದೆ. ಇಲ್ಲಿ ಕಲಿಯುವ ಮಕ್ಕಳು ಸಮಾಜದಲ್ಲಿ ಧನಾತ್ಮಕ ಬದಲಾವಣೆ ತರಬೇಕು. ಯಾವುದೇ ಕೆಲಸವನ್ನು ಭ್ರಷ್ಟಾಚಾರವಿಲ್ಲದೆ, ಮಾನವೀಯ ಮೌಲ್ಯಗಳೊಂದಿಗೆ ಮಾಡಿದಾಗ ನೆಮ್ಮದಿ ಜೀವನ ಸಿಗುತ್ತದೆ. ಈ ಮೂಲಕ ಶಿಕ್ಷಣದ ಸದುಪಯೋಗ ಆಗಬೇಕೆಂದು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಎನ್.ಸಂತೋಷ ಹೆಗ್ಡೆ ಹೇಳಿದರು.

ಎಸ್.ಆರ್.ಸಮೂಹ ಶಿಕ್ಷಣ ಸಂಸ್ಥೆಯಲ್ಲಿ ಶುಕ್ರವಾರ ನವೀಕೃತ ಕೆಮಿಸ್ಟ್ರಿ ಪ್ರಯೋಗಾಲಯ ಉದ್ಘಾಟಿಸಿ ಮಾತನಾಡಿದರು.

ಎಸ್.ಆರ್. ಸಮೂಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಎಚ್.ನಾಗರಾಜ ಶೆಟ್ಟಿ ಮಾತನಾಡಿ, ವಿದ್ಯಾರ್ಥಿಗಳಿಗೆ ಒಳ್ಳೆಯ ಕಲಿಕಾ ವಾತಾವರಣ ನಿರ್ಮಾಣ ಮಾಡಲು ಪ್ರಯೋಗಾಲಯದ ನವೀಕರಣ ಮಾಡಲಾಗಿದೆ ಎಂದರು.

ಹೆಬ್ರಿಯ ಧಾರ್ಮಿಕ ಮುಂದಾಳು ಎಚ್.ಭಾಸ್ಕರ್ ಜೋಯಿಸ್, ಕಾರ್ಯದರ್ಶಿ ಸಪ್ನಾ ಎನ್.ಶೆಟ್ಟಿ, ಪ್ರಾಂಶುಪಾಲರಾದ ಪ್ರಶಾಂತ್, ಭಗವತಿ, ದೀಪಕ್ ಎನ್., ಮುಖ್ಯಶಿಕ್ಷಕ ಗೋಪಾಲ್ ಆಚಾರ್ಯ, ಪ್ರಮುಖರಾದ ಸುಕುಮಾರ್ ಮುನಿಯಾಲು, ಮಹಮ್ಮದ್ ಶರೀಫ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net