ಕಕಮರಿ: ಸಮೀಪದ ಬನ್ನೂರ ಗ್ರಾಮದೇವತೆ ಶ್ರೀ ದುರ್ಗಾದೇವಿ ಜಾತ್ರೆ ಏ.26ರಿಂದ 27ರ ವರೆಗೆ ಜರುಗಲಿದ್ದು, ಪ್ರಚಾರ ಪತ್ರಿಕೆಯನ್ನು ಶ್ರೀ ದುರ್ಗಾದೇವಿ ದೇವಸ್ಥಾನದ ಕಮಿಟಿ ಸದಸ್ಯರು ಶುಕ್ರವಾರ ಬಿಡುಗಡೆಗೊಳಿಸಿದರು.
ಏ.26ರಂದು ರಾತ್ರಿ 9.30ಕ್ಕೆ ಶ್ರೀ ರೇಣುಕಾದೇವಿ ನಾಟ್ಯ ಸಂಘ ಕೊಕಟನೂರ ಇವರಿಂದ ‘ಶ್ರೀ ರೇಣುಕಾ ಮಹಾತ್ಮೆ’ ಕೌಟುಂಬಿಕ ಬೈಲಾಟ ಇರುತ್ತದೆ. 27ರಂದು ಬೆಳಗ್ಗೆ 6ಕ್ಕೆ ದೇವಸ್ಥಾನದಲ್ಲಿ ಉಡಿ ತುಂಬುವ ಕಾರ್ಯಕ್ರಮ, 9ಕ್ಕೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಪಲ್ಲಕ್ಕಿ ಉತ್ಸವ ಜರುಗುವುದು.
12 ಗಂಟೆಗೆ ವೀರಗಾರಿಕೆ ಕಾರ್ಯಕ್ರಮ, ರಾತ್ರಿ 9.30ಕ್ಕೆ ಬನ್ನೂರ ಶ್ರೀ ಬಸವೇಶ್ವರ ನಾಟ್ಯ ಸಂಘದಿಂದ ‘ತುತ್ತು ಕೊಟ್ಟ ಅತ್ತಿಗೆ ಅರ್ಥಾತ ಹೆತ್ತ ತಾಯಿ’ ನಾಟಕ ಪ್ರದರ್ಶನವಿದೆ ಎಂದು ಕಮಿಟಿ ಸದಸ್ಯರು ತಿಳಿಸಿದರು. ಮಾಜಿ ಸೈನಿಕ ಚನ್ನಪ್ಪ ಶೇಗಾಂವಿ, ಮಾಜಿ ಗ್ರಾಪಂ ಸದಸ್ಯ ಅಣ್ಣಪ್ಪ ಹನಗಂಡಿ, ಪಿಕೆಪಿಎಸ್ ಅಧ್ಯಕ್ಷ ಗುರುರಾಜ ಕಾಮನ, ಲಕ್ಷ್ಮಣ ಪಾಟೀಲ, ಅಡಿವೆಪ್ಪ ಗುಗ್ಗರಿ, ಕ್ರಿಷ್ಣಾ ಹರಗಿ, ಸುಭಾಷ ಮುಂಜಿ, ಗ್ರಾಪಂ ಸದಸ್ಯ ಸುಭಾಷ ಪೂಜಾರಿ, ಪ್ರಕಾಶ ಪೂಜಾರಿ, ಹಿರಿಯರಾದ ಬಸಪ್ಪ ನಾಗರಾಳ, ರಮೇಶ ತಳಕೇರಿ, ಬಂದೆನಮಾಜ ಮುಲ್ಲಾ ಇತರರಿದ್ದರು.