ಮುಡಾ ಹಗರಣ: ದೇಸಾಯಿ ಆಯೋಗಕ್ಕೆ ಮಾಹಿತಿ ನೀಡಲಿ: ಗೃಹ ಸಚಿವ ಪರಮೇಶ್ವರ

g p

ಬೆಂಗಳೂರು: ಮುಡಾ ವಿಚಾರದ ಬಗ್ಗೆ ಸಾರ್ವಜನಿಕವಾಗಿ ಹೇಳಿಕೆ ನೀಡಿ ಗೊಂದಲ ಸೃಷ್ಟಿಸುವ ಬದಲು, ಈ ಪ್ರಕರಣದ ವಿಚಾರಣೆಗೆ ರಾಜ್ಯ ಸರ್ಕಾರ ರಚಿಸಿರುವ ಪಿ.ಎನ್​. ದೇಸಾಯಿ ಆಯೋಗಕ್ಕೆ ಮಾಹಿತಿ ನೀಡಲಿ‌ ಎಂದು ಗೃಹ ಸಚಿವ ಪರಮೇಶ್ವರ ಅವರು ಹೇಳಿದರು.

ಇದನ್ನೂ ಓದಿ: ‘ಕಾಂತಾರ ಚಾಪ್ಟರ್ 1′ ಗಾಗಿ ಕಳರಿಪಯಟ್ಟು ಅಭ್ಯಾಸದಲ್ಲಿ ತೊಡಗಿದ ರಿಷಬ್ ಶೆಟ್ಟಿ

ಸದಾಶಿವನಗರದ ತಮ್ಮ ನಿವಾಸದ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಿರೋಧ ಪಕ್ಷದವರು ಪದೇ ಪದೇ ಅನೇಕ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಮುಡಾ ಬಗ್ಗೆ ದೇಸಾಯಿ ಆಯೋಗವು ತನಿಖೆ ಆರಂಭಿಸಿದೆ. ಮುಡಾ ಅಕ್ರಮದ ಬಗ್ಗೆ ಮಾಹಿತಿ ಇದ್ದರೆ ಆಯೋಗಕ್ಕೆ ನೀಡಲಿ ಎಂದರು.

ಸಾರ್ವಜನಿಕವಾಗಿ ಗೊಂದಲ ಉಂಟು ಮಾಡುವ ಹೇಳಿಕೆ ನೀಡುವುದು ಬೇಡ ಎಂದ ಅವರು, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ‌ ಪ್ರತಿಕ್ರಿಯಿಸಲು ಹೋಗುವುದಿಲ್ಲ ಎಂದು ಹೇಳಿದರು.

ಕೋವಿಡ್ ಸಂದರ್ಭದಲ್ಲಿ ನಡೆದ ಹಗರಣಕ್ಕೆ ಸಂಬಂಧಿಸಿದಂತೆ ಜಸ್ಟೀಸ್ ಮೈಕಲ್ ಪೊನ್ನಾ ಅವರ ವರದಿ ಬರುವರೆಗೂ ಏನನ್ನು ಮಾಡಲಾಗುವುದಿಲ್ಲ. ವರದಿಯಲ್ಲಿ ಏನು ಶಿಫಾರಸ್ಸು ಮಾಡುತ್ತಾರೆ ಎಂಬುದನ್ನು ಗಮನಿಸಿ, ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಕ್ರಿಮಿನಲ್ ಪ್ರೊಸಿಡಿಂಗ್ಸ್ ಮಾಡಬೇಕು ಅಂತ ವರದಿಯಲ್ಲಿ ಬಂದರೆ, ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯಪಾಲರು ರಕ್ಷಣೆ ಕೇಳಿದ ಹಿನ್ನೆಲೆಯಲ್ಲಿ ಭದ್ರತೆ ಒದಗಿಸಲಾಗಿದೆ. ಅವರಿಗೆ ಯಾವ ರೀತಿಯ ಬೆದರಿಕೆ ಇದೆ ಎಂಬುದು ನನ್ನ ಗಮನಕ್ಕೆ ಬಂದಿಲ್ಲ. ರಾಜ್ಯಪಾಲರಿಗೆ ಬೆದರಿಕೆ ಇದೆ ಎಂಬ ಸನ್ನಿವೇಶವನ್ನು ಬೆಜಿಪಿಯವರು ಸೃಷ್ಟಿ ಮಾಡಿದ್ದಾರೆ. ಬಿಜೆಪಿಯವರ ಇತ್ತೀಚಿನ ಬೆಳವಣಿಗೆಗಳೇ ಕಾರಣ ಎಂದು ಹೇಳಿದರು.

ಜೈಲಿಂದಲೇ ಭದ್ರಾವತಿ ಶಾಸಕ ಸಂಗಮೇಶ್​ ಪುತ್ರನ ಹತ್ಯೆಗೆ ಸ್ಕೆಚ್‌

Share This Article

ಅಧಿಕ ಬಿಪಿ ಇರುವವರು ಯಾವ ಆಹಾರದಿಂದ ದೂರವಿರಬೇಕು ಎಂದು ನಿಮಗೆ ತಿಳಿದಿದೆಯೇ? high blood pressure

high blood pressure: ಇತ್ತೀಚಿನ ದಿನಗಳಲ್ಲಿ ಹೆಚ್ಚಿನವರು ಎದುರಿಸುತ್ತಿರುವ ಸಮಸ್ಯೆಗಳಲ್ಲಿ ಬಿಪಿ ಸಮಸ್ಯೆಯೂ ಒಂದು. ಅಧಿಕ…

ಶಿವನ ಕೃಪೆಗೆ ಪಾತ್ರರಾಗಲು ಈ ಒಂದು ಕೆಲಸ ಮಾಡಬೇಕು! Lord Shiva Worship

Lord Shiva Worship: ಪರಮೇಶ್ವರ ಹಿಂದೂಗಳು ಹೆಚ್ಚು ಪೂಜಿಸುವ ದೇವರುಗಳಲ್ಲಿ ಒಂದಾಗಿದೆ. ಭಗವಂತನನ್ನು ಒಂದೊಂದು ಸ್ಥಳದಲ್ಲಿ…

ಈ ದಿನಾಂಕಗಳಂದು ಜನಿಸಿದ ಮಹಿಳೆಯರು ತಮ್ಮ ಗಂಡನಿಗೆ ಅದೃಷ್ಟ ಹೊತ್ತು ತರುತ್ತಾರೆ! Numerology

Numerology : ಜ್ಯೋತಿಷ್ಯದಲ್ಲಿ ಅನೇಕ ಬಗೆಗಳಿರುವುದು ಎಲ್ಲರಿಗೂ ತಿಳಿದಿದೆ. ಅವುಗಳಲ್ಲಿ ಸಂಖ್ಯಾಶಾಸ್ತ್ರವೂ ಒಂದು. ಸಂಖ್ಯೆಗಳು ನಮ್ಮ…