

ರಾಂಚಿ: ಕಳೆದ ಒಂದು ವರ್ಷದಿಂದ ಕ್ರಿಕೆಟ್ ಜೀವನದಿಂದಲೇ ದೂರವಿರುವ ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿ, ಮೊನ್ನೆಯಷ್ಟೇ ತಮ್ಮ 39ನೇ ಹುಟ್ಟುಹಬ್ಬ ಆಚರಿಸಿಕೊಂಡರು. ಇಡೀ ವಿಶ್ವ ಕ್ರಿಕೆಟ್ ವಲಯವೇ ಮಾಜಿ ನಾಯಕನಿಗೆ ಶುಭಾಶಯಗಳ ಮಹಾಪೂರವನ್ನೇ ಹರಿಸಿತ್ತು. ಜಾರ್ಖಂಡ್ ರಾಜಧಾನಿ ರಾಂಚಿ ನಗರದ ಹೊರವಲಯದಲ್ಲಿರುವ ತಮ್ಮ ಫಾರ್ಮ್ ಹೌಸ್ ನಲ್ಲಿ ಧೋನಿ ತಮ್ಮ ಕುಟುಂಬ ಸದಸ್ಯರು ಹಾಗೂ ಆಪ್ತರೊಂದಿಗೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡರು. ಸ್ನೇಹಿತರ ವಲಯದಲ್ಲಿ ಮಹಿ ಎಂದು ಕರೆಸಿಕೊಳ್ಳುವ ಧೋನಿ ಹುಟ್ಟುಹಬ್ಬದ ಫೋಟೋಸ್ ಇದೀಗ ಸಾಮಾಜಿಕ ಜಾಳತಾಣಗಳಲ್ಲಿ ವೈರಲ್ ಆಗಿವೆ.
ಫಾಮ್ರ್ನಲ್ಲೇ ಕೃಷ್ಟಿ ಮಾಡಿಕೊಂಡಿರುವ ಧೋನಿ, ಇತ್ತೀಚೆಗಷ್ಟೇ ಸಾವಯವ ಕೃಷಿ ಬಗ್ಗೆ ಹೆಚ್ಚು ಆಸಕ್ತಿ ಹೊಂದಿರುವುದಾಗಿ ಹೇಳಿಕೊಂಡಿದ್ದರು. ಲಾಕ್ಡೌನ್ನಿಂದಾಗಿ ಪತ್ನಿ ಸಾ ಸಿಂಗ್, ಮಗಳು ಝೀವಾ ಜತೆಯಲ್ಲಿರುವ ಧೋನಿ ನಿರೀಕ್ಷೆಯಂತೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡರು. ಹಾರ್ದಿಕ್ ಹಾಗೂ ಕೃನಾಲ್ ಪಾಂಡ್ಯ ಸಹೋದರರು ಧೋನಿಗೆ ಕುತೂಹಲ ನೀಡಲು ರ್ಬತ್ಡೇ ವಿಷ್ ಮಾಡುವ ಸಲುವಾಗಿ ರಾಂಚಿಗೇ ಹೋಗಿದ್ದರು. ಪತ್ನಿ ಸಾಕ್ಷಿ ಸಿಂಗ್ ಧೋನಿ ಹುಟ್ಟುಹಬ್ಬದಂದು ಧೋನಿಯ ಹಲವು ಫೋಟೋಗಳನ್ನು ತಮ್ಮ ಇನ್ಸ್ಟಾಗ್ರಾಂ ಪುಟದಲ್ಲಿ ಪ್ರಕಟಿಸಿದ್ದರು.
ಧೋನಿ ಜತೆಗಿರುವಾಗ ಕ್ರಿಕೆಟ್ ವಿಷಯ ಮಾತನಾಡುವುದಿಲ್ಲ, ಅವರಿಗೆ ಸದ್ಯ ಕ್ರಿಕೆಟ್ನಿಂದ ನಿವೃತ್ತಿಯಾಗುವ ಯೋಚನೆಯೂ ಇಲ್ಲ ಎಂದು ಬಾಲ್ಯ ಗೆಳೆಯ ಹಾಗೂ ಮ್ಯಾನೇಜರ್ ದಿವಾಕರ್ ಇತ್ತೀಚೆಗಷ್ಟೇ ಹೇಳಿಕೊಂಡಿದ್ದರು. ಜುಲೈ 10ಕ್ಕೆ ಧೋನಿ ಕ್ರಿಕೆಟ್ ಆಡಿ ಬರೋಬ್ಬರಿ ಒಂದು ವರ್ಷ ಕಳೆಯಿತು. 2019ರ ಏಕದಿನ ವಿಶ್ವಕಪ್ ಸೆಮಿಫೈನಲ್ ಪಂದ್ಯವೇ ಧೋನಿ ಕಡೇ ಪಂದ್ಯವಾಗಿದೆ. ಐಪಿಎಲ್ ಸಿದ್ಧತೆಗಾಗಿ ಒಂದು ತಿಂಗಳು ಮೊದಲೇ ಚೆನ್ನೈಗೆ ಆಗಮಿಸಿದರೂ ಕರೊನಾ ವೈರಸ್ ಭೀತಿಯಿಂದ ಲಾಕ್ಡೌನ್ ಘೋಷಣೆಯಾದ ಹಿನ್ನೆಲೆಯಲ್ಲಿ ತವರಿಗೆ ವಾಪಸಾಗಿದ್ದರು.