ಮೃಣಾಲ್ ಠಾಕೂರ್-ಸುಮಂತ್ ಮದುವೆ ವಿಚಾರ; ಕಡೆಗೂ ಮೌನ ಮುರಿದ 'ಸೀತಾ ಮಹಾಲಕ್ಷ್ಮೀ' ಆಪ್ತ | Mrunal Thakur

ವಿಜಯವಾಣಿ - 2025-05-11T091625.923
Published on

Mrunal Thakur: ಕಳೆದ ಕೆಲವು ದಿನಗಳಿಂದ ಟಾಲಿವುಡ್​ ಬ್ಯೂಟಿ, ನಟಿ ಮೃಣಾಲ್ ಠಾಕೂರ್ ಮತ್ತು ನಟ ಸುಮಂತ್ ಮದುವೆ ವಿಚಾರ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಸದ್ದು ಮಾಡುತ್ತಿದೆ. ಇವರಿಬ್ಬರ ವಿವಾಹ ಬಗ್ಗೆ ಹಲವಾರು ವದಂತಿಗಳು ಟಾಲಿವುಡ್​ ಮಂದಿಯಲ್ಲಿ ತೀರ ಚರ್ಚೆಯನ್ನು ಹುಟ್ಟುಹಾಕಿವೆ. ನಿರಂತರ ಸುದ್ದಿ, ವದಂತಿಗಳ ಬೆನ್ನಲ್ಲೇ ಇದೀಗ ಮೃಣಾಲ್​ ಬದಲಿಗೆ ಸುಮಂತ್​ ಪ್ರತಿಕ್ರಿಯಿಸಿದ್ದು, ಅಸಲಿಗೆ ವದಂತಿಗಳು ಸತ್ಯವೇ ಎಂಬುದನ್ನು ಸ್ಪಷ್ಟಪಡಿಸಿದ್ದಾರೆ.

ಇದೇ ಮೇ.15ರಂದು ನೇರವಾಗಿ ಒಟಿಟಿಯಲ್ಲಿ ತೆರೆ ಕಾಣಲಿರುವ 'ಅನಗನಾಗ' ಚಿತ್ರದ ಪ್ರಚಾರ ಕಾರ್ಯಗಳಲ್ಲಿ ಸಖತ್ ಬಿಜಿಯಾಗಿರುವ ನಟ ಸುಮಂತ್, ಮೃಣಾಲ್ ಠಾಕೂರ್ ಜೊತೆಗೆ ತೆಗೆಸಿಕೊಂಡ ಫೋಟೋವೊಂದು ವೈರಲ್ ಆಯಿತು. ಇಬ್ಬರೂ ಬಹಳ ಆತ್ಮೀಯವಾಗಿ ಇರುವುದನ್ನು ಕಂಡ ನೆಟ್ಟಿಗರು ಹಾಗೂ ಅಭಿಮಾನಿಗಳು ಇವರಿಬ್ಬರು ಶೀಘ್ರವೇ ಹಸೆಮಣೆ ಏರಲಿದ್ದಾರೆ ಎಂದು ವದಂತಿಗಳನ್ನು ಹರಡಿದರು. ವದಂತಿಗಳಿಗೆ ಇಬ್ಬರೂ ಪ್ರತಿಕ್ರಿಯಿಸದೆ ಮೌನಕ್ಕೆ ಜಾರಿದ ಹಿನ್ನೆಲೆ ಇದು ನಿಜವೇ ಎಂದು ಹೇಳಲಾಯಿತು. ಆದ್ರೆ, ಅಂತಿಮವಾಗಿ ಸುಮಂತ್ ಇದಕ್ಕೆಲ್ಲ ಈಗ ತೆರೆ ಎಳೆದಿದ್ದಾರೆ.

ಅಕ್ಕಿನೇನಿ ಕುಟುಂಬದಲ್ಲಿ ಮತ್ತೊಂದು ಮದುವೆ ನಡೆಯಲಿದೆ. ಸುಮಂತ್ ಶೀಘ್ರದಲ್ಲೇ ನಾಯಕಿ ಮೃಣಾಲ್ ಠಾಕೂರ್​ರನ್ನು ಮದುವೆಯಾಗಲಿದ್ದಾರೆ ಎಂಬ ವರದಿಗಳಿಗೆ ಪ್ರತಿಕ್ರಿಯಿಸಿದ ಸುಮಂತ್​, "ನನ್ನ ಮೃಣಾಲ್ ನಡುವೆ ಆ ರೀತಿ ಏನಿಲ್ಲ. ಮದುವೆ ಸಂಬಂಧ ಅಥವಾ ಪ್ರಸ್ತಾಪ ನಡೆದಿಲ್ಲ. ಕೆಲವು ದಿನಗಳ ಹಿಂದೆ ಸಿನಿಮಾದ ಸಮಯದಲ್ಲಿ ತೆಗೆದ ಫೋಟೋವೊಂದು ವೈರಲ್ ಆಗುತ್ತಿದೆ ಅಷ್ಟೇ. ಆ ಸಂದರ್ಭದಲ್ಲಿ ಅವರನ್ನು ಭೇಟಿ ಆಗಿದ್ದು ಬಿಟ್ಟರೆ, ಇನ್ನೆಲ್ಲೂ ನಾನು ಅವರನ್ನು ಭೇಟಿಯಾಗಿಲ್ಲ" ಎಂದು ಸ್ಪಷ್ಟನೆ ನೀಡಿದ್ದಾರೆ,(ಏಜೆನ್ಸೀಸ್).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net