ಧೋನಿ ಈಗ ಇಸ್ಪೀಟು ಆಟದ ಪ್ರಚಾರ ರಾಯಭಾರಿ

dhoni poke2
Published on

ಬೆಂಗಳೂರು: ಟೀಮ್​ ಇಂಡಿಯಾ ಮಾಜಿ ಎಂಎಸ್​ ಧೋನಿ ಈಗಾಗಲೆ ಫ್ಯಾಂಟಸಿ ಸ್ಪೋರ್ಟ್ಸ್​​ ಆ್ಯಪ್​ ಡ್ರೀಮ್​11ನ ಪ್ರಚಾರ ರಾಯಭಾರಿಯಾಗಿ ಸಾಕಷ್ಟು ಗಮನ ಸೆಳೆದಿದ್ದಾರೆ. ಇದೀಗ ಅವರು ಆನ್​ಲೈನ್​ ಇಸ್ಪೀಟು ಆಟದ ಪೋಕರ್​ ಸ್ಟಾರ್ಸ್​ನ ಪ್ರಚಾರ ರಾಯಭಾರಿಯಾಗಿ ಕಾಣಿಸಿಕೊಂಡಿದ್ದಾರೆ.

'ಐಯಾಮ್​ ಇನ್​' ಎಂಬ ಪೋಕರ್​ ಸ್ಟಾರ್ಸ್​ನ ಭಾರತ ಪ್ರಚಾರ ಅಭಿಯಾನದ ಜಾಹೀರಾತಿನಲ್ಲಿ ಧೋನಿ ಕಾಣಿಸಿಕೊಂಡಿದ್ದು, ಆನ್​ಲೈನ್​ ಮೂಲಕ ಇಸ್ಪೀಟು ಆಟವನ್ನು ಆಡಿ ಗಮನ ಸೆಳೆದಿದ್ದಾರೆ. 'ಪೋಕರ್​ ಆಟದ ಸ್ಪರ್ಧಾತ್ಮಕತೆ ಮತ್ತು ಒತ್ತಡವನ್ನು ನಾನು ಆನಂದಿಸಿದ್ದೇನೆ. ಇದು ಕ್ರಿಕೆಟ್​ ಮತ್ತು ಪೋಕರ್​ ಆಟದಲ್ಲಿ ನಾನು ಕಂಡಿರುವ ಸಾಮ್ಯತೆಯಾಗಿದೆ. ಆನ್​ಲೈನ್​ ಪೋಕರ್​ ಆಟದ ವಿಷಯದಲ್ಲಿ ಕಳೆದ ಕೆಲ ವರ್ಷಗಳಲ್ಲಿ ಭಾರತದ ಜನರ ಮನಸ್ಥಿತಿ ಬದಲಾಗಿದೆ' ಎಂದು ಧೋನಿ ಹೇಳಿದ್ದಾರೆ. ಅವರು ಕಳೆದ ಏಪ್ರಿಲ್​ನಲ್ಲೇ ಪೋಕರ್​ಸ್ಟಾರ್ಸ್​ನ ಪ್ರಚಾರ ರಾಯಭಾರಿಯಾಗಿ ನೇಮಕಗೊಂಡಿದ್ದರೂ, ಅವರು ಕಾಣಿಸಿಕೊಂಡಿರುವ ಜಾಹೀರಾತು ಇದೀಗ ಪ್ರಸಾರ ಕಾಣುತ್ತಿದೆ.

'ಇತರ ಎಲ್ಲ ಕ್ರೀಡೆಗಳಂತೆ ಆನ್​ಲೈನ್​ ಪೋಕರ್​ ಆಟದಲ್ಲೂ ಕೌಶಲ ಅಗತ್ಯವಾಗಿದೆ. ತಂತ್ರಗಾರಿಕೆ ಮತ್ತು ಜವಾಬ್ದಾರಿಯುತವಾಗಿ ಆಡಬೇಕಾದ ಆಟವಿದು. ಇದರಲ್ಲಿನ ಆನಂದವನ್ನೂ ನಿಧಾನವಾಗಿ ಮನಗಾಣಲಿದ್ದೀರಿ. ಸುಲಭವಾಗಿ ಕಲಿತುಕೊಳ್ಳಬಹುದು. ಆದರೆ ಇದರಲ್ಲಿನ ಕ್ಲಿಷ್ಟತೆಗಳೂ ಸಾಕಷ್ಟಿವೆ. ಹೊಸ ಭರವಸೆಯೊಂದಿಗೆ ಆನ್​ಲೈನ್​ ಪೋಕರ್​ ಆಟವನ್ನು ದೊಡ್ಡ ಜನಸಂಖ್ಯೆಗೆ ತಲುಪಿಸುತ್ತಿದ್ದೇವೆ' ಎಂದು 39 ವರ್ಷದ ಧೋನಿ ಆನ್​ಲೈನ್​ ಪೋಕರ್​ ಆಟದ ಬಗ್ಗೆ ವಿವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net