ಕೊಕ್ಕರ್ಣೆ: ನಮಸ್ತೆ ಭಾರತ್ ಟ್ರಸ್ಟ್‌ನ ಸಹಕಾರದೊಂದಿಗೆ ಸಸ್ಯ ಶ್ಯಾಮಲೆ ಮತ್ತು ಶ್ರೀರಾಮ ಭಜನಾ ಮಂಡಳಿಯ ವಾರ್ಷಿಕೋತ್ಸವ ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ಪ್ರೌಢಶಾಲೆಯಲ್ಲಿ ನೆರವೇರಿತು.
ಅಧ್ಯಕ್ಷತೆ ವಹಿಸಿದ್ದ ನಿವೃತ್ತ ಮುಖ್ಯಶಿಕ್ಷಕ ಹರಿಶ್ಚಂದ್ರ ಶೆಟ್ಟಿ ಭಜನೆಯಿಂದ ಜನರಿಗಾಗುವ ಲಾಭ, ಇದರಿಂದ ಸಮಾಜದ ಮೇಲಾಗುವ ಪರಿಣಾಮದ ಬಗ್ಗೆ ವಿವರಿಸಿದರು. ಭಜನಾ ಗುರು ಪ್ರಕಾಶ್ ಕುಲಾಲ್ ನಡೂರು ಅವರಿಗೆ ಗುರುವಂದನೆ ಸಲ್ಲಿಸಲಾಯಿತು.
ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ಕ್ರೀಡೆ ಹಾಗೂ ಇತರ ಸ್ಪರ್ಧಾ ವಿಜೇತರನ್ನು ಸನ್ಮಾನಿಸಲಾಯಿತು. ಬಳಿಕ ಹಣ್ಣಿನ ಗಿಡ ವಿತರಿಸಲಾಯಿತು. ಉದ್ಯಮಿಗಳಾದ ರತ್ನಾಕರ ಶೆಟ್ಟಿ, ದಿನೇಶ್ ಕುಮಾರ್, ಲಕ್ಷ್ಮಣ್ ನಾಯ್ಕ, ಚಿಂತಕ ನಾಯರ್‌ಬೆಟ್ಟು ಗಣೇಶ್ ಭಟ್ ಮತ್ತಿತರರು ಉಪಸ್ಥಿತರಿದ್ದರು. ಶ್ರೀರಾಮ ಭಜನಾ ಮಂಡಳಿ ಅಧ್ಯಕ್ಷ ಉದಯ್ ಭಾಸ್ಕರ್ ಶೆಟ್ಟಿ ಪ್ರಸ್ತಾವನೆಗೈದರು. ನಾಗಮ್ಮ ಸ್ವಾಗತಿಸಿದರು. ಸಿಂಚನಾ ವಂದಿಸಿದರು. ಪ್ರೀತಿ ಮತ್ತು ಅನನ್ಯ ನಿರೂಪಿಸಿದರು. ನಮಸ್ತೆ ಭಾರತ್ ಟ್ರಸ್ಟ್ ಪದಾಧಿಕಾರಿಗಳು, ಗ್ರಾಮಸ್ಥರು ಉಪಸ್ಥಿತರಿದ್ದರು.