ವಿದ್ಯಾರ್ಥಿಗಳು ಸಾಹಿತ್ಯದ ಅಭಿರುಚಿ ಬೆಳೆಸಿಕೊಳ್ಳಲಿ

viveka
viveka
Published on

ಕೋಟ: ಪ್ರತಿಯೊಬ್ಬ ವಿದ್ಯಾರ್ಥಿಯಲ್ಲಿ ಸುಪ್ತ ಪ್ರತಿಭೆ ಇರುತ್ತದೆ ಅದನ್ನು ವ್ಯಕ್ತಪಡಿಸಲು ಉತ್ತಮ ಲೇಖಕರ ಕೃತಿಗಳನ್ನು ಓದಿ ಸರಿಯಾಗಿ ಅರ್ಥೈಸಿಕೊಂಡು ಕಥೆ ಕವನ, ಹನಿಗವನ ಲೇಖನಗಳನ್ನು ಬರೆಯುವ ಅಭ್ಯಾಸವನ್ನು ರೂಢಿಸಿಕೊಳ್ಳಬೇಕು. ಸಾಹಿತ್ಯವು ಮನುಷ್ಯ ಮನುಷ್ಯರ ನಡುವೆ ಸಹೃದಯತೆ ಮೂಡಿಸುತ್ತದೆ. ವಿದ್ಯಾರ್ಥಿಗಳು ಫೇಸ್ಬುಕ್, ವಾಟ್ಸಾಪ್ ಇನ್‌ಸ್ಟಾಗ್ರಾಂಗಳಲ್ಲಿ ಸಮಯ ಹಾಳು ವಾಡುವುದರ ಬದಲು ಸಾಹಿತ್ಯದಲ್ಲಿ ಅಭಿರುಚಿ ಬೆಳೆಸಿಕೊಂಡು ಹೃದಯವಂತರಾಗಬೇಕು ಎಂದು ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಂಶುಪಾಲ ಪ್ರೊ.ಬಾಲಕೃಷ್ಣ ಶೆಟ್ಟಿ ಹೇಳಿದರು.

ಕೋಟ ವಿವೇಕ ಪದವಿಪೂರ್ವ ಕಾಲೇಜಿನಲ್ಲಿ ಇತ್ತೀಚೆಗೆ ನಡೆದ ಸಾಹಿತ್ಯ ಸಂದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪ್ರಾಂಶುಪಾಲ ಜಗದೀಶ ನಾವುಡ ಸ್ವಾಗತಿಸಿ, ಉಪನ್ಯಾಸಕ ಸದಾಶಿವ ಹೊಳ್ಳ ವಂದಿಸಿದರು. ಭೂಮಿಕಾ ನಿರೂಪಿಸಿದರು. ಸಂದ ಸಂಚಾಲಕ ಚಂದ್ರಶೇಖರ ಎಚ್.ಎಸ್. ಕಾರ್ಯಕ್ರಮ ಸಂಯೋಜಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net