ಮುಡಾ ಹಗರಣ: ಕೋರ್ಟ್‌ ತೀರ್ಪಿಗೂ ಮುನ್ನ ರಾಜೀನಾಮೆ ಕೊಟ್ಟರೆ ಮರ್ಯಾದೆ ಉಳಿಯುತ್ತೆ; ಸಿಎಂಗೆ ಯಡಿಯೂರಪ್ಪ ಸಲಹೆ

bsy
Published on

ಶಿವಮೊಗ್ಗ: ಮುಡಾ ಹಗರಣದ ಬಗ್ಗೆ ಹೈಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಿದೆ. ಅವರು ರಾಜೀನಾಮೆ ನೀಡುವ ಪರಿಸ್ಥಿತಿ ಎದುರಾಗುತ್ತದೆ. ತೀರ್ಪು ಬರುವ ಮುನ್ನ ರಾಜೀನಾಮೆ ನೀಡಿದರೆ ಅವರ ಮರ್ಯಾದೆ ಉಳಿಯುತ್ತದೆ ಎಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ. ಮುಡಾ ಪ್ರಕರಣದಲ್ಲಿ ಸಿದ್ದರಾಮಯ್ಯ ಅವರ ತಪ್ಪು ಸಾಭೀತಾಗುತ್ತಿವೆ. ಅವರ ಪದತ್ಯಾಗ ನೂರಕ್ಕೆ ನೂರು ಖಚಿತ. ಅವರು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ ಎಂದರು.‘

ಕರೊನಾ ಅವಧಿಯಲ್ಲಿ ತಮ್ಮ ಸರ್ಕಾರದಲ್ಲಿ ನಡೆದಿದೆ ಎನ್ನಲಾಗುವ ಭ್ರಷ್ಟಾಚಾರ ಆರೋಪದ ಕುರಿತು ಪ್ರತಿಕ್ರಿಯಿಸಿದ ಬಿಎಸ್‌ವೈ, ಯಾವುದೇ ತನಿಖೆ ನಡೆಸಲು ಹಾಗೂ ತೀರ್ಮಾನ ತೆಗೆದುಕೊಳ್ಳಲು ಸರ್ಕಾರಕ್ಕೆ ಅಧಿಕಾರವಿದೆ. ಅವರ ತನಿಖೆ ವಿರುದ್ಧ ನಾವು ಯಾವುದೇ ಹೋರಾಟ ಮಾಡುವುದಿಲ್ಲ. ಅವರು ಯಾರಿಗೆ ಬೇಕಾದರೂ ನೋಟಿಸ್ ನೀಡಲಿ. ತನಿಖೆಯಿಂದ ಸತ್ಯಾಸತ್ಯತೆ ಹೊರಬರಲಿದೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net