ಮುದಗಲ್: ಪಟ್ಟಣದ ಮೇಗಳಪೇಟೆ ದುರ್ಗಾದೇವಿ ನೂತನ ದೇವಸ್ಥಾನ ಲೋಕಾರ್ಪಣೆ ಹಾಗೂ ಜಾತ್ರೋತ್ಸವ ಶ್ರದ್ಧೆ-ಭಕ್ತಿಯಿಂದ ಮಂಗಳವಾರ ಜರುಗಿತು.

ಇದನ್ನೂ ಓದಿ: ಶ್ರೀ ದುರ್ಗಾದೇವಿ ಜಾತ್ರೆ ಪ್ರಚಾರ ಪತ್ರಿಕೆ ಬಿಡುಗಡೆ
ಮೂರು ವರ್ಷಕ್ಕೊಮ್ಮೆ ಜರುಗುವ ದುರ್ಗಾದೇವಿ ಜಾತ್ರೆ ನಿಮಿತ್ತ ಮೇಗಳಪೇಟೆಯಿಂದ ಕಿಲ್ಲಾ, ವೆಂಕಟರಾಯನಪೇಟೆ, ಚಾವಡಿಕಟ್ಟೆ, ಕುಂಬಾರಪೇಟೆ ಮಾರ್ಗದ ಮೂಲಕ ಪಟ್ಟಣದ ಪ್ರಮುಖ ಬೀದಿಗಳಲ್ಲಿ ದುರ್ಗಾದೇವಿ ಮೂರ್ತಿ ಮೆರವಣಿಗೆ ಮಾಡಲಾಯಿತು.
ಗ್ರಾಮ ಪ್ರದಕ್ಷಿಣೆ ಸಂದರ್ಭದಲ್ಲಿ ಭಕ್ತರು ಕೂಡ ಇಷ್ಟಾರ್ಥ ಸಿಧ್ಧಿಗಾಗಿ ಉಡಿತುಂಬುವುದು, ನೈವೇದ್ಯ ಸಮರ್ಪಣೆ ಜತೆಗೆ ದೀರ್ಘದಂಡ ನಮಸ್ಕಾರ ಹಾಕಿ ಹರಕೆ ತೀರಿಸಿದರು. ಮೆರವಣಿಗೆಯುದ್ದಕ್ಕೂ ಡೊಳ್ಳುಕುಣಿತ ಗಮನಸೆಳೆಯಿತು.