ಪುಂಡರ ತಾಣವಾಗಿದೆ ಮುದಗಲ್​ ಕೋಟೆ; ಪ್ರಾಚ್ಯವಸ್ತು ಇಲಾಖೆ ಗಮನ ಹರಿಸುತ್ತಾ?

mudagal
Published on

ರಾಯಚೂರು: ಇತಿಹಾಸ ಪ್ರಸಿದ್ಧ ವಿಭಿನ್ನ ಶೈಲಿಯ ಎರಡು ಸುತ್ತಿನ ಮುದಗಲ್ ಕೋಟೆ ಇದೀಗ ನಿರ್ವಹಣೆ ಕೊರತೆಯಿಂದ ಪುಂಡ ಪೋಕರಿಗಳ ಅಡ್ಡಾ ಆಗಿ ಮಾರ್ಪಡುತ್ತಿದೆ.

14ನೇ ಶತಮಾನದಲ್ಲಿ ಬಹುಮನಿ ಸುಲ್ತಾನರು, ವಿಜಯನಗರದ ಅರಸರು, ಕೊನೆಯಲ್ಲಿ ವಿಜಯಪುರದ ಆದಿಲ್ ಶಾಹಿಗಳು ಎಲ್ಲರು ಈ ಕೋಟೆಯನ್ನು ತಮಗೆ ಬೇಕಾದ ರಿತಿ ಮಾರ್ಪಾಡು ಮಾಡಿದ್ದರು. ಇವರ ಆಡಳಿತದಲ್ಲಿ ವಿಭಿನ್ನ ಶೈಲಿಯಲ್ಲಿ ಈ ಮುದಗಲ್​ ಕೋಟೆ ನಿರ್ಮಾಣಗೊಂಡಿತ್ತು. ಸ್ವಾತಂತ್ರ್ಯ ನಂತರದಲ್ಲಿ ಈ ಕೋಟೆಗೆ ಸರಿಯಾದ ರೀತಿಯಲ್ಲಿ ನಿರ್ವಹಣೆ, ಮೇಲುಸ್ತುವಾರಿ ಮುಂತಾದವುಗಳ ಕೊರತೆಯಿಂದ ಮುಳ್ಳುಕಂಟಿ ಬೆಳೆದು ಕೋಟೆ ಕಳೆಗುಂದುತ್ತಿದೆ.

ಈ ಕೋಟೆಯ ದ್ವಾರದ ಬಾಗಿಲು ಭಾಗಶಃ ಮುರಿದಿದ್ದು ಮುಚ್ಚಲು-ತೆರೆಯಲು ಸಾಧ್ಯ ಆಗುತ್ತಿಲ್ಲ. ಕೋಟೆ ಸುತ್ತಲಿನ ಕಂದಕ ಇದೀಗ ಘನತ್ಯಾಜ್ಯ ಹಾಕುವ ಸ್ಥಳವಾಗಿದ್ದು, ಇಲ್ಲಿ ಕೊಳಚೆ ನೀರು ಸಂಗ್ರಹಗೊಂಡು ರೋಗ ಹರಡುವ ತಾಣವಾಗಿ ಬದಲಾಗಿದೆ. ಜತೆಗೆ ಈ ಕೋಟೆಯನ್ನು ಪುಂಡರು ಪೋಕರಿಗಳು ತಮ್ಮ ಅನೈತಿಕ ಚಟುವಟಿಕೆಗಳಿಗಾಗಿ ಬಳಸಿಕೊಳ್ಳುತ್ತಿದ್ದಾರೆ.

ಪ್ರಾಚ್ಯವಸ್ತು ಇಲಾಖೆಯ ನಿರ್ಲಕ್ಷ್ಯದಿಂದ ಐತಿಹಾಸಿಕ ಪ್ರಸಿದ್ಧ ಎರಡು ಸುತ್ತಿನ ಕೋಟೆ ರಕ್ಷಣೆ ಇಲ್ಲದೇ ಜೀರ್ಣಾವಸ್ಥೆಗೆ ತಲುಪುತ್ತಿದೆ. ಇಲ್ಲಿ ಪ್ರಾಚೀನ ಶಿಲಾಶಾಸನಗಳಿದ್ದು ಕೋಟೆಯನ್ನ ರಕ್ಷಿಸಲು ಪ್ರಾಚ್ಯವಸ್ತು ಇಲಾಖೆ ಮುಂದಾಗುವಂತೆ ಸ್ಥಳೀಯರು ಒತ್ತಾಯಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net