

ಕೊಕ್ಕರ್ಣೆ: ಇಲ್ಲಿನ ಜ್ಯೋತಿ ಮಹಿಳಾ ಮಂಡಳಿ ವತಿಯಿಂದ ಕೊಕ್ಕರ್ಣೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಮುದ್ದುಕೃಷ್ಣ ಸ್ಪರ್ಧೆಯನ್ನು ಮಹಿಳಾ ಮಂಡಲದ ಅಧ್ಯಕ್ಷೆ ಬೇಬಿ ಎಸ್.ಪೂಜಾರಿ ಉದ್ಘಾಟಿಸಿದರು. ಪಂಚಾಯಿತಿ ಅಧ್ಯಕ್ಷ ಜಯಂತ ಪೂಜಾರಿ, ಸಂಜೀವ, ನಿವೃತ್ತ ಶಿಕ್ಷಕಿ ವೇದಾವತಿ ಕಿಣಿ ಮತ್ತಿತರರು ಉಪಸ್ಥಿತರಿದ್ದರು. ತೀರ್ಪುಗಾರರಾಗಿ ಹಳ್ಳಿ ಸದಾನಂದ ನಾಯಕ್, ಶಿಕ್ಷಕಿ ಶ್ರೀದೇವಿ, ಶಾಂಭವಿ ಉಡುಪ ಸಹಕರಿಸಿದರು. ಓಂಶ್ರೀ ರಾಘವೇಂದ್ರ ನಾಯಕ್ ಪ್ರಸ್ತಾವನೆಗೈದರು. ಗೌರವ ಅಧ್ಯಕ್ಷೆ ಹೀರಾ ಎಸ್. ಹೆಗ್ಡೆ ಬಹುಮಾನ ವಿತರಿಸಿದರು. ಕಾರ್ಯದರ್ಶಿ ಜ್ಯೋತಿ ಎಂ.ಪ್ರಭು ವಂದಿಸಿದರು. ಯಶೋದಾ ಗೋಪಾಲ ನಿರೂಪಿಸಿದರು. ಗುರುರಾಜ ಪೂಜಾರಿ, ಗೋಪಾಲ ನಾಯ್ಕ ಸಹಕರಿಸಿದರು. ಐವತ್ತಕ್ಕೂ ಅಧಿಕ ಸ್ಪರ್ಧಿಗಳು ಭಾಗವಹಿಸಿದ್ದರು.