

ಕೋಟ: ಧಾರ್ಮಿಕ ಪರಂಪರೆಯನ್ನು ಗಟ್ಟಿಗೊಳಿಸಲು ಮದ್ದು ಕೃಷ್ಣ ಸ್ಪರ್ಧಾ ಕಾರ್ಯಕ್ರಮ ಸಹಕಾರಿ ಈ ನಿಟ್ಟಿನಲ್ಲಿ ಸಂಘಸಂಸ್ಥೆಗಳ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಸಾಲಿಗ್ರಾಮದ ಶ್ರೀ ಗುರುನರಸಿಂಹ ದೇವಸ್ಥಾನ ಆಡಳಿತ ಮಂಡಳಿ ಅಧ್ಯಕ್ಷ ಡಾ.ಕೆ.ಎಸ್. ಕಾರಂತ ಹೇಳಿದರು.
ಭಾನುವಾರ ಸಾಲಿಗ್ರಾಮ ದೇಗುಲದ ಕೂಟ ಬಂಧು-ಭವನದಲ್ಲಿ ಸಾಲಿಗ್ರಾಮ ಶ್ರೀ ಗುರುನರಸಿಂಹ ದೇವಸ್ಥಾನ ಆಶ್ರಯದಲ್ಲಿ ಯುವ ವೇದಿಕೆ ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆ ನೇತೃತ್ವದಲ್ಲಿ ದಿ.ಇಂದಿರಾ ಮಧ್ಯಸ್ಥ ಸ್ಮರಣಾರ್ಥ ಆಯೋಜಿಸಿದ್ದ ಮುದ್ದುಕೃಷ್ಣ ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಯುವ ವೇದಿಕೆ ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆ ಅಧ್ಯಕ್ಷ ಗಿರೀಶ್ ಮಯ್ಯ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅಭ್ಯಾಗತರಾಗಿ ಕೃಷಿಕರಾದ ಪಿ.ರಘು ಮಧ್ಯಸ್ಥ, ಪಾರಂಪಳ್ಳಿ, ಕೂಟ ಮಹಾಜಗತ್ತು ಸಾಲಿಗ್ರಾಮ ಅಂಗಸಂಸ್ಥೆ ಅಧ್ಯಕ್ಷ ಪಿ.ಚಂದ್ರಶೇಖರ ಹೊಳ್ಳ, ಶ್ರೀ ಕೃಷ್ಣ ಸೊಸೈಟಿ ಸಿಇಒ ಶಶಿಧರ ಮಯ್ಯ, ಕೂಟ ಮಹಾಜಗತ್ತಿನ ಪ್ರಧಾನ ಕಾರ್ಯದರ್ಶಿ ಸುರೇಶ್ ತುಂಗ, ಗೆಳೆಯರ ಬಳಗ ಕಾರ್ಕಡ ಅಧ್ಯಕ್ಷ ಕೆ.ತಾರಾನಾಥ ಹೊಳ್ಳ, ಎ.ಪಿ.ಅಡಿಗ ಅಸೋಸಿಯೇಟ್ಸ್ ಉಳ್ಳೂರು ಮುಖ್ಯಸ್ಥ ಗಣೇಶ್ ಅಡಿಗ, ಸಾಲಿಗ್ರಾಮ ವಿಪ್ರ ಮಹಿಳಾ ವಲಯ ಅಧ್ಯಕ್ಷೆ ವನಿತಾ ಉಪಾಧ್ಯ, ನಂದಿನಿ ಮಿಲ್ಕ್ ಪಾರ್ಲರ್ ಮಾಲೀಕ ಪುಂಡಲೀಕ ಪೈ, ಯುವ ವೇದಿಕೆಯ ಗೌರವಾಧ್ಯಕ್ಷ ಕೃಷ್ಣಪ್ರಸಾದ್ ಪಿ.ವೈ.ಹೇರ್ಳೇ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಸುಜಾತಾ ಬಾಯರಿ ನಿರೂಪಿಸಿದರು. ಯುವ ವೇದಿಕೆ ಅಧ್ಯಕ್ಷ ಗಿರೀಶ್ ಮಯ್ಯ ಸ್ವಾಗತಿಸಿದರು. ಶ್ರೀಕಾಂತ್ ಐತಾಳ್ ವಂದಿಸಿದರು.
ಎರಡು 2 ವರ್ಷದ ಮಯೋಮಿತಿ ವಿಭಾಗದಲ್ಲಿ ಶ್ರೀಶ ಕೆದ್ಲಾಯ ಸಾಲಿಗ್ರಾಮ ಪ್ರಥಮ, ಜಗನ್ಮಯ್ ಬೆಂಗಳೂರು ಪ್ರಥಮ, ಅನ್ವಿ ನವೀನ್ಯ ಆಚಾರ್ ಸಾಲಿಗ್ರಾಮ ತೃತೀಯ ಬಹುಮಾನ ಪಡೆದರು. 2-4 ವರ್ಷದ ವಿಭಾಗದಲ್ಲಿ ಶೌರ್ಯ ನಕ್ಷತ್ರ ಸಾಲಿಗ್ರಾಮ ಪ್ರಥಮ, ಶ್ರೀಧರ್ ಕೆ.ಕಾಂಚನ್ ಸಾಹೇಬರಕಟ್ಟೆ ದ್ವಿತೀಯ, ರಿಷಿಕಾ ಆಚಾರ್ ಕಾಳಾವರ ತೃತೀಯ ಹಾಗೂ 4-6 ವರ್ಷದ ವಿಭಾಗದಲ್ಲಿ ವೈ.ಆರಾಧ್ಯಾ ಭಟ್ ಹಂಗಾರಕಟ್ಟೆ ಪ್ರಥಮ, ಅಗಮ್ಯ ಶೆಟ್ಟಿ ಸಿದ್ದಾಪುರ ದ್ವಿತೀಯ, ಶ್ರೀಯಾ ಕೆ. ಕಾಂಚನ ಸಾಲಿಗ್ರಾಮ ತೃತೀಯ ಬಹುಮಾನ ಪಡೆದರು.