More

    VIDEO| ಕೇಕ್​ ತಿನ್ನಿಸುವಾಗ ನಟ ಯೋಗಿ ಬಾಬುರನ್ನು ಕಿಚಾಯಿಸಿದ ಧೋನಿ

    ಚೆನ್ನೈ: ಭಾರತ ಕ್ರಿಕೆಟ್​ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್​ ಧೋನಿ ದೇಶಾದ್ಯಂತ ಅಪಾರ ಅಭಿಮಾನಿಗಳನ್ನು ಹೊಂದಿದ್ದು, ತಮಿಳುನಾಡಿನಲ್ಲಿ ತುಸು ಹೆಚ್ಚು ಎಂದು ಹೇಳಬಹುದು. ಐಪಿಎಲ್​ನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡವನ್ನು ಮುನ್ನಡೆಸುವ ಅವರಿಗೆ ತಮಿಳುನಾಡಿನ ಜನತೆ ತಲಾ ಎಂದು ಕರೆಯುವ ಮೂಲಕ ತಮ್ಮ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ.

    ಮಹೇಂದ್ರ ಸಿಂಗ್​ ಧೋನಿ ದಂಪತಿಗಳು ನಿರ್ಮಿಸಿರುವ ಚೊಚ್ಚಲ ತಮಿಳು ಸಿನಿಮಾ LGM (Let’s Get Married) ಚಿತ್ರ ಧ್ವನಿಸಾಂದ್ರಿಕೆ ಹಾಗೂ ಟ್ರೇಲರ್​ಅನ್ನು ಜುಲೈ 10ರಂದು ಚೆನ್ನೈನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಬಿಡುಗಡೆ ಮಾಡಲಾಯಿತು.

    ಕೇಕ್​ ಕತ್ತಿರುಸವ ಮೂಲಕ ಚಿತ್ರದ ಆಡಿಯೋವನ್ನು ಧೋನಿ ಬಿಡುಗಡೆ ಮಾಡಿದರು. ಕೇಕ್​ ಕತ್ತರಿಸುವ ವೇಳೆ ನಟ ಯೋಗಿ ಬಾಬು ಹಾಗೂ ಧೋನಿ ನಡುವೆ ತಮಾಷೆಯ ಸನ್ನಿವೇಶ ಒಂದು ನಡೆದಿದ್ದು, ಇದರ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

    ಇದನ್ನೂ ಓದಿ: VIDEO| ಹುಲಿ ಬಂದರೂ ಕಾಯಕವೇ ಕೈಲಾಸ ಎಂದ ರೈತ

    ಕೇಕ್​ ಕತ್ತರಿಸಿದ ಬಳಿಕ ಧೋನಿ ಯೋಗಿಬಾಬು ಅದರ ಮೊದಲ ಪೀಸ್​ ತಿನ್ನಿಸುತ್ತಾರ ಎಂದು ಎಲ್ಲರು ಭಾವಿಸಿದ್ದರು. ಆದರೆ, ಅದನ್ನು ಧೋನಿ ಅವರೇ ತಿಂದಿದ್ದರು. ಇದನ್ನು ಗಮನಿಸಿದ ಯೋಗಿ ಬಾಬು ಧೋನಿಯತ್ತ ಹತಾಶೆಯಿಂದ ನೋಡುತ್ತಾರೆ. ಈ ವೇಳೆ ಯೋಗಿ ಬಾಬುರನ್ನು ನೋಡಿದ ಧೋನಿ ನಗಲು ಶುರು ಮಾಡಿದ್ದು, ಇದನ್ನು ಗಮನಿಸಿ ಬೇರೆಯವರು ಮೊಗದಲ್ಲಿ ಮಂದಹಾಸ ಮೂಡಿದೆ.

    ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದ್ದು, ನೆಟ್ಟಿಗರು ಇದು ಧೋನಿಯವರ ಹ್ಯೂಮರ್ ಸೈಡ್​ ಎಂದು ಕೆಲವರು ಹೇಳಿದ್ದರೆ. ಮತ್ತಷ್ಟು ಜನ ಕ್ಯಾಪ್ಟನ್​ ಕೂಲ್​ ಎಲ್ಲಿದ್ದರು ನಗೆ ಬೀರುತ್ತಾರೆ ಎಂದು ಮತ್ತಷ್ಟು ಜನ ಕಮೆಂಟ್​ ಮಾಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts